ಗೌರವ ಪೂರಕವಾಗಿ ನಡೆದ ಪೊಲೀಸ್ ಹುತಾತ್ಮ ದಿನಾಚರಣೆ

ಸುದ್ದಿಲೈವ್/ಶಿವಮೊಗ್ಗ

ಕಾನೂನು ಸುವ್ಯವಸ್ಥೆಗಾಗಿ 179 ಜನ ಪೊಲೀಸರು ಹುತಾತ್ಮರಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಅವರು ನಗರದ ಡಿಎಆರ್ ಗ್ರೌಂಡ್ ನಲ್ಲಿ ನಡೆದ ಹುತಾತ್ಮರ ದಿನಾಚರಣೆಯ ದಿನದಂದು ಸಭೀಕರನ್ನ ಉದ್ದೇಶಿಸಿ ಮಾತನಾಡಿ ಕರ್ನಾಟಕದಲ್ಲೂ ಪೊಕೀಸರು ಕಾನೂನು ಸುವ್ಯವಸ್ಥೆಗೆ ಗೌರವಕೊಟ್ಟು ಬಲಿದಾನವಾಗಿದ್ದಾರೆ ಎಂದರು.
ದೇಶದ ಯಾವುದೇ ಮೂಲೆಯಲ್ಲಿ ಏನೇ ಘಟನೆ ಸಂಭವಿಸಿದರು ಮೊದಲು ಗೊತ್ತಾಗುವುದೇ ಪೊಲೀಸರಿಗೆ. ಈ ಹಿಂದೆ ಇದ್ದ 100 ದೂರವಾಣಿ ಸಂಖ್ಯೆಗೆ ಬದಲಾಗಿ 112 ದೂರವಾಣಿ ಸಂಖ್ಯೆಯನ್ನ ಬಳಸಲಾಗುತ್ತಿದೆ. ಇದರಿಂದ ಮೊದಲು ಪೊಲೀಸರಿಗೆ ಮೊದಲ ಘಟನೆ ತಿಳಿಯಲಿದೆ. ಅ.21ರಂದು ದೇಶದ್ಯಂತ ಪೊಲೀಸ್ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ಹುತಾತ್ಮ ಪೊಲೀಸರ ಸ್ಮಾರಕಕ್ಕೆಗಣ್ಯರು ಸೇರಿದಂತೆ, ಪೊಲೀಸ್ ಅಧಿಕಾರಿಗಳಿಂದ, ಪುಷ್ಪಗುಚ್ಛ ಸಮರ್ಪಿಸಿ ಗೌರವಿಸಲಾಯಿತು. ಪೊಲೀಸ್ ಹುತಾತ್ಮರ ಸ್ಮರಣಾರ್ಥವಾಗಿ, 3 ಬಾರಿ ಗಾಳಿಯಲ್ಲಿ ಗುಂಡು ಹಾರಿಸಲಾಯಿತು.
ಪೊಲಿನ್ ಬ್ಯಾಂಡ್ ಮೂಲಕ ಗೌರವ ಅರ್ಪಿಸಲಾಗಿದೆ. ಎಸ್ಪಿ ಮಿಥುನ್ ಕುಮಾರ್ ಹುತಾತ್ಮರಾದ 179 ಜನ ಪೊಲೀಸರ ಹೆಸರನ್ನ ಪ್ರಕಟಿಸಿದರು. ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ ಮೊದಲಾದವರು ಉಪಸ್ಥಿತರಿದ್ದರು.
