ಸ್ಥಳೀಯ ಸುದ್ದಿಗಳು

ಅಪ್ರಬುದ್ದ ರಾಜಕಾರಣಿಗಳಲ್ಲಿ ಈಶ್ವರಪ್ಪ ಒಬ್ಬರು-ಆಯನೂರು ವಾಗ್ದಾಳಿ

ಸುದ್ದಿಲೈವ್/ಶಿವಮೊಗ್ಗ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರ ಬಹುಮತ ಕೊಟ್ಟು‌ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.‌ಸಿದ್ದರಾಮಯ್ಯ ಸರಕಾರ ಬಹಳ ಒಳ್ಳೆಯ ಕೆಲಸ ಮಾಡ್ತಿದೆ. ಅಧಿಕಾರ ಕಳೆದುಕೊಂಡ ಮೇಲೆ ಬಿಜೆಪಿಯವರು ನೀರಿನಿಂದ ಹೊರಬಂದ ಮೀನಿನಂತಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ವಾಗ್ದಾಳಿ ಮುಂದುವರೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಧಿಕಾರ ಕಳೆದುಕೊಂಡ ಬಿಜೆಪಿ ಸರಕಾರ ಅಸ್ಥಿರಗೊಳಿಸುವ‌ ಪ್ರಯತ್ನ ಮಾಡ್ತಿದ್ದಾರೆ. ಕಾಂಗ್ರೆಸ್ ಶಾಸಕರ ಮನೆಮನೆಗೆ ಹೋಗಿ ಆಮಿಷ ತೋರಿಸುತ್ತಿದ್ದಾರೆ. ಮಾಜಿ ಸಚಿವರೊಬ್ಬರು, ಯಡಿಯೂರಪ್ಪ ಅವರ ಕುಟುಂಬದವರೊಬ್ಬರು ತಲಾ 50 ಕೋಟಿ ಕೊಡುವ ಆಮಿಷವೊಡ್ಡಿದ್ದಾರೆ ಎಂದು ಬಾಂಬ್ ಸಿಡಿಸಿದರು.

ಈಶ್ವರಪ್ಪ ಅವರು ಸಹ ಸರಕಾರ ಬೀಳಿಸುತ್ತೇವೆ. ಬೀಳಿಸಿದರೆ ತಪ್ಪೇನು ಅಂದಿದ್ದಾರೆ. ಈಶ್ವರಪ್ಪ ಅವರಿಗೆ ಡೆಮಾಕ್ರಸಿ ಗೊತ್ತಿಲ್ಲ. ಅವರು ಸಂವಿಧಾನ ಓದಿಲ್ಲ. ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಾಗ ಯಡಿಯೂರಪ್ಪ ವಿರುದ್ದ ರಾಜ್ಯಪಾಲರಿಗೆ ದೂರು ಕೊಟ್ಟಿದ್ದರು. ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ತರಲು ಈಶ್ವರಪ್ಪ ಕೊಡುಗೆ ಏನು ಎಂದು ಪ್ರಶ್ನಿಸಿದರು.‌

ಈಶ್ವರಪ್ಪ ಅವರನ್ನು ನಂಬಿ ಒಬ್ಬನಾದರೂ ಶಾಸಕ ಬಿಜೆಪಿಗೆ ಬಂದಿದ್ದಾನಾ?ಈಶ್ವರಪ್ಪ ಅವರಿಗೆ ಅಂತಹ ಶಕ್ತಿ, ಸಾಮರ್ಥ್ಯ ಇಲ್ಲ. ಅಪ್ರಬುದ್ದ ರಾಜಕಾರಣಿಗಳಲ್ಲಿ ಈಶ್ವರಪ್ಪ ಒಬ್ಬರು. ಬೇಜವಾಬ್ದಾರಿ ಮಾತನಾಡುವ ಈಶ್ವರಪ್ಪ ಅವರಿಂದ ಪಕ್ಷಕ್ಕೆ ನಷ್ಟ. ಈಗಾಗಿಯೇ ಈಶ್ವರಪ್ಪ ಅವರನ್ನು ಪಕ್ಷ ಎಲ್ಲಾ ಹುದ್ದೆಯಿಂದ ದೂರ ಇಟ್ಟಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಈಶ್ವರಪ್ಪ ಅವರಿಗಿಲ್ಲ ಎಂದು ಹಳೆಯ ಪಕ್ಷದ ಹಳೆಯ ಸ್ನೇಹಿತನ ವಿರುದ್ಧ ಆಯನೂರು ಕೆಂಡಮಂಡಲರಾಗಿದ್ದಾರೆ.

