ಡಿಸೆಂಬರ್ ಅಂತ್ಯಕ್ಕೆ ರೈಲ್ವೆ ಒವರ್ ಬ್ರಿಡ್ಜ್ ಲೋಕಾರ್ಪಣೆ-ಬಿವೈಆರ್

ಸುದ್ದಿಲೈವ್/ಶಿವಮೊಗ್ಗ

ಆಗಸ್ಟ್ ವೇಳೆಗೆ ಸಾರ್ವಜನಿಕರ ಅನುಕೂಲಕ್ಕೆ ಬಳಕೆ ಆಗಬೇಕಿದ್ದ ಸವಳಂಗ ರಸ್ತೆ ಮತ್ತು ವಿದ್ಯಾನಗರ ರೈಲ್ವೆ ಓವರ್ ಬ್ರಿಡ್ಜ್ ಈ ವರ್ಷದ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಆಗಸ್ಟ್ 15 ಕ್ಕೆ ಸವಳಂಗ ಮತ್ತು ವಿದ್ಯಾನಗರದ ರೈಲ್ವೆ ಮೇಲು ಸೇತುವೆ ಉದ್ಘಾಟನೆಯಾಗುವ ನಿರೀಕ್ಷೆ ಇತ್ತು. ಆದರೆ ಡಿಸೆಂಬರ್ ಗೆ ಜನರ ಬಳಕೆಗೆ ಬರಬಹುದು ಎನ್ನಲಾಗಿದೆ.
ಇಂದು ಸಂಸದ ಬಿ.ವೈ.ರಾಘವೇಂದ್ರ ಸವಳಂಗ ರಸ್ತೆಯ ರೈಲ್ವೆ ಓವರ್ ಬ್ರಿಡ್ಜ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿಸೆಂಬರ್ ವೇಳೆಗೆ ಶಿವಮೊಗ್ಗ- ಸವಳಂಗ ರಸ್ತೆಯ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಗಿದು ವಾಹನ ಸಂಚಾರಕ್ಕೆ ಮುಕ್ತ ವಾಗಲಿದೆ ಎಂದು ಹೇಳಿದರು.
120 ಕೋಟಿ ವೆಚ್ಚದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ರೈಲ್ವೆ ಮೇಲೇತುವೆ ಕಾಮಗಾರಿ ಆಗುತ್ತಿದೆ. ಏಳು ತಾಲೂಕಿನಿಂದ ಜನರು ಬಂದಾಗ ಟ್ರಾಫಿಕ್ ಸಮಸ್ಯೆ ಉಲ್ಬಣ ಆಗುತ್ತಿತ್ತು .ರೈಲ್ವೆ ಡಿಪೋ ಆಗುತ್ತಿದೆ ಜೊತೆಗೆ ಶಿವಮೊಗ್ಗ ರಾಣೆಬೇನ್ನೂರು ರೈಲ್ವೆ ಕಾಮಗಾರಿ ನಡೆಯುತ್ತಿದೆ ಹಾಗಾಗಿ ಬರುವಂತ ದಿನಗಳಲ್ಲಿ ರೈಲ್ವೆಗಳ ಹೆಚ್ಚಾಗಲಿದೆ ಎಂದರು.
ರೈಲ್ವೆ ಓಡಾಟದಿಂದ ಶಾಲೆಗೆ ಹೋಗುವ ಮಕ್ಕಳಿಗೆ, ಆಫೀಸ್ ಗೆ ಹೋಗುವವರಿಗೆ ಅನುಕೂಲವಾಗಲಿದೆ. ಹಾಗಾಗಿ ಮೋದಿ ಅವರ ಸರ್ಕಾರ ಹಾಗೂ ಯಡಿಯೂರಪ್ಪ ನವರು ಮುಖ್ಯಮಂತ್ರಿ ಇದ್ದಾಗ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಅನುಮೋದನೆ ನೀಡಲಾಗಿತ್ತು ಎಂದರು.
35 ಕೋಟಿ ಸವಳಂಗ ರಸ್ತೆಯ ಆರ್ ಒಬಿ ಮತ್ತು ಆರ್ ಯು ಬಿ ನಿರ್ಮಾಣವಾಗುತ್ತಿದ್ದರೆ. 45 ಕೋಟಿಯಲ್ಲಿ ವಿದ್ಯಾನಗರದ ರಯಲ್ವೆ ಓವರ್ ಬ್ರಿಡ್ಜ್ ನಿರ್ಮಾಣವಾಗುತ್ತಿದೆ. ಸೆ.29 ರಂದು ಬೋಸ್ಟಿಂಗ್ ರಾಡರ್ ಕೂರಿಸಲು ರಾಡರ್ ಏರಿಸಲು ರೈಲ್ವೆ ಅನುಮತಿ ನೀಡಿದ್ದರು. ರಸ್ತೆಯ ಎರಡು ಕೊಂಡಿಗಳನ್ನ ಸೇರಿಸಲು ಬೋಸ್ಟಿಂಗ್ ರಡಾರ್ ನ್ನ ಕೂರಿಸಲಾಗುತ್ತದೆ. ಈ ಕಾರ್ಯ ಮುಗಿದು ಮತ್ತೆ ಒಂದು ತಿಂಗಳು ಸಣ್ಣಪುಟ್ಟ ಕೆಲಸಗಳು ಹಿಡಿಯಲಿದೆ. ವಿದ್ಯಾನಗರದ ಓವರ್ ಬ್ರಿಡ್ಜ್ ನ್ನ ರಾಷ್ಟ್ರೀಯ ಹೆದ್ದಾರಿಯಿಂದ ನಿರ್ಮಿಸಲಾಗುತ್ತಿದೆ.
ಇದನ್ನೂ ಓದಿ-https://suddilive.in/archives/1515
