ಸ್ಥಳೀಯ ಸುದ್ದಿಗಳು

ಆರ್ಯ-ಈಡಿಗ ಸಮಾಜದ ಸಮಾವೇಶಕ್ಕೂ ಮುನ್ನಾ-ಸಾಮಾಜಿಕ ಜಾಲತಾಣದಲ್ಲಿ ದಿಡೀರ್ ಚರ್ಚೆ

ಸುದ್ದಿಲೈವ್/ಶಿವಮೊಗ್ಗ

ಬೆಂಗಳೂರು ಅರಮನೆಯಲ್ಲಿ ಡಿ.10 ರಂದು ಆರ್ಯ-ಈಡಿಗ ಸಮಾಜದ ಬೃಹತ್ ಜಾಗೃತ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಜಾಗೃತ ಸಮಾವೇಶಲ್ಲಿ 26 ಉಪಜಾತಿಗಳನ್ನ ಕೂಡಿಸಿ ಒಗ್ಗಟ್ಟಿನ ಬಲಪ್ರದರ್ಶನ ಮಾಡಲಾಗುತ್ತಿದೆ. ಈ ಸಮಾವೇಶಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ದಿಡೀರ್ ಚರ್ಚೆ ಆರಂಭವಾಗಿದೆ.

ಸಚಿವ ಮಧು ಬಂಗಾರಪ್ಪನವರ ವಿರುದ್ಧ ಫೇಸ್ ಬುಕ್ ನಲ್ಲಿ ರವಿಪೂಜಾರಿ ಅವರ ಪೋಸ್ಟ್ ಸಕ್ಕತ್ ಸದ್ದು ಮಾಡುತ್ತಿದೆ. ಈ ಸಮಾವೇಶದ ಹೆಸರು ಹೇಳದೆ ಮಧು ಬಂಗಾರಪ್ಪನವರೆ ಬಿಲ್ಲವ/ಈಡಿಗ/ತೀಯ ಸಮುದಾಯವನ್ನ  ಒಂದುಗೂಡಿಸುವ ಮೊದಲು ನೀವು ಅಣ್ಣ ತಮ್ಮಂದಿರು ಮತ್ತು ಭಾವಂದಿರು ಮೊದಲು ಒಂದಾಗಿ ಎಂಬ ಪೋಸ್ಟ್ ಸಕ್ಕತ್ ಸೌಂಡ್ ಮಾಡುತ್ತಿದೆ.

ಲೋಕಸಭಾ ಚುನಾವಣೆಯ ಹೊಸ್ತಿನಲ್ಲಿ ಈ ಪೋಸ್ಟ್ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ರವಿಪೂಜಾರಿಯವರ ಈ ಪೋಸ್ಟ್ ನ್ನ ಈಡಿಗ ಗೌಡರು ಎಂಬ ಪೇಜ್ ಸಹ‌ ಶೇರ್ ಮಾಡಿದ್ದಾರೆ. ಇದರಿಂದ ಫೇಸ್ ಬುಕ್ ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಪೋಸ್ಟ್ ಗೆ ಹಲವು ಕಾಮೆಂಟ್ಸ್ ಗಳು ಮಧುರವರ ವಿರುದ್ಧವಾಗಿದೆ.

ಹೌದು, ಮಧು ಬಂಗಾರಪ್ಪ ಅವರು ತಮ್ಮ ಭಾವ ಮತ್ತು‌ ಅಣ್ಣರನ್ನ ಒಂದು ಗೂಡಿಸಲಿ ಆಮೇಲೆ ಜಾತಿಯ ಉಪಪಂಗಡವನ್ನ ಒಂದು ಗೂಡಿಸಲಿ ಎಂಬ ಪ್ರತಿಕ್ರಿಯೆ ಹರಿದು ಬಂದಿದೆ. ಆದರೆ ಕೆಲವರು ಇದು ಬಿಜೆಪಿಯ ಮೈಂಡ್ ಸೆಟ್ಟು, ಉಪಜಾತಿಗಳನ್ನ ಒಂದು ಗೂಡಿಸುವುದರಲ್ಲಿ ಯಾವ ತಪ್ಪಿದೆ ಎಂಬ ಪ್ರತಿಕ್ರಿಯೆ ಸಹ ಕೇಳಿ ಬಂದಿದೆ.

ಫೇಸ್ ಬುಕ್ ಲಿಂಕ್ ಗಾಗಿ ಈ ಕೆಳಗಿನ ಕೊಂಡಿ ಒತ್ತಿ👇👇👇👇👇👇👇👇

https://www.facebook.com/groups/359921018149248/permalink/1602066427268028/?mibextid=Nif5oz

ಎಲ್ಲರ ಮನೇಲಿ ಇರುವ ಸಮಸ್ಯೆ ಮಧು ಅವರನೇಲಿ ಇದೆ ಎಂಬ ಪ್ರತಿಕಯೆಯು ಜೋರಾಗಿದೆ. ಒಟ್ಟಿನಲ್ಲಿ ಎಲ್ಲ ಚರ್ಚೆಗಳು ಗಮನ ಸೆಳೆದಿದೆ.

ಇದನ್ನೂ ಓದಿ-https://suddilive.in/archives/4492

Related Articles

Leave a Reply

Your email address will not be published. Required fields are marked *

Back to top button