ಸ್ಥಳೀಯ ಸುದ್ದಿಗಳು

ವಿಜೃಂಭಣೆಯ ಗಣೇಶೋತ್ಸವ ನಡೆದಿದೆ, ಹಾಗೆಯೇ ಈದ್ ಮೆರವಣಿಗೆಯೂ ಚೆನ್ನಾಗಿ ನಡೆಯಲಿ-ಶಾಸಕ ಚೆನ್ನಬಸಪ್ಪ

ಸುದ್ದಿಲೈವ್/ಶಿವಮೊಗ್ಗ

79 ನೇ ಹಿಂದೂ ಮಹಾಸಭಾ  ಗಣಪತಿ ವಿಸರ್ಜನಾ ಮೆರವಣಿಗೆ(ರಾಜಬೀದಿ ಉತ್ಸವ) ವಿಜೃಂಭಣೆಯಾಗಿ ನಡೆದಿದ್ದು, ಮೆರವಣಿಗೆಯ ಯಶಸ್ವಿಗೆ ಕಾರಣರಾದ ಶಿವಮೊಗ್ಗದ ಜನತೆಗೆ  ಶಾಸಕ ಚೆನ್ನಬಸಪ್ಪ ಕೃತಜ್ಞತೆ ಸಲ್ಲಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ‌ ಕಾರ್ಯಕ್ರಮ ವರ್ಷದಿಂದ  ದಿನಕ್ಕೆ ವೈಭವವಾಗಿ ನಡೆದುಕೊಂಡು ಬಂದಿದೆ. ಗಣಪತಿ ಉತ್ಸವ ಇತಿಹಾಸ ನಿರ್ಮಿಸಲು ಹೊರಟಿದೆ. ಇಡೀ ನಗರ ಕೇಸರಿಮಯವಾಗಿತ್ತು. ಕೇಸರಿ ಹಿಂದೂ ಅಲಂಕಾರ ಸಮಿತಿ ಅಚ್ಚುಕಟ್ಟಾಗಿ ಅಲಂಕಾರವನ್ನ ನಿರ್ಮಿಸಿದೆ. ಮಾರುಕಟ್ಟೆಯ ಹೂವಿನ ವ್ಯಾಪಾರಸ್ಥರು ವಿಜೃಂಭಣೆಗೆ ಶಕ್ತಿ ನೀಡಿದ್ದಾರೆ ಎಂದರು.

ಲಕ್ಷಾಂತರ ಜನ ಈ ವೈಭವದ ಮೆರವಣಿಗೆಯಲ್ಲಿ  ಪಾಲ್ಗೊಂಡಿದ್ದಾರೆ. ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಿರುವುದು ಬೆಕ್ಕಿನ ಕಲ್ಮಠದ  ಡಾ.ಮಲ್ಲಿಕಾರ್ಜುನ ಮುರುಘ ಸ್ವಾಮಿಗಳು ಚಾಲನೆ ನೀಡಿದರು. ಅವರ ಆಶೀರ್ವಾದ ಮತ್ತು ಆರೈಕೆಯಿಂದ ಕಾರ್ಯಕ್ರಮ ಯಶಸ್ವಿಯಾಗಿದೆ. ಆರ್ ಎಸ್ ನ ಪಟ್ಟಾಭಿರಾಮ ಅವರ ಪಾಲ್ಗೊಳ್ಳುವಿಕೆ. ರಾಜಕಾರಣಿಗಳ ಪಾಲ್ಗೊಂಡಿರುವುದಕ್ಕೆ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.

ರಸ್ತೆಯ ಇಕ್ಕೆಲಗಳಲ್ಲಿ ಪಾನೀಯ ವ್ಯವಸ್ಥೆ,  ಭೋಜನದ ವ್ಯವಸ್ಥೆ, ಮಜ್ಜಿಗೆ ವ್ಯವಸ್ಥೆ ಮಾಡಿರುವುದು ಅವಶ್ಯಕತೆಯನ್ನ ಅರಿತು ಮಾಡಲಾಗಿದೆ. ಯಾರೂ ಹಸಿವಿನಿಂದ ಹೋಗಬಾರದು ಎಂಬುದು ಉದ್ದೇಶವಾಗಿತ್ತು. ಇವೆಲ್ಲದರ ಸಹಕಾರ ವೈಭವಕ್ಕೆ  ಇಮ್ಮಡಿ ಹೆಚ್ಚಿಸಿದೆ ಎಂದರು.‌

ಗೋಪಿ ವೃತ್ತದಲ್ಲಿ ಶಿವಮೊಗ್ಗ ಗಣಪತಿ ತಂಡ ಎಂದು ರಚಿಸಿಕೊಂಡು ಯುವಕರಿಗಾಗಿ ಮಾತ್ರವಲ್ಲದೆ ಉತ್ಸವದಲ್ಲಿ ಪಾಲ್ಗೊಂಡವರಿಗೆ ರೋಮಾಂಚನಗೊಳಿಸುವ ಉದ್ದೇಶದಿಂದ ಎಲ್ ಇಡಿ ಲೈಟ್ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಡಳಿತ ಮೆರವಣಿಗೆಯಲ್ಲಿ ಭಾಗಿಯಾದವರಿಗೆ  ರಕ್ಷಣೆ ನೀಡಿರುವುದು ಸಹ ಮೆರವಣಿಗೆ ಯಶಸ್ವಿಗೆ ಕಾರಣವಾಗಿದೆ. ಡಿಸಿ ಮತ್ತು ಎಸ್ಪಿಯವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಶಾಸಕರು ತಿಳಿಸಿದರು.

