ಸ್ಥಳೀಯ ಸುದ್ದಿಗಳು

ಕಾಂಗ್ರೆಸ್ ನ ಶೀಥಲ ಯುದ್ಧ ಮುಂದಿನ ದಿನಗಳಲ್ಲಿ ಭೀಕರವಾಗಲಿದೆ-ಬಿ.ವೈ.ವಿಜೇಂದ್ರ

ಸುದ್ದಿಲೈವ್/ಶಿವಮೊಗ್ಗ

ಈ ಹಿಂದೆ ಬಿಜೆಪಿ ಸರ್ಕಾರದ ರಚನೆ ಸಮಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಪ್ರತಿ ಶಾಸಕರಿಗೆ ಕೋಟಿ ಗಟ್ಟಲೆ ಹಣ ನೀಡಲಾಗಿತ್ತು ಎಂದು ವಿಶ್ವನಾಥ ಅವರ ಆರೋಪ  ಹಾಸ್ಯಾಸ್ಪದ ಎಂದು ಶಾಸಕ ಹಾಗೂ ರಾಜಗಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜೇಂದ್ರ ಹೇಳಿದರು.

ಅವರು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ವಿಶ್ವನಾಥ್ ಇಂದು ಮಾಧ್ಯಮಗಳ ಮುಂದೆ ಬಿಜೆಪಿ 17 ಜನ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಬಂದ ಶಾಸಕರಿಗೆ  50 ಕೋಟಿ ಹಣ ನೀಡಿತ್ತು ಎಂಬ ಹೇಳಿಕೆ ಹಾಸ್ಯಾಸ್ಪದ ಎಂದರು.

ಬಿಜೆಪಿ ಆಪರೇಷನ್ ಈಗಲೂ ಕೇಳಿ ಬರುತ್ತಿದೆ. ಸಿಎಂ ಗಾದಿಗೆ ಶೀಥಲ ಸಮರ ಭೀಕರ ಸಮರವಾಗಲಿದೆ. ಪಾಂಡವ ಮತ್ತುಕೌರವರ ನಡುವಿನ ಗಧಾಯುದ್ಧ ನಡೆದಿದ್ದರ ಬಗ್ಗೆ ಕೇಳಿ ದ್ದೆವು. ಈಗ  ಕಾಂಗ್ರೆಸ್ ನ ಒಳಗಡೆಯ ಮಹಾಯುದ್ಧವಾಗಲಿದೆ. ರಾಜ್ಯದ ಜನ ಸರ್ಕಾರದ ವಿರುದ್ಧ ತಿರುಗಿ ಬೀಳಲಿದ್ದಾರೆ ಎಂದು ಆರೋಪಿಸಿದರು.‌

ಅಭಿವೃದ್ಧಿ ಬರಗಾಲ ಒಂದು ಕಡೆಯಾದರೆ. ಕಾಂಗ್ರೆಸ್ನ ಜಗಗಳ ಬಗ್ಗೆ ಜನ ಶಾಪಹಾಕುತ್ತಿದ್ದಾರೆ. ಬಿಜೆಪಿ ಬರ ವೀಕ್ಷಣೆಯನ್ನ ಕಾಂಗ್ರೆಸ್ ಆಕ್ಷೇಪಿಸುತ್ತಿದೆ. ವಿಪಕ್ಷದವರಾಗಿ ಸಮೀಕ್ಷೆ ನಡೆಸುತ್ತಿರುವುದು ಅರ್ಥಪೂರ್ಣವಾಗಿದೆ. ಬಿಎಸ್ ವೈ ಪಿಎಂರನ್ನ ಸಿಎಂ ಸಿದ್ದರಾಮಯ್ಯ ದಿನಾ ಬೈಯತ್ತಿದ್ದರೆ ಅನುದಾನ ಸಿಗುತ್ತಾ ಎಂದಿದ್ದರು. ಇದು ಸರಿಯಿದೆ. ಕಾಂಗ್ರೆಸ್ ನ ಟೀಕೆ ಪಕ್ಷಕ್ಕೆ ನಷ್ಟವಾಗೊಲ್ಲ   ಬದಲಿಗೆ ರೈತರಿಗೆ ಮತ್ತು ಜನರಿಗೆ ಅನಾನುಕೂವಾಗಲಿದೆ ಎಂದರು.

ಕಾಂಗ್ರೆಸ್ ಒಳಜಗಳ ಲೋಕಸಭೆಯಲ್ಲಿ ಬಿಜೆಪಿಗೆ ಅನುಕೂವಾಗಲಿದೆ. ಮೋದಿ ಮತ್ತೊಮ್ಮೆ ಪ್ರಧಾನಿ ಸ್ಥಾನಕ್ಕೆ ಏರಲಿದ್ದಾರೆ. ಕಾಂಗ್ರೆಸ್ ಏನೇ ಬೊಬ್ಬೆ ಹಾಕಿದರು ಪ್ರಧಾನಿ ಮೋದಿ  ಮತ್ತೆ ಮೂರನೇ ಬಾರಿ ಆಯ್ಕೆಯಾಗುತ್ತಾರೆ. ಬಿಜೆಪಿಗೆ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆಯಾಗಿರಬಹುದು ಆದರೆ ಪಕ್ಷ ಮತ್ತೆ ಗೆದ್ದು ಬರಲಿದೆ.  ವಿಪಕ್ಷ ನಾಯಕನನ್ನ ಶೀಘ್ರದಲ್ಲಿಯೇ ಆಯ್ಕೆ ಮಾಡಲಿದ್ದೇವೆ ಎಂದು ಅವರ ಮುಗುಳ್ನಗೆಯ ಮಾತು  ಹಲವು ಪ್ರಶ್ನೆಯನ್ನ ಒಡ್ಡಿದೆ.

ಇದನ್ನೂ ಓದಿ-https://suddilive.in/archives/2433

Related Articles

Leave a Reply

Your email address will not be published. Required fields are marked *

Back to top button