ಸ್ಥಳೀಯ ಸುದ್ದಿಗಳು

ಬಂಗಾರಪ್ಪನವರ ಕಾರ್ಯಕ್ರಮಕ್ಕೆ ಬಂದಿದ್ದ ಅರವಿಂದ್ ಲಿಂಬಾವಳಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಏನಂದ್ರು?

ಸುದ್ದಿಲೈವ್/ಸೊರಬ

ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಲಿಂಬಾವಳಿ ಮಾಧ್ಯಮಗಳಿಗೆ ಮಾತನಾಡಿ ಶಾಸಕ ಯತ್ನಾಳ್ ರ ಪರ ಬ್ಯಾಟ್ಬೀಸುತ್ತಲೆ ಮಧ್ಯಮದ ಮತ್ತೊಂದು ಪ್ರಶ್ನೆಗೆ ಉತ್ತರಿಸದೆ ವಾಪಾಸ್ ಹೋದರು.

ಬಂಗಾರಪ್ಪ ಅವರು‌ ರಾಜ್ಯ ರಾಜಕಾರಣದಲ್ಲಿ ಖಾಯಂ ಆಗಿರುವ ಹೆಸರು. ನಮ್ಮ ಬಿಜೆಪಿ ಪಕ್ಷಕ್ಕು ಅವರು ಬಂದಿದ್ದರು. ಅವರು ಬಿಜೆಪಿಗೆ ಬಂದಿದ್ದಾಗ ಎಲ್ಲರ ಪರಿಶ್ರಮದೊಂದಿಗೆ 79 ಸ್ಥಾನ ಗೆದ್ದಿದ್ದೇವು ಎಂದರು.

ಬಿಜೆಪಿ ಜೆಡಿಎಸ್ ಅಧಿಕಾರಕ್ಕೆ ಬಂದಿತ್ತು. ಅದಕ್ಕೆ ಬಂಗಾರಪ್ಪ ಅವರು ಕಾರಣಿಭೂತರು. ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅವರೊಂದಿಗೆ ನಾನೇ ಓಡಾಡುತ್ತಿದ್ದೆ. ಶಿವಮೊಗ್ಗಕ್ಕೆ ಬಂದ ತಕ್ಷಣ ಕೆಲವು ಪ್ರಶ್ನೆ ಕೇಳಿದರು. ಕೆಲವು ಸ್ನೇಹಿತರು ನೀವೆನು ಕಾಂಗ್ರೆಸ್ ಗೆ ಹೋಗ್ತೀರಾ ಅಂದ್ರುನಾನು ಬಿಜೆಪಿ ಕಟ್ಟಿರುವವನು, ಬೇರೆ ಪಕ್ಷದಿಂದ ಬಂದಿರುವವನಲ್ಲ ಎಂದರು.

ಈ‌‌ ಪಕ್ಷ ಬಿಟ್ಟು ಹೋಗಿ ಕೆಲವರು ಮತ್ತೆ ಬಿಜೆಪಿಗೆ ಬಂದಿದ್ದಾರೆ ಈ ಜಿಲ್ಲೆಯಲ್ಲು ಅಂಥವರು ಇದ್ದಾರೆ. ಅಂತಹ ವ್ಯಕ್ತಿ ನಾನಲ್ಲ ಎನ್ನುವ ಮೂಲಕ ಬಿಎಸ್ ಯಡಿಯೂರಪ್ಪನವರಿಗೆ ಟಾಂಗ್ ನೀಡಿದ ಲಿಂಬಾವಳಿ, ನಾನು ಬಿಜೆಪಿಯವನೇ, ಬಿಜೆಪಿ ಕಟ್ಟಿರುವವನು ನಾನೇಕೆ ಅಂತಹ ರಿಸ್ಕ್ ತಗೊಳ್ಳಲಿ ಎಂದು ಟಾಂಗ್ ನೀಡಿದರು.

ಸೋತ ಮೇಲೆ ಪಕ್ಷ ಸರಿ ಇಲ್ಲ ಎನ್ನುವ ಮಾತು ಬಂದೇ ಬರುತ್ತವೆ. ಪಕ್ಷದೊಳಗೆ ಆತ್ಮಾವಲೋಕನ ಆಗಬೇಕಿತ್ತು ಆಗಿಲ್ಲ. ಯಾವಾಗ ಆಗ್ತದೋ ಗೊತ್ತಿಲ್ಲ. ಯತ್ನಾಳ್ ಅವರು ಕೆಜೆಪಿ 2 ಎಂದು ಈಗಿನ ನೂತನ ಪದಾಧಿಕಾರಿಗಳ ನೇಮಕ ವಿಚಾರದಲ್ಲಿ ಹೇಳಿರುವ ಬಗ್ಗೆ ಮೌನವಾಗಿಯೇ ವಾಪಾಸ್ ಆದರು‌.

ಇದನ್ನು ಓದಿ-https://suddilive.in/archives/5539

Related Articles

Leave a Reply

Your email address will not be published. Required fields are marked *

Back to top button