ನೀರಾವರಿ ಸಚಿವರಾಗಿದ್ದರು ಒಂದೇ ಒಂದು ದಿನ ಕಾವೇರಿ ಸಮಸ್ಯೆ ಬಗ್ಗೆ ಮಾತನಾಡುವ ಪ್ರೌಢಿಮೆ ಇಲ್ಲ. ಬಾಯಿಗೆ ಬಂದಾಗೆ ಮಾತನಾಡೋದೆ ತಮ್ಮ ಪ್ರತಿಭೆ ಎಂದುಕೊಂಡಿರುವ ಈಶ್ವರಪ್ಪ ಎಲ್ಲರನ್ನು ಏಕವಚನದಲ್ಲಿ ಮಾತನಾಡೋದು, ಬಹುವಚನ ಎನ್ನೋದು ಗೊತ್ತೆ ಇಲ್ಲ. ಈಶ್ವರಪ್ಪ ಅವರ ಮಾತಿಗೆ ಅಷ್ಟು ಮನ್ನಣೆ ಇಲ್ಲ. ಅವರದ್ದು ಹರುಕುಬಾಯಿ ಎಂಬುದು ಜಗಜ್ಜಾಹೀರು ಆಗಿದೆ ಎಂದರು.

ಎಲ್ಲಾ ಇಲಾಖೆಗಳಲ್ಲು ಗುಡಿಸಿ ಗುಂಡಾಂತರ ಮಾಡಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಮಾಜಿ ಡಿಸಿಎಂಗೆ ಇಲ್ಲ. ಯಡಿಯೂರಪ್ಪ ಅವರು ಜೈಲಿಗೆ ಹೋದಾಗ ನನ್ನಂತವನು ಆಗಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದೆ ಅಂದಿದ್ದರು. ಶಿವಮೊಗ್ಗದ ಅಭಿವೃದ್ಧಿ ಮಾಡಿದ್ದ ಯಡಿಯೂರಪ್ಪ ಅವರು ಶಿವಮೊಗ್ಗದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಶೂನ್ಯ. ಕೇವಲ ಹಣ ಸಂಪಾದನೆ ಮಾಡಿದ್ದೀರಾ ಅಷ್ಟೇ. ಈಶ್ವರಪ್ಪ ಒಬ್ಬ ಮೂರ್ಖಾ ರಾಜಕಾರಣಿ ಎಂದು ಆಯನೂರು ವಾಗ್ದಾಳಿ ನಡೆಸಿದ್ದಾರೆ.

ಕನ್ಕ್ಲೂಷನ್

ಆದರೆ ಆಯನೂರು ಸುಧೀರ್ಘವಾಗಿ ಈಶ್ವರಪ್ಪರನ್ನ ಟೀಕಿಸಿದರೆ ವಿನಃ ಇಡೀ ಬಿಜೆಪಿಯನ್ನ ಟೀಕಿಸುವಲ್ಲಿ ವಿಫಲರಾಗಿದ್ದಾರೆ. ಕೆಪಿಸಿಸಿ ವಕ್ತಾರರಾಗಿ ಯಡಿಯೂರಪ್ಪನವರನ್ನ ಒಲೈಸಿಕೊಂಡೇ ವಾಗ್ದಾಳಿ ನಡೆಸಿದ್ದಾರೆ. ಹಾಗಾಗಿ ಆಯನೂರು ಕೆಪಿಸಿಸಿಗೆ ವಕ್ತಾರರ ಅಥವಾ ಯಡಿಯೂರಪ್ಪನವರ ವಕ್ತಾರರ ಎಂಬುದು ಸಹ ಕ್ಲಿಯರ್ ಆಗಬೇಕಿದೆ.

ಇದನ್ನೂ ಓದಿ-https://suddilive.in/archives/1620

Related Articles

Leave a Reply

Your email address will not be published. Required fields are marked *

Back to top button