ಸ್ಥಳೀಯ ಸುದ್ದಿಗಳು

ಶಿಕಾರಿಪುರದ ನೂರಾನಿ ಮಸೀದಿ ಅಲ್ಲ, ಬೆಂಗಳೂರಿನ ಶಿಕಾರಿಪಾಳ್ಯದ ನೂರಾನಿ‌ ಮಸೀದಿ-ಎಸ್ಪಿ ಸ್ಪಷ್ಟನೆ

ಸುದ್ದಿಲೈವ್/ಶಿವಮೊಗ್ಗ

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಪಾಲಿಸ್ತೇನಿಯರನ್ನ  ಬೆಂಬಲಿಸಿ ಮಸೀದಿವೊಂದರ ಎದುರು ಹಾಕಿರುವ ಬ್ಯಾನರ್ ವೊಂದು ಶಿವಮೊಗ್ಗದ ಶಿಕಾರಿಪುರದ ನೂರಾನಿ ಮಸೀದಿ ಎಂದು ವಿಡಿಯೋವೊಂದು ವೈರಲ್ ಆಗುತ್ತಿದ್ದು ಈ ಬಗ್ಗೆ ಎಸ್ಪಿ  ಮಿಥುನ್ ಕುಮಾರ್  ಸ್ಪಷ್ಟನೆ ನೀಡಿದ್ದಾರೆ.

ಮಸೀದ್-ಇ-ನೂರ್ ಎಂಬ ಮಸೀದಿ ಮುಂದೆ ಹಾಕಲಾದ ಬ್ಯಾನರ್ ನಲ್ಲಿ ಇನ್ನು‌ಮುಂದೆ ಇಸ್ರೇಲಿ ಉತ್ಪನ್ನ ವಸ್ತುಗಳನ್ನ ತಿರಸ್ಕರಿಸುವಂತೆ ಉಲ್ಲೇಖಿಸಿ ಬ್ಯಾನರ್ ವೊಂದನ್ನ ಹಾಕಿರುವ ಬಗ್ಗೆ ವಿಡಿಯೋವೊಂದು ವೈರಲ್ ಆಗುತ್ತಿದೆ. ಅಚ್ಚರಿ ಎಂದರೆ ಈ ಬ್ಯಾನರ್ ಶಿಕಾರಿಪುರದ ನೂರಾನಿ ಮಸೀದಿಯ ಗೋಡೆಗೆ ತೂಗುಹಾಕಲಾಗಿದೆ ಎಂದು  ವೈರಲ್ ವಿಡಿಯೋದಲ್ಲಿ ಉಲ್ಲೇಖಿಸಲಾಗಿದೆ.

ಈ ವಿಡಿಯೋದಲ್ಲಿ ಗೃಹ ಸಚಿವ ಡಾ.ಪರಮೇಶ್ವರ್ ಮತ್ತು ಸಚಿವ ಪ್ರಿಯಾಂಕ ಖರ್ಗೆ ಈ ವಿಡಿಯೋವನ್ನ ಸರಿಯಾಗಿ ನೋಡಿ ಆರೋಪಿತರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಲಾಗಿತ್ತು. ಸೇವ್ ಹಮಾಸ್ ಎಂದು ಬರೆದು ಇಸ್ರೇಲಿ ಉತ್ಪನ್ನ ಗಳನ್ನ ಬಾಯ್ ಕಟ್ ಎಂದು ಉಲ್ಲೇಖಿಸಲಾಗಿತ್ತು.

ಈ ವಿಡಿಯೋ ಶಿಕಾರಿಪುರದ್ದು ಎಂದು  ವೈರಲ್ ಆಗುತ್ತಿದ್ದಂತೆ  ಶಿವಮೊಗ್ಗದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದು, ಈ ವಿಡಿಯೋ ಶಿವಮೊಗ್ಗದ ಶಿಕಾರಿಪುರ ಅಲ್ಲ ಬದಲಿಗೆ  ಬೆಂಗಳೂರಿನ ಶಿಕಾರಿಪಾಳ್ಯದ ನೂರಾನಿ ಮಸೀದಿ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ-https://suddilive.in/archives/1643

Related Articles

Leave a Reply

Your email address will not be published. Required fields are marked *

Back to top button