ರಾಜಕೀಯ ಸುದ್ದಿಗಳು

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಖುಷಿ ತಂದಿದೆ-ಮಧು ಬಂಗಾರಪ್ಪ

ಸುದ್ದಿಲೈವ್/ಶಿವಮೊಗ್ಗ

ಏ.10 ರಂದು ಪ್ರಕಟವಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಖುಷಿ ತಂದಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿಕ್ಷಣ ಸಚಿವನಾದ ಆರಂಭದಲ್ಲಿ ಟೀಕೆ ಟಿಪ್ಪಣಿ ಕೇಳಿ ಬಂದಿತ್ತು. ಶಿಕ್ಷ ಸಚಿವರಾದವರಿ ಶಿಕ್ಷಕನಾಗಲು ಸಾಧ್ಯವಿಲ್ಲ. ಆದರೆ ಒಂದು ಸಂಸ್ಥೆಯ ವ್ಯವಸ್ಥಾಪಕನಾಗಿ ಕೆಲಸ ಮಾಡಿರುವೆ. ಫಲಿತಾಂಶದಲ್ಲಿ ಕಳೆದ ಬಾರಿಗಿಂತ 6% ಹೆಚ್ಚಾಗಿದೆ.

ಪಕ್ಷದ ಗ್ಯಾರೆಂಟಿಯ ಪಾಲುದಾರನಾಗಿರುವೆ. ಅದರಂತೆ ಸಿಎಂ ಸಿದ್ದರಾಮಯ್ಯನವರ ವಿಶ್ವಾಸ ಉಳಿಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿರುವೆ. ಕಲ್ಯಾಣ ಕರ್ನಾಟಕದಲ್ಲಿಯೂ ವಿದ್ಯಾರ್ ಫಲಿತಾಂಶ ಖುಷಿ ನೀಡಿದೆ. ಮುಂದಿನ ದಿನಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಉತ್ತಮವಾಗಿ ಬರಲಿದೆ ಎಂದರು.

ಮೂರು ಪರೀಕ್ಷೆ ಬರೆಯಲು ಅವಕಾಶ ನೀಡಿದಾಗ ಮತ್ತೆ ಟೀಕೆ ಟಿಪ್ಪಣಿ ಬಂದಿತ್ತು. ಏ.28 ಅಥವಾ 29ರಂದು ಫಲಿತಾಂಶ ಬರೆಯಲಿದೆ.  ಮತ್ತೊಮ್ಮೆ ಪರೀಕ್ಷೆಯಲ್ಲಿ ನ ಬರೆಯಲು ಅವಕಾಶವಿದೆ. ಓರ್ವ ಸರ್ಕಾರಿ ಶಾಲೆ ಮಕ್ಕಳ ಉತ್ತಮ ಫಲಿತಾಂಶಕ್ಕೆ ಮೂರು ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ ಎಂದರು.

ಪರೀಕ್ಷೆಯಲ್ಲಿ ಸಿಸಿ ಟಿವಿ ಅಳವಡಿಕೆಗೂ ಕೆಲ ರಾಜಕಾರಣಗಳು ಮಾತನಾಡಿದರು. ಆದರೆ ಮಾಧ್ಯಮಗಳು ಉತ್ತಮ ವಿಮರ್ಶೆ ನೀಡಿದವು. ಇದಕ್ಕೆ ಸಿದ್ದರಾಮಯ್ಯ ಸರ್ಕಾರಕ್ಕೆ ಅಭಿನಂದಿಸುವೆ ಎಂದರು.

ಶಿಕ್ಷಣದ ವಿಷಯದಲ್ಲೂ ಕೇಂದ್ರ ಸರ್ಕಾರ ಮೋಸ ಮಾಡಿದೆ. 1.54 ಲಕ್ಷ ಕೋಟಿ ಹಣದ ಬಾಕಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೂ ಬರಬೇಕಿದೆ. 1800 ಕೋಟಿ ಹಣ ಕೇಂದ್ರ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಬಾಕಿ ಉಳಿಸಿಕೊಂಡಿರುವುದಾಗಿ ಗರಂ ಆದರು.

ಶಿಕ್ಷಣ ವಿಷಯದಲ್ಲಿ ಖಾಸಗಿ ಶಿಕ್ಷಣ ಸಂಘದವರು ಕೋರ್ಟ್ ಗೆ ಹೋದವರು. ಮುಂದಿನ ಬೋರ್ಡ್ ಪರೀಕ್ಷೆ ಬರೆಯಲು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಹೇಳಿದೆ. ಆದರೆ ಯಾವುದೇ ಸರ್ಕಾರಿ ಮೆಕಾನಿಸಂ‌ ಬಗ್ಗೆ ನ್ಯಾಯಾಲಯ ಮಾತನಾಡಿಲ್ಲ ಎಂದರು.

Related Articles

Leave a Reply

Your email address will not be published. Required fields are marked *

Back to top button