ಅಂತಿಮ ಸಿದ್ಧತೆಯಲ್ಲೂ ಜಂಬೂ ಸವಾರಿ ಹೋರುವ ಆನೆಗಳಿಂದ ಶಿಸ್ತುಪಾಲನೆ!

ಸುದ್ದಿಲೈವ್/ಶಿವಮೊಗ್ಗ

ನಾಳೆ ವಿಜಯ ದಶಮಿ, ದಶಮಿಯ ವಿಜಯೋತ್ಸವಕ್ಕೆ ನಾಳೆ ಸಕ್ರಬೈಲಿನ ಮೂರು ಆನೆಗಳಿಂದ ಜಂಬೂ ಸವಾರಿಗೆ ಅಂತಿಮ ತಾಲೀಮು ನಡೆದಿದೆ. ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಫ್ರೀಡಂ ಪಾರ್ಕ್ ನವರೆಗೆ ಆನೆಗಳಿಂದ ತಾಲೀಮು ನಡೆದಿದಡ. ಈ ತಾಲೀಮಿನ ವೇಳೆ ಆನೆಗಳು ಕೂಡ ಟ್ರಾಫಿಕ್ ನಿಯಮಪಾಲಿಸಿದ್ದು ವಿಶೇಷ.
ಕಂಡ ಕಙಡಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋದು. ಯಾರು ಏನೂ ಮಾಡೊಲ್ಲ ತ್ರಿಬ್ಬಲ್ ರೈಡಿಂಗ್ ಹೋಗೋದು ಸಾಮಾನ್ಯ. ಆದರೆ ಆನೆಗಳು ಸಹ ಶಿವಮೊಗ್ಗದ ಟ್ರಾಫಿಕ್ ರೂಲ್ಅನುಸರಿಸಿ ಅಂತಿಮ ತಾಲೀಮಿನಲ್ಲಿ ಭಾಗಿಯಾದವು.
ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಎಎ ವೃತ್ತ, ನೆಹರೂ ರಸ್ತೆ ಗೋಪಿ ವೃತ್ತ, ದುರ್ಗಿಗುಡಿ ಮೂಲಕ ಜೈಲ್ ವೃತ್ತಕ್ಕೆ ಬಂದ ಆನೆಗಳು ಜೈಲ್ ವೃತ್ತದ ಬಳಿ ಸಿಗ್ನಲ್ ಬಿದ್ದ ಕಾರಣ ಓವರ್ ರೂಲ್ಡ್ ಮಾಡದೆ ನಿಮಿಷಗಳ ಕಾದು ನಂತರ ಫ್ರೀಡಂ ಪಾರ್ಕ್ ಗೆ ಸಾಗಿದೆ.
ಸಿದ್ಧಗೊಂಡ ಬನ್ನಿ ಮಂಟಪ
ವಿಜಯದಶಮಿಯಂದು ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ವೇದಿಕೆ ಸಿದ್ಧವಾಗಿದೆ. ಫ್ರೀಡಾಂ ಪಾರ್ಕ್‌ನ ಮಧ್ಯ ಭಾಗದಲ್ಲಿ ಬನ್ನಿ ಮಂಟಪ ಸಿದ್ಧಪಡಿಸಲಾಗಿದೆ. ವೇದಿಕೆ ಸಮೀಪ ಸೀಮಿತ ಜನರಿಗೆ ಮಾತ್ರ ಅವಕಾಶವಿದೆ. ಹಾಗಾಗಿ ಬನ್ನಿ ಮಂಟಪದ ಸುತ್ತಲು ಬೇಲಿ ಹಾಕಲಾಗಿದೆ. ಜನರ ನಿಯಂತ್ರಣಕ್ಕೆ ಬ್ಯಾರಿಕೇಡ್‌ಗಳನ್ನು ತರಿಸಲಾಗಿದೆ.
ಫ್ರೀಡಂ ಪಾರ್ಕ್‌ನಲ್ಲಿ ಲೈಟ್, ಮೈಕ್‌ಗಳನ್ನು ಅಳವಡಿಸಲಾಗಿದೆ. ರಾವಣ ದಹನಕ್ಕೆ ಸಿಡಿಮದ್ದುಗಳ ಸಿದ್ಧತೆಯು ಆರಂಭವಾಗಿದೆ. ಇನ್ನು, ನಗರದ ವಿವಿಧೆಡೆ ದಸರಾದ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ.
ಇದನ್ನೂ ಓದಿ-https://suddilive.in/archives/1698
