ರಾಜಕೀಯ ಸುದ್ದಿಗಳು

ಮುಗಿಯದ ಅರಣ್ಯ ವಿದ್ಯಾರ್ಥಿಗಳ ಗೋಳು

ಸುದ್ದಿಲೈವ್/ಶಿವಮೊಗ್ಗ

ಅರಣ್ಯ ಇಲಾಖೆಯ ಹುದ್ದೆಗಳಾದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪವಲಯ ಅರಣ್ಯಾಧಿಕಾರಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಅರಣ್ಯಶಾಸ್ತ್ರವನ್ನೇ ವಿದ್ಯಾರ್ಥಿಯನ್ಬಾಗಿ ಹುದ್ದೆ ನೀಡಬೇಕು ಎಂಬ ಕಾನೂನಿದ್ದರು ವಿದ್ಯಾರ್ಥಿಗಳಿಗೆ ಅನ್ಯಾವಾಗಿದೆ ಎಂದು ಕೆಳದಿ ಶಿವಪ್ಪನಾಯಕ ತೋಟಗಾರಿಕೆ ಮತ್ತು ಕೃಷಿ ವಿಶ್ವವಿದ್ಯಾಲಯದ ಇರುವಕ್ಕಿ ಬಿಎಸ್ ಸಿ ಅರಣ್ಯ ವಿದ್ಯಾರ್ಥಿಗಳು ಸುದ್ದಿಗೋಷ್ಠಿ ನಡೆಸಿದರು.

3444 ಗಂಟೆ ಓದಿರುತ್ತೇವೆ. 302 ಆರ್ಇಕಲ್ ಪ್ರಕಾರ 301 ಅರಣ್ಯ ಇಲಾಖೆಗೆ ಸಂಬಂಧಪಟ್ಟ ಓದಿರುವ ವಿದ್ಯಾರ್ಥಿಗಳಿಗೆ ಹುದ್ದೆ ನೀಡಬೇಕು ಎಂಬ ನಿಯಮವನ್ನ ಸರ್ಕಾರ ಕೈಬಿಟ್ಟಿರುವುದರಿಂದ ಈ ಸಮಸ್ಯೆ ಉದ್ಭವಿಸಿದೆ ಎಂದು ದೂರಿದರು.‌

ತರಬೇತಿ ಪಡೆಯದೆ ಇರುವ ಪದವೀಧರರನ್ನೂ ಈ ಹುದ್ದೆಗೆ ಸೇರಿಸಿಕೊಳ್ಳಲಾಗುತ್ತಿದೆ. ಅರಣ್ಯ ಇಲಾಖೆಯಲ್ಲಿ ತಂತ್ರಜ್ಞಾನ ಅಭ್ಯರ್ಥಿಗಳು ಈ ಅರಣ್ಯ ಇಲಾಖೆಯವರಿಂದಲೇ ತೆಗೆದುಕೊಳ್ಳಬೇಕು. ಅರಣ್ಯ ಪದವೀಧರರು ಇಂಜಿನಿಯರಿಂಗ್ ತರಬೇತಿಯನ್ನೂ ಹೊಂದಿ 64 ವಿಷಯಗಳನ್ನ ನಾವು ಅಭ್ಯಾಸಿಸುರುತ್ತೇವೆ. 1200 2018 ರಿಂದ ಇಲ್ಲಿಯರೆಗೆ 1200 ಕ್ಕೂ ಹೆಚ್ಚು ಪದವೀಧರರು ಹುದ್ದೆಗಳ ಭರ್ತಿಗಾಗಿ ಕಾಯುತ್ತಿದ್ದಾರೆ.

3226 ಹುದ್ದೆಗಳಿವೆ ಪ್ರಮಾಣಾನುಪಾತ ಅರಣ್ಯ ಅಧಿಕಾರಿಗಳನ್ನ ತೆಗೆದುಕೊಳ್ಳುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಶ್ರೀನಿಧಿ, ಭೂಮಿಕಾ ರಾಕೇಶ್, ನಾಜ್ಮಿ, ಅನಿಲ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/9435

Related Articles

Leave a Reply

Your email address will not be published. Required fields are marked *

Back to top button