ಸ್ಥಳೀಯ ಸುದ್ದಿಗಳು

ಮೊದಲ ಪಂದ್ಯಾವಳಿಗಳಲ್ಲಿ ಹಿಮಾಚಲಯ ಪ್ರದೇಶ, ಉತ್ತರ ಪ್ರದೇಶ ಮತ್ತು ಬರೋಡಾ ತಂಡಗಳಿಗೆ ಭರ್ಜರಿ ಗೆಲವು

ಸುದ್ದಿಲೈವ್/ಶಿವಮೊಗ್ಗ

ಇಂದು ನಡೆದ 15 ವರ್ಷದೊಳಗಿನ ಬಾಲಕಿಯರ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹಿಮಾಚಲ ಪ್ರದೇಶ, ಬರೋಡಾ ಮತ್ತು ಉತ್ತರ ಪ್ರದೇಶದ ತಂಡಗಳು ಗೆಲವು ಸಾಧಿಸಿದೆ.

10 ದಿನಗಳ ವರೆಗೆ ನಡೆಯುವ ಈ ಪಂದ್ಯಾವಳಿಗಳ ಆರಂಭಿಕ ದಿನವಾದ ಇಂದು ನವುಲೆಯ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ ಹಿಮಾಚಲ ಪ್ರದೇಶ vs ಮಣಿಪುರ ಕ್ರಿಕೆಟ್ ತಂಡಗಳ ನಡುವೆಯ ಪಂದ್ಯಾವಳಿಯಲ್ಲಿ ಹಿಮಾಚಲ ಪ್ರದೇಶ ಗೆದ್ದು ಬೀಗಿದೆ.

ಮೊದಲು ಬ್ಯಾಟ್ ಮಾಡಿದ ಹಿಮಾಚಲ ಪ್ರದೇಶ 35 ಓವರ್ ನಲ್ಲಿ ಕೇವಲ ಎರಡು ವಿಕೆಟ್ ನಷ್ಟಕ್ಕೆ 273 ರನ್ ಗಳಿಸಿತ್ತು. ಹಿಮಾಚಲ ಪ್ರದೇಶದ ಅನಾಹಿತ ಸಿಂಗ್ 136 ರನ್ ಗಳಿಸಿ ಔಟಾಗದೆ ಉಳಿದಿರುವುದು ಪಂದ್ಯದ ವಿಶೇಷವಾಗಿತ್ತು.‌ ಪ್ರತಿಯಾಗಿ ಬ್ಯಾಟ್ ಮಾಡಿದ ಮಣಿಪುರ ತಂಡ 24.1 ಒವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 49 ರನ್ ಗಳಿಗೆ ಆಲ್ ಔಟ್ ಆಗಿದೆ. ಇದರಿಂದ ಮಣಿಪುರ 224 ರನ್ವಗಳಿಂದ ಸೋತಿದೆ.

ಪಂಜಾಬ್ ಮತ್ತು ಉತ್ತರ ಪ್ರದೇಶಗಳ ನಡುವಿನ ಇನ್ನೊಂದು ಪಂದ್ಯಾವಳಿಯಲ್ಲಿ ಉತ್ತರ ಪ್ರದೇಶದಬತಂಡ 21 ಓವರ್ ಬಾಕಿ ಇರುವಾಗಲೇ ಪಂಜಾಬ್ ನೀಡಿದ ಗುರಿಯನ್ನ ತಲುಪಿ ಭರ್ಜರಿ ಗೆಲವು ಸಾಧಿಸಿದೆ. ಪಂಜಾಬ್ ಮೊದಲು ಬ್ಯಾಟ್ ಮಾಡಿ 35 ಓವರ್ ನಲ್ಲಿ 53 ರನ್ ಗಳಿಸಿತ್ತು ಇದನ್ನ ಹಿಮ್ಮೆಟ್ಟಿಸಿದ  ಉತ್ತರ ಪ್ರದೇಶ  14.1 ಒವರ್ ಬಲ್ಲಿ ಒಂದು ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿ ಜಯಗಳಿಸಿದೆ.

ಜೆಎನ್ ಸಿಸಿ ಇಂಜಿನಿಯರ್ ಕಾಲೇಜಿನ ಕ್ರಿಜೆಟ್ ಮೈದಾನದಲ್ಲಿ ನಡೆದ ಬರೋಡ ಮತ್ತು ಪಾಂಡಿಚೇರಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟ್ ನಾಡಿದ ಬರೋಡಾ 35 ಓವರ್ ಗಳಲ್ಲಿ  6 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿತ್ತು. ಇದನ್ನ ಬೆನ್ನುಹತ್ತಿದ ಪಾಂಡಿಚೇರಿ ತಂಡ 7 ವಿಕೆಟ್ ಕಳೆದುಕೊಂಡು  82 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಬರೋಡಾ 89 ರನ್ ಗಳ ಜಯ ಗಳಿಸಿತು.

ಇದನ್ನೂ ಓದಿ-https://suddilive.in/archives/3247

Related Articles

Leave a Reply

Your email address will not be published. Required fields are marked *

Back to top button