ರಾಜ್ಯ ಸುದ್ದಿಗಳು

ನಾಳೆ ಆರ್ಯ ಈಡಿಗ ಸಂಘದ ಅಮೃತ‌ ಮಹೋತ್ಸವದ ಪೂರ್ವ ಭಾವಿ ಸಭೆ

ಸುದ್ದಿಲೈವ್/ಶಿವಮೊಗ್ಗ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿ.10 ರಂದು ನಡೆಯುವ ಕರ್ನಾಟಕ ಆರ್ಯ ಈಡಿಗ ಸಂಘದ ಅಮೃತ ಮಹೋತ್ಸವ ನಡೆಯಲಿದ್ದು ಈ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ನಾಳೆ ಶಿವಮೊಗ್ಗದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ.

ನಾಳೆ ಆರ್ಯ ಈಡಿಗ ಸಮುದಾಯ ಭವನದಲ್ಲಿ ಬೆಳಿಗ್ಗೆ 10-30 ಕ್ಕೆ ನಡೆಯಲಿದೆ. ಸೋಲೂರು ಈಡಿಗ ಮಠದ ಪೀಠಾಧಿಪತಿ ವಿಖ್ಯಾತನಂದ ಸ್ವಾಮೀಜಿಯ ಸಾನಿಧ್ಯ ವಹಿಸಲಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಭೆಯನ್ನ ಉದ್ಘಾಟಿಸಲಿದ್ದಾರೆ. ಶಾಸಕ ಗೋಪಾಲಕೃಷ್ಣ ಬೇಳೂರು  ಮಾಜಿ ಸಚಿವರಾದ ಹರತಾಳು ಹಾಲಪ್ಪ,

ಕುಮಾರ ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಮಾಜಿ ಶಾಸಕರಾದ ಸ್ವಾಮಿರಾವ್, ಡಾ.ಜಿ.ಡಿ.ನಾರಾಯಣಪ್ಪ, ರಾಜ್ಯ ಆರ್ಯ ಈಡಿಗರ ಸಂಘದ ರಾಜ್ಯಾಧ್ಯಕ್ಷ ತಿಮ್ಮೇಗೌಡ, ನಿಟ್ಟೂರು ಸಙಸ್ಥಾನದ ರೇಣುಕಾನಂಧ ಸ್ವಾಮೀಜಿ, ಅವಧೂತರಾದ ಯೋಗೇಂದ್ರ ಸ್ವಾಮೀಜಿ, ಸಿಗಂದೂರು ದೇವಸ್ಥಾನದ ಧರ್ಮದರ್ಶಿಗಳಾದ ಡಾ.ರಾಮಪ್ಪ ಭಾಗಿಯಾಗಲಿದ್ದಾರೆ. ಶ್ರೀಧರ್ ಹುಲ್ತಿಕೊಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

ದೀವರ ಸಂಘ, ಎಸ್ ಎನ್ ಜಿವಿ, ಬಿ.ಎಸೆ.ಎನ್ .ಡಿ.ಟಿ.ಪಿ, ನಾರಾಯಣಗುರು ಮಹಿಳಾ ಸಂಘ, ಜಿಲ್ಲಾ ಮಹಿಳಾ ಸಂಘ ಹಾಗೂ 26 ದೀವರ ಉಪಪಂಗಡದವರ ಮುಖಂಡರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ-https://suddilive.in/archives/3953

Related Articles

Leave a Reply

Your email address will not be published. Required fields are marked *

Back to top button