ಹಿಂದೂಗಳ ಮನೆಗಳೆ ಟಾರ್ಗೆಟ್-ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಿಂದೂ ಸಂಘಟನೆ ಆರೋಪ

ಸುದ್ದಿಲೈವ್/ಶಿವಮೊಗ್ಗ

ರಾಗಿಗುಡ್ಡದಲ್ಲಿ ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ವಿನಾಕಾರಣ ಮನೆಗಳ ಮೇಲೆ ಕಲ್ಲು ಎಸೆದ ಮೆರವಣಿಗೆಯ ಹಾಗೂ ಅಮಾಯಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ವಿಶ್ವಹಿಂದೂ ಪರಿಷತ್ ಬಜರಂಗದಳ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಅ.01ರಂದು ಈದ್ ಮೆರವಣಿಗೆಯ ಸಂದರ್ಭದಲ್ಲಿ ರಾಗೀಗುಡ್ಡ ಮತ್ತು ಶಾಂತಿನಗರ ಭಾಗದಲ್ಲಿ ಏಕಾಏಕಿ ಮೆರವಣಿಗೆಯಲ್ಲಿ ಹಿಂದೂ ಬಾಂಧವರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ಹಾಗೂ ಮನೆಯಲ್ಲಿದ್ದ ಹಿಂದೂ ಅಮಾಯಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಗಲಾಟೆ ಮಾಡಿರುತ್ತಾರೆ.
ಈ ಗಲಾಟೆ ಮತ್ತು ಹಲ್ಲೆಯು ಉದ್ದೇಶಪೂರ್ವಕವಾಗಿದ್ದು, ಆ ಭಾಗದ ಹಿಂದೂಗಳಿಗೆ ಭಯದ ವಾತಾವರಣ ಸೃಷ್ಟಿಸಲು ಸಂಚು ರೂಪಿಸಿರುತ್ತಾರೆ. ಮತ್ತು ನಗರದಲ್ಲಿ ಅಶಾಂತಿಯ ವಾತಾವರಣ ಉಂಟು ಮಾಡಲು ಸಹಾ ಯೋಜನೆ ಮಾಡಲಾಗುತ್ತು. ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಗರದಲ್ಲಿ ಪ್ರಚೋದನಕಾರಿ ಕಟೌಟ್‌ಗಳು ನಿರ್ಮಿಸಿದ್ದು, ಇದೂ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನಕಾರಿ ಕಟೌಟ್‌ಗಳನ್ನು ನಿರ್ಮಿಸಿ ಶಿವಮೊಗ್ಗ ನಗರದ ಶಾಂತಿಯುತ ವಾತಾವರಣವನ್ನು ಹಾಳು ಮಾಡುವ ಉದ್ದೇಶದಿಂದ ಜಿಹಾದಿ ಮನಸ್ಥಿತಿಯು ಸಂಚಿತ ಪಿತೂರಿ ನಡೆಸುತ್ತಿದ ಎಂದು ಮನವಿಯಲ್ಲಿ ದೂರಲಾಗಿದೆ.
ಘಟನೆಗಳಲ್ಲೂ ಕೂಡ ನಿಷೇಧಿತ ಸಂಘಟನೆಯಾದ ಪಿ.ಎಫ್.ಐ. ನ ಕಾರ್ಯಕರ್ತರು ನೇರ ಭಾಗಿಯಾಗಿದ್ದಾರೆ. ಇದೂ ಕೂಡಾ ಸಾಬೀತಾಗಿರುತ್ತದೆ. ಹಾಗಾಗಿ ಅಲ್ಲಿ ನೆಲೆಸಿರುವ ಹಿಂದು ಬಾಂಧವರಿಗೆ ಸೂಕ್ತ ರಕ್ಷಣೆ ನೀಡಿ ಮತ್ತು ಅಮಾಯಕ ಹಿಂದೂಗಳ ಮೇಲೆ ಹಾರುವ ಮೊಕದ್ದಮೆಗಳನ್ನು ತೆರವುಗೊಳಿಸಿ ಉದ್ದೇಶಪೂರ್ವಕವಾಗಿ ನಡೆಸಿರುವ ಕಿಡಿಗೇಡಿ ಕೃತ್ಯವನ್ನು ನಡೆಸಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಮನವಿ ಮಾಡಿಕೊಂಡಿದೆ.
ಇದನ್ನೂ ಓದಿ-https://suddilive.in/archives/741
