ಚೋರಡಿ ಬಳಿ ಕಾಡಾನೆ ಹಾವಳಿ-ಸಕ್ರಬೈಲಿನ ಭಾನುಮತಿಯ ಮೇಲೆ ಹಲ್ಲೆ?

ಸುದ್ದಿಲೈವ್ /ಶಿವಮೊಗ್ಗ

ಕಳೆದ ವಾರದ ಹಿಂದಷ್ಟೆ ತೀರ್ಥಹಳ್ಳಿ ತಾಲೂಕು ತಳಲೆ ಗ್ರಾಮದಲ್ಲಿ ಕಾಡಾನೆ ಒಂದು ಹಾವಳಿ ನಡೆಸಿ ಅಡಿಕೆ ಮತ್ತು ಭತ್ತದ ಫೈರುಗಳನ್ನ ಹಾಳು ಮಾಡಿತ್ತು. ಅದರ ಬೆನ್ನಲ್ಲೇ ತಾಲೂಕಿನ ಚೋರಡಿ ಬಳಿ ಕಾಡಾನೆ ಹೊಲಗಳಿಗೆ ಲಗ್ಗೆ ಇಟ್ಟು ಅಡಿಕೆ, ಭತ್ತ, ಬಾಳೆಗಿಡಗಳನ್ನ ಹಾಳು ಮಾಡಿದೆ.
ಮೆಕ್ಕೆ ಜೋಳ ತೆನೆ ಬಿಡುವ ವೇಳೆ ಆನೆಗಳ ಹಾವಳಿ ಲೆನಾಡಿನಲ್ಲಿ ಮಾಮೂಲಿಯಾದರೂ, ಆನೆಗಳ ದಾಳಿಗೆ ಗ್ರಾಮಸ್ಥರು ಭಯ ಪಟ್ಟಿದ್ದಾರೆ. ಅರಣ್ಯ ಇಲಾಖೆಯವರು ಚೋರಡಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭಾನುಮತಿಯ ಮೇಲೆ ಕತ್ತಿಯಿಂದ ನಡೆಯಿತಾ ಹಲ್ಲೆ
ಸಕ್ಕರೆ ಬೈಲಿನಲ್ಲಿರುವ ಭಾನುಮತಿ ಆನೆಯ ಬಾಲದ ಮೇಲೆ ಗಾಯಗಳಾಗಿದ್ದು, ಈ ಗಾಯ ಆಯುಧಗಳಿಂದ ನಡೆಸಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಕಿಡಿಗೇಡಿಗಳು ಆಯುಧದಿಂದ ಹಲ್ಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆಅರಣ್ಯ ವನ್ಯಜೀವಿ ಇಲಾಖೆ ದೂರು ದಾಖಲಿಸುವ ಸಾಧ್ಯತೆ ಹೆಚ್ಚಿದ್ದು ತನಿಖೆ ನಡೆಸುವ ಸಾಧ್ಯತೆ ಇದೆ.
ನಿನ್ನೆ ಸಕ್ರಬೈಲಿನ ಕಾಡಿನಲ್ಲಿ ಭಾನುಮತಿಯ ಬಾಲದ ಮೇಲೆ ಹಲ್ಲೆಯಾಗಿರುವುದನ್ನ ಕಾವಾಡಿಗಳು ನೋಡಿದ್ದಾರೆ. ಡಾ.ವಿನಯ್ ನಂತರ ಬಾಲದ ಮೇಲೆ ಆಗಿರುವ ಸ್ಟಿಚ್ ಹಾಕಿ ಚಿಕಿತ್ಸೆ ನೀಡಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ದೂರು ದಾಖಲಿಸುವ ಸಾಧ್ಯತೆ ಹೆಚ್ಚಿದೆ. ತುಂಗನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ಪ್ರಕರಣ ತನಿಖೆ ನಡೆಯುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ-https://suddilive.in/archives/1402
