ಕಿಡಿಗೇಡಿಗಳು ಮಾಡಿದ ಎಡವಟ್ಟಿಗೆ ತಮ್ಮ ಮಾತಿನಲ್ಲೇ ಚಾಟಿ ಬೀಸಿದ ಯುವ ಪತ್ರಕರ್ತ

ಸುದ್ದಿಲೈವ್/ಶಿವಮೊಗ್ಗ

ಸದ್ಯ ಶಿವಮೊಗ್ಗದಲ್ಲಿ ಬಾರಿ ಚರ್ಚೆ ಆಗುತ್ತಿರುವ ಈದ್ ಮಿಲಾದ್ ಹಬ್ಬದ ವಿಷಯದಲ್ಲಿ ರಿಪ್ಪನ್ ಪೇಟೆಯ ಯುವ ಪತ್ರಕರ್ತರೊಬ್ಬರ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈದ್ ಮಿಲಾದ್ ಹಬ್ಬದ ಅಂಗವಾಗಿ ಶಿವಮೊಗ್ಗದಲ್ಲಿ ಔರಂಗಜೇಬ್ ಕಟೌಟ್ ಹಾಕಿದ್ದು ಬಾರಿ ಚರ್ಚೆ ಮಾಡಿತ್ತು. ಅಷ್ಟೇ ಅಲ್ಲದೆ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನೆಡೆಸಿ ಗಲಭೆ ನೆಡೆಸುವ ಪ್ರಯತ್ನ ಮಾಡಿದರು. ಆದರೆ ಕಟೌಟ್ ವಿಚಾರವನ್ನು ಸ್ವತಃ ಎಷ್ಟೋ ಮುಸ್ಲಿಂ ಸಮುದಾಯದವರು ವಿರೋಧ ವ್ಯಕ್ತಪಡಿಸಿದರು.
ಅದರಲ್ಲಿ ರಿಪ್ಪನ್ ಪೇಟೆಯ ಯುವ ಪತ್ರಕರ್ತ ಹಾಗೂ ಯುವ ಸಾಹಿತಿ ರಫಿ ರಿಪ್ಪನ್‌ಪೇಟೆ ಯವರು ತಮ್ಮ ಟ್ವೀಟರ್ ಖಾತೆಯಲ್ಲಿ ಟ್ವೀಟ್ ವೊಂದನ್ನು ಮಾಡಿದ್ದರು. ಅವರು ಮಾಡಿದ ಟ್ವೀಟ್ ನಲ್ಲಿ ಪವಿತ್ರ ಈದ್ ಮಿಲಾದ್ ಹಬ್ಬಕ್ಕೂ ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನನಿಗೂ ಏನು ಸಂಬಂಧ, ಇಸ್ಲಾಂ ಧರ್ಮದ ಯುವ ಪೀಳಿಗೆಗೆ ಪ್ರವಾದಿಯವರ ಜೀವನ ಶೈಲಿ ಆದರ್ಶವಾಗಬೇಕೆ ಹೊರತು ಈ ಔರಂಗಜೇಬ್ ಅಥವಾ ಟಿಪ್ಪು ಸುಲ್ತಾನ್ ಅಲ್ಲ.
ನೀವು ಹೊಡೆಯುವ ಒಂದೊಂದು ಕಲ್ಲು ನಿಮ್ಮ ಯುವ ಪೀಳಿಗೆಯ ಮುಂದಿನ ಭವಿಷ್ಯವನ್ನೇ ಕಸಿಯುತ್ತಿದೆ ಎಂದು ಟ್ವೀಟ್ ಮಾಡಿದ್ದರು.
ಅವರು ಮಾಡಿದ ಟ್ವೀಟ್ ಹಲವರು ಮನಸ್ಸನ್ನು ಕದ್ದಿತು. ನಮ್ಮ ದೇಶಕ್ಕೆ ಇಂತಹ ವ್ಯಕ್ತಿಗಳ ಅವಶ್ಯಕತೆ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಕೂಡ ಆಯಿತು. ಒಟ್ಟಿನಲ್ಲಿ ನಮಗೆ ಆದರ್ಶ ಯಾರು ಎಂಬ ಮಾತನ್ನು ಸಮಾಜದ ಮುಂದೆ ತೆರೆದಿಟ್ಟ ಯುವಪತ್ರಕರ್ತರು ಈಗ ಎಲ್ಲರಿಗೂ ಆದರ್ಶವಾಗಿದ್ದಾರೆ.
ಇದನ್ನೂ ಓದಿ-https://suddilive.in/archives/524
