ಸಕ್ರಬೈಲಿನ ಮಾವುತರಿಗೆ ಹಬ್ಬದ ಪ್ರಯುಕ್ತ ಜವಳಿ ವಿತರಣೆ

ಸುದ್ದಿಲೈವ್/ಶಿವಮೊಗ್ಗ

ನೇಚರ ಮಲೆನಾಡು ಮಳೆಕಾಡು ವನ್ಯಜೀವಿ ಅದ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಶಿವಮೊಗ್ಗದ ಸಕ್ರೇಬೈಲ್ ಆನೆ ಬಿಡಾರದಲ್ಲಿರುವ ಮಾವುತ ಹಾಗೂ ಕಾವಾಡಿಗಳಿಗೆ ದಸರಾ ಹಬ್ಬದ ಪ್ರಯುಕ್ತ ಬಟ್ಟೆಗಳನ್ನು ವಿತರಿಸಲಾಯಿತು.
ಆನೆಗಳ ತರಬೇತಿ ಕ್ಯಾಂಪ್ ನಲ್ಲಿ, ನಡೆದ ಸರಳ ಕಾರ್ಯಕ್ರಮದಲ್ಲಿ ಎಂ.ಆರ್.ಎರ್.ಎಸ್.ಸಂಸ್ಥೆಯ ಅಂಗಸಂಸ್ಥೆ ಯಾದ ವೈಲ್ಡ್ ಟಸ್ಕರ್ ಸಕ್ರೇಬೈಲು ಸಂಸ್ಥೆಯ ಗೌರವಾದ್ಯಕ್ಷ ಎಂ .ಶ್ರೀಕಾಂತ್ ರವರು, ಎಂಬತ್ತು ಮಂದಿ ಸಕ್ರೇಬೈಲ್ ಆನೆ ಬಿಡಾರದ ಮಾವುತರು ಹಾಗು ಕಾವಾಡಿಗಳು ಮತ್ತು ಗಾಜನೂರು ವನ್ಯಜೀವಿ ವಿಭಾಗದ ಡಿಸಿಪಿ ವಾಚರ್ಸ್ ಮತ್ತು ನಿವೃತ್ತ ಜಮೇದಾರ್ ಗಳಿಗೆ ಬಟ್ಟೆಯನ್ನು ವಿತರಿಸಲಾಯಿತು.
ಇನ್ನೂ ಕಾರ್ಯಕ್ರಮದಲ್ಲಿ ವಸ್ತ್ರಗಳನ್ನು ವಿತರಿಸಿದ ಎಂ.ಶ್ರೀಕಾಂತ್ ವೈಲ್ಡ್ ಟಸ್ಕರ್ ಸಂಸ್ಥೆ ಕೊರೊನಾ ಸಂದರ್ಭದಲ್ಲಿ ಜನ್ಮತಾಳಿದ್ದು, ಆ ಸಂದರ್ಭದಲ್ಲಿಯೇ ಮಾವುತ ಹಾಗು ಕಾವಾಡಿಗಳಿಗೆ ಉಚಿತ ಆಹಾರದ ಕಿಟ್‌ಗಳನ್ನ ವಿತರಣೆ ಮಾಡಲಾಗಿತ್ತು. ಅಲ್ಲದೆ ಆನೆಗಳಿಗೂ ಸಹ ಆಹಾರದ ಪೂರೈಕೆಯನ್ನು ಮಾಡಲಾಗಿತ್ತು
ಸಕ್ರೇಬೈಲು ಮಾವುತ ಕಾವಾಡಿಗಳ ಸಂಕಷ್ಟಕ್ಕೆ ಸಂಸ್ಥೆ ಯಾವಗಲು ಮಿಡಿಯುತ್ತದೆ ಅಷ್ಟೆ ಅಲ್ಲದೆ ಮಾವುತ ಕಾವಾಡಿಗಳ ಬದುಕಿನ ಶೈಲಿ ಆನೆಗಳ ಜೀವನ ಶೈಲಿ ಇವುಗಳನ್ನು ಸಂಸ್ಥೆ ದಾಖಲಿಸುತ್ತಿದೆ ಎಂದರು.
ಮಾವುತ ಕಾವಾಡಿಗಳ ಸಂಕಷ್ಟಕ್ಕೆ ಯಾವತ್ತು ಸಹ ಸಂಸ್ಥೆ ಸರ್ಕಾರದ ಗಮನ ಸೆಳೆಯುವಂತಹ ಕಾರ್ಯ ಮಾಡಲಿದೆ ಎಂದರು.
ಇನ್ನು ಸಂಸ್ಥೆಯ ಕಾರ್ಯಕ್ರಮಗಳಿಗೆ ಶುಭ ಹಾರೈಸಿದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ವೈಲ್ಡ್ ಟಸ್ಕರ್ ಸಕ್ರೇಬೈಲು ಸಂಸ್ಥೆ ಸಾಂಪ್ರದಾಯಕವಾಗಿ ಮಾವುತ, ಕಾವಾಡಿಗಳ ಬದುಕಿನ ಶೈಲಿ ಆನೆಗಳ ಜೀವನ ಶೈಲಿ ದಾಖಲಿಸುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.
ವನ್ಯಜೀವಿ ಭಾಗದ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್ ಮಾತನಾಡಿ ಮಾವುತ ಕಾವಾಡಿಗಳ ಬಗ್ಗೆ ಅಪಾರವಾದ ಕಾಳಜಿ ಹೊಂದಿರುವ ಸಂಸ್ಥೆಯ ಉದ್ದೇಶವನ್ನು ಶ್ಲಾಘಿಸಿದರು. ಡೀ ದರ್ಜೆ ನೌಕರರ ಪರವಾಗಿ ಸಂಸ್ಥೆಯೊಂದು ಅವರ ಜೀವನ ಭದ್ರತೆಗಾಗಿ ಶ್ರಮ ವಹಿಸಿ ಕೆಲಸ ಮಾಡುತ್ತಿರುವುದು ಸಮಾಜದಲ್ಲಿ ಉತ್ತಮ ಕಾರ್ಯವೆಂದು ತಮ್ಮ ಅಭಿಪ್ರಾಯವನ್ನು ಮಂಡಿಸಿದರು..
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಜೇಸುದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರಾದ ನಾಗರಾಜ್ ನೇರಿಗೆ ಕಾರ್ಯಕ್ರಮವನ್ನು ನಿರೂಪಿಸಿದರು.. ಸಭೆಯಲ್ಲಿ ವನ್ಯಜೀವಿ ವೈದ್ಯಾದಿಕಾರಿ ಡಾಕ್ಟರ್ ವಿನಯ್, ಡಿಆರ್ ಎಫ್ ಒ ಮಲ್ಲಿಕಾರ್ಜುನ್ ಸೇರಿದಂತೆ ಬಿಡಾರದ ಸಿಬ್ಬಂದಿಗಳು , ಅರಣ್ಯ ಅಧಿಕಾರಿಗಳು, ಶಿವಮೊಗ್ಗದ ಪತ್ರಕರ್ತ ಮಿತ್ರರು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/1543