ಬಸವೇಶ್ವರ ದೇವಸ್ಥಾನದಲ್ಲಿ ಕಾಂಗ್ರೆಸ್ ಅಧ್ಯಕ್ಷರಾದ ಸುಂದರೇಶ್ ಮತ್ತು ಜೆಡಿಎಸ್ ನ ಪ್ರಸನ್ನ ಕುಮಾರ್ ಅನ್ನಸಂತರ್ಪಣೆ ಸಲ್ಲಿಸಿದರು. ರಾಜಕಾರಣಿಗಳು ಈ ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದ್ದಾರೆ. ಸಣ್ಣ ಸಣ್ಣ ಮಕ್ಕಳ ಸಮೇತ ಕುಟುಂಬದವರ ಪಾಲ್ಗೊಳ್ಳುವಿಕೆ ಮತ್ತು‌ ವಿದ್ಯಾರ್ಥಿಗಳು‌ಪಾಲ್ಗೊಂಡಿದ್ದು ವೈಭವಕತೆಗೆ ಶಕ್ತಿ ತುಂಬಿದೆ ಎಂದರು.

ಅಪೇಕ್ಷೆಗೆ ತಕ್ಕಂತೆ ರಾಜಬೀದಿ ಉತ್ಸವದಲ್ಲಿ ಜನ ಭಾಗಿಯಾಗಿದ್ದರು. ಅ.01 ರಂದು ನಡೆಯುವ ಈದ್ ಮಿಲಾದ್ ಮೆರವಣಿಗೆ ಯಶಸ್ವಿಯಾಗಲಿ. ಯಾವುದೇ ರೀತಿಯ ಒಳ್ಳೆಯ ಕಾರ್ಯಗಳು ಸಹ ವಿಶಿಷ್ಟತೆಗೆ ಕಾರಣವಾಗಲಿದೆ. ಮಾಲಾರ್ಪಣೆಗಳೇ ವೈಭವತೆಗೆ ಮೆರಗು ನೀಡಿದೆ. ಸ್ವಯಂ ಪ್ರೇರಿತವಾಗಿ ಅವರವರ ಏರಿಯಾದಲ್ಲಿ ಅಲಂಕರಿಸಲಾಗಿದೆ. ಕಾಯಿನ್ ಸೇರಿಸಿ ಹಾರ ಮಾಡಿ ಗಣಪನಿಗೆ ಅರ್ಪಿಸಿರುವುದು, ಕೊಬ್ಬರಿ ಹಾರಗಳನ್ನ ಹಾಕಿರುವುದು ಮೆರವಣಿಗೆಯ ರಂಗು ಹೆಚ್ಚಿಸಿವೆ ಎಂದರು.

ಮಾಲೆಗಳನ್ನ‌ವಿವಿಧ ಅಲಂಕಾರದಲ್ಲಿ ರಚಿಸಿ ಸಮರ್ಪಿಸಿರುವುದೇ ಒಂದು ದೊಡ್ಡ ಕಲೆಯಾಗಿದೆ. ಅಭೂತ ಪೂರ ಹಾರ ನಿರ್ಮಿಸಲಾಗಿತ್ತು. ಭದ್ರಾವತಿಯ ಆಂಜನೇಯ ಗೋಪಿ ವೃತ್ತದಲ್ಲಿ ಸ್ಥಾಪಿಸಲಾಗಿತ್ತು. ಶಾಂತಿಯುತವಾಗಿ ವೈಭವಾಗಿ ನಡೆದಿದೆ. ಜನತೆಯ ಸಹಕಾರದಿಂದ ಯಶಸ್ವಿ ರಾಜಬೀದಿ ಉತ್ಸವ ನಡೆದಿದೆ. ಅವರರವರ ಯೋಚನೆಗೆ ತಕ್ಕಂತೆ ಅಲಂಕಾರಿಸಿ ಗಣಪನನ್ನ ವಿಸರ್ಜಿಸಲಾಗಿದೆ ಹಾಗೂ ಸಂಭ್ರಮಿಸಲಾಗಿದೆ. ಅಲಂಕಾರವನ್ನ ನಿರ್ಮಿಸಿರುವುದು ಶಿವಮೊಗ್ಗದವರೇ ಎಂಬುದೇ ಹೆಗ್ಗಳಿಕೆ ಎಂದರು.

ಇದನ್ನೂ ಓದಿ-https://suddilive.in/2023/09/29/ತಮಿಳು-ನಾಡಿಗೆ-ಕಾವೇರಿ-ನದಿ-ನ/

Related Articles

Leave a Reply

Your email address will not be published. Required fields are marked *

Back to top button