ಸ್ಥಳೀಯ ಸುದ್ದಿಗಳು

ಆಯನೂರಿಗೆ ಟಿಕೇಟ್‌ ಘೋಷಣೆ-ರಣತಂತ್ರವೇನು?

ಸುದ್ದಿಲೈವ್/ಶಿವಮೊಗ್ಗ

ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಗೆ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಗೆ ಟಿಕೆಟ್ ನೀಡುವ ಮೂಲಕ ಯಡಿಯೂರಪ್ಪನವರ ಭದ್ರಕೋಟೆಯಾದ ಶಿವಮೊಗ್ಗದಲ್ಲಿ ಕಾಂಗ್ರೆಸ್ ತನ್ನ ಪಕ್ಷದ ಬಾವುಟ ಹಾರಿಸಲು ಅಖಾಡ ಸಿದ್ದಪಡಿಸಿಕೊಂಡಿದೆ. ಅಖಾಡ ಯಾರಿಗೆ ಒಲಿಯಲಿದೆ ಎಂಬ ಅಗ್ನಿ ಪರೀಕ್ಷೆ ಜೂನ್ ವರೆಗೆ ಕಾದುನೋಡಬೇಕಿದೆ.

ಆಯನೂರು ಮಂಜುನಾಥ್‌ಗೆ ಎಂಎಲ್‌ಸಿ ಟಿಕೆಟ್‌ ಘೋಷಿಸುವ ಮೂಲಕ ಕಾಂಗ್ರೆಸ್ ಯಡಿಯೂರಪ್ಪರಿಗೆ ಟಾಂಗ್ ನೀಡಲು ಮುಂದಾಗಿದೆ. ಯಡಿಯೂರಪ್ಪನವರ ಗರಡಿಯಲ್ಲಿ ಬೆಳೆದಿರುವ ಆಯನೂರು ಮಂಜುನಾಥ್ ಅನೇಕ ವರ್ಷಗಳಿಂದ ಬಿಜೆಪಿಯ ಕೈಯಲ್ಲೇ ಇದ್ದ ಈ ನೈರುತ್ಯ ಪದವೀಧರ ಕ್ಷೇತ್ರವನ್ನ ಕಾಂಗ್ರೆಸ್ ತನ್ನ ತೆಕ್ಕೆಗೆ ಎಳೆದುಕೊಳ್ಳುವ ಪ್ರಯತ್ನಕ್ಕೆ ಕೈಹಾಕಿದೆ.

ಈ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಪಕ್ಷದ ಹಿರಿಯ ಹಾಗೂ ಮೂಲ ಕಾಂಗ್ರೆಸಿಗರಾಗಿರುವ ಎಸ್ಪಿ ದಿನೇಶ್ ಸಹ ಲಿಂಗಾಯಿತ ಅಭ್ಯರ್ಥಿಯಾದರೂ ಈ ಬಾರಿ ಟಿಕೇಟ್ ಪಡೆಯುವಲ್ಲಿ ಸಾಧ್ಯವಾಗಿಲ್ಲ.‌ ಎರಡು ಬಾರಿ ಎಸ್ಪಿ ದಿನೇಶ್ ಸ್ಪರ್ಧಿಸಿದ್ದರು. ಬಿಎಸ್ ವೈ ಗರಡಿಯಲ್ಲಿ ಬೆಳೆದು ಬಂದ ಆಯನೂರುರನ್ನ ಈ ಬಾರಿ ಕಣಕ್ಕಿಳಿಸಿ ಬಿಜೆಪಿಯನ್ನ ಸೋಲಿಸುವ ರಣತಂತ್ರ ಹೆಣೆಯಲಾಗಿದೆ.

ಇದೇ ಕ್ಷೇತ್ರದ ಶಾಸಕರಾಗಿ, ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಲು ಎಂಎಲ್ ಸಿ ಕ್ಷೇತ್ರಕ್ಕೆ ರಾಜೀನಾಮೆ ಮಾಡಿ, ನಂತರ ಸ್ಪರ್ಧಿಸಿದ ಪಕ್ಷವನ್ನ ತೊರೆದು ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಿ ಮತ್ತೆ ಅದೇ ಕ್ಷೇತ್ರದದ ಸ್ಪರ್ಧೆ ಬಯಸಿರುವ ಆಯನೂರು ