ಬಜಾರನ ರಾಜಬೀದಿಯಲ್ಲಿ ಗಣಪ-ನೂಕು ನುಗ್ಗಲಿನಲ್ಲಿ ಭಕ್ತರು

ಸುದ್ದಿಲೈವ್/ಶಿವಮೊಗ್ಗ

79 ನೇ ವರ್ಷದ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಗಾಂಧಿ ಬಜಾರ್ ಪ್ರವೇಶಿಸಿದರೂ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಬಜಾರ್ ನ ಕನ್ನಿಕಾ ಪರಮೇಶ್ವರಿ ದೇಗುಲದ ಬಳಿ ಬರಲು ಸುಮಾರು ಎರಡರಿಂದ ಮೂರು ಗಂಟೆ ಅಧಿಕ ಸಮಯ ಪಡೆದಿದೆ.
ಗಾಂಧಿ ಬಜಾರ್ ನಲ್ಲಿ ದಕ್ಷಿಣ ಪಥೇಶ್ವರ ಬಾವುಟ, ಆಂಜನೇಯ ನ ಬಾವುಟಗಳ ಪ್ರದರ್ಶನ, ವಾದ್ಯಗಳ ಮೇಳ, ಯುವಕರ ಕುಣಿತಗಳು ಜೋರಾಗಿ ನಡೆದಿದೆ. ಬಸವೇಶ್ವರ ದೇವಸ್ಥಾನದಲ್ಲಿ ಯುವಕರ ನೃತ್ಯಗಳು, ಘೋಷಣೆಗಳು ಮುಗಿಲುಮುಟ್ಟಿವೆ. ಪಟಾಕಿ ಸಿಡಿತಗಳು ಅತಿ ಹೆಚ್ಚು ಕೇಳಿ ಬಂದಿದೆ.
ಮಸೀದಿ ಬಳಿ ಐಜಿಪಿ ತ್ಯಾಗರಾಜನ್ ಎಸ್ಪಿ ಮಿಥುನ್ ಕುಮಾರ್, ಡಿಸಿ ಡಾ.ಸೆಲ್ವಮಣಿ ಮತ್ತು ಅನೇಕ ಪೊಲೀಸ್ ಮತ್ತ ಆಋ ಎಎಫ್ ಪೊಲೀಸ್ ಸಿಬ್ಬಂದಿಗಳು ನಿಯೋಜಿಸಲಾಗಿದೆ. ಬಿಗಿ ಬಂದೋಬಸ್ತ ನಡುವೆ ಗಣಪ ಗಾಂಧಿ ಬಜಾರ್ ನಲ್ಲಿ ಸಾಗಿದೆ.
ಕಳೆದ ಬಾರಿ ಇದ್ದ ಫೋಟೊಗಳು ಈ ಬಾರಿ ಇಲ್ಲ

ಕಳೆದ ಬಾರಿ ಇದ್ದ ಹರ್ಷ, ಅಪ್ಪು ಫೋಟೊಗಳು,ಚಂದ್ರ ಶೇಖರ್ ಆಜಾದ್ ಫೊಟೊಗಳು ಈ ಬಾರಿ ಬಜಾರ್ ನಲ್ಲಿ ಕಾಣ ಸಿಕ್ಕಿಲ್ಲ. ಕಖೆದ ಬಾರಿ ಇದಕ್ಕೂ ಹಡಚ್ಚು ಮತ್ತು ವಿವಾದಾತ್ಮಕ ಫೊಟೊಗಳು ಇಲ್ಲವಾಗಿವೆ.
ಇದನ್ನೂ ಓದಿ-https://suddilive.in/2023/09/28/ಕೆಲವೇ-ನಿಮಿಷಗಳಲ್ಲಿ-ರಾಮಣಣ/
