ಸಾವರ್ಕರ್ ಬಾವುಟ ಹಿಡಿದು ಕುಣಿದ ಕಾಂಗ್ರೆಸ್ ನಾಯಕ

ಸುದ್ದಿಲೈವ್/ಶಿವಮೊಗ್ಗ

ಕಾಂಗ್ರೆಸ್ ಪಕ್ಷಕ್ಕೂ ಸಾವರ್ಕರ್ ಗೂ ಬಹುತೇಕ ಆಗಿಬರೊಲ್ಲ. ಸಾವರ್ಕರ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲವೆಂಬುದು ಕಾಂಗ್ರೆಸ್ ನ ವಾದವಾಗಿದೆ. ಈ ಸಿದ್ಧಾಂತದ ಮೇಲೆ ಬರುವ ಕಾಂಗ್ರೆಸ್ ನಾಯಕರು ಸಾವರ್ಕರ್ ಭಾವಚಿತ್ರದ ಬಾವುಟವನ್ನ ಹಿಡಿದು ಕುಣಿದಿರುವ ವಿಡಿಯೋ ವೈರಲ್ ಆಗಿದೆ.
ಇಂದು 79ನೇ ವರ್ಷದ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಸಂಭ್ರಮ ಮತ್ತು ಸಡಗರದಿಂದ ಸಾಗುತ್ತಿದೆ. ಗಣಪನ ಮೆರವಣಿಗೆಗೆ ಸಾರ್ವಜನಿಕರು ಭರ್ಜರಿಯಾಗಿ ಜನ ಸೇರಿದ್ದಾರೆ. ಪಟಾಕಿ ಸಿಡಿಸಿ, ಡೊಳ್ಳು ಕುಳಿತ, ಕೇಸರಿ ಧ್ವಜ ತಿರುಗಿಸುವುದು ಮೆರವಣಿಗೆಯಲ್ಲಿ ಇಂದು ಸಾಮಾನ್ಯವಾಗಿದೆ.
ಇಂದು ಗೋಪಿ ವೃತ್ತದಲ್ಲಿ ಡಿಜೆ ಲೈಟ್ ಮತ್ತು ದೊಡ್ಡ ಎಲ್ ಇಡಿ ಸ್ಟ್ರೀನ್ ಅಳವಡಿಸಿ ಜನರಿಗೆ ರಂಜಿಸುವ ಕಾರ್ಯ ನಡೆದಿದೆ. ಇಲ್ಲಿ ವಿಧಾನ ಸಭಾ 2023 ಚುನಾವಣೆಯ ಪರಾಜಿತ ಅಭ್ಯರ್ಥಿ ಹೆಚ್ ಸಿ ಯೋಗೀಶ್ ಸಾವರ್ಕರ್ ಬಾವುಟ ಹಿಡಿದು ಕುಣಿದಿರುವ ವಿಡಿಯೋ ವೈರಲ್ ಮಾಡಲಾಗಿದೆ.
ಈ ವಿಡಿಯೋ ವೈರಲ್ ಮಾಡಿರುವ ಉದ್ದೇಶ ಇಷ್ಟೆ ಹಿಂದೂ ಕಟ್ಟರ್ ವಾದಿ ಸಾವರ್ಕರ್ ಭಾವಚಿತ್ರದ ಕೇಸರಿ ಬಾವುಟವನ್ನ ಕಾಂಗ್ರೆಸ್ ಮುಖಂಡ ಹಿಡಿದಿರುವುದನ್ನ ವೈರಲ್ ಮಾಡಲಾಗುತ್ತಿದೆ.
ಇದನ್ನೂ ಓದಿ-https://suddilive.in/2023/09/28/ಅಭಿಮಾನ-ಮೆರೆದ-ಅಭಿಮಾನಿಗಳು/
