ಸ್ಥಳೀಯ ಸುದ್ದಿಗಳು

ಕುತೂಹಲಕ್ಕೆ ಕಾರಣವಾದ ಎಪಿಎಂಸಿ ಯಾರ್ಡ್ ನಲ್ಲಿ ನಡೆದ ಮರಗಳ ಕಡಿತಲೆ

ಸುದ್ದಿಲೈವ್/ಶಿವಮೊಗ್ಗ

ಎಪಿಎಂಸಿ ಯಾರ್ಡ್ ನಲ್ಲಿ  ಮಳಿಗೆಗಳನ್ನ ನಿರ್ಮಿಸುವ ವೇಳೆ ಬೆಲೆಬಾಳುವ ಮರಗಳನ್ನ ಜೆಸಿಬಿಯಲ್ಲಿ ಕಿತ್ತುಹಾಕಿರುವುದು ಈಗ ಸುದ್ದಿಯಾಗಿದೆ. ಆದರೆ ಎಪಿಎಂಸಿ ಕಾಮಗಾರಿಗಳಿಗೆ ಮರ ತೆಗೆಯುವ ಅನುಮತಿಯನ್ನ ಅರಣ್ಯ ಇಲಾಖೆಯಿಂದ ಪಡೆಯದೆ ತೆಗೆದಿರುವುದು ಚರ್ಚೆಗೆ ಕಾರಣವಾಗಿದೆ.

ಎಪಿಎಂಸಿಯಲ್ಲಿ ಸನ್ ಡೇ ಶಾಪ್ ಕಾಮಗಾರಿ ಆರಂಭಗೊಂಡಿದೆ. ಸನ್ ಡೇ ಶಾಪ್ ಕಾಮಗಾರಿ ಮಾಡಲು ಆವರಣದಲ್ಲಿದ್ದ ಮರಗಳನ್ನ ತೆಗೆಯಲಾಗಿದೆ. ಇದರಲ್ಲಿ ಸಾಗುವಾನಿ, ಶ್ರೀಗಂಧ, ಹಾಗೂ ಹಲಸಿನ ಮರಗಳನ್ನ ತೆಗೆದಿರುವುದು ಚರ್ಚೆಗೆ ಕಾರಣವಾಗಿದೆ.

ಈ ಮರಗಳನ್ನ ತಗೆಯಲು ಅರಣ್ಯ ಇಲಾಖೆ ಅನುಮತಿ ಪೇಯಬೇಕಿದೆ. ಇಲಾಖೆಯ ಅನುಮತಿ ಪಡೆಯದೆ ಬೆಲೆಬಾಳುವ ಮರಗಳ ಬೇರು ಸಮೇತ ಕಿತ್ತು ಹಾಕಲಾಗಿದೆ. ಆದರೆ ಎಪಿಎಂಸಿ ಕಾರ್ಯದರ್ಶಿ ಗಳು ಮರದ ಸುತ್ತ ಪೊದೆ ಬೆಳೆದಿತ್ತು ಪೊದೆ ತೆರವುಗೊಳಿಸುವಾಗ ಅಚಾನಕ್ ಆಗಿ ಒಂದು ಮರ ಕೆಡವಲಾಗಿದೆ. ಅದನ್ನ‌ಬೇರೆಡೆ ನೆಡಲಾಗುವುದು ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಆದರೆ ಒಬ್ಬ ಸಾಮಾನ್ಯ ಒಂದು ವೇಳೆ ಮರ ಕಡಿತಲೆ ನಡೆಸಿದರೆ ಅರಣ್ಯ ಏನೇನು ರೋಧನೆ ಕೊಡುವುದರ ಬಗ್ಗೆ ಎಲ್ಲರಿಗೂ ತಿಳಿದಿದೆ. ಅದೇ ರೀತಿ ನಡೆಯುತ್ತಾ ಅಥವಾ ದಂಡಕ್ಕೆ ಸೀಮಿತಗೊಳ್ಳುತ್ತಾ ಎಂಬ ಕಿತೂಹಲಕ್ಕೆ ಈ ಪ್ರಕರಣ ಕಾರಣವಾಗಿದೆ.

ಇದನ್ನೂ ಓದಿ-https://suddilive.in/archives/4458

Related Articles

Leave a Reply

Your email address will not be published. Required fields are marked *

Back to top button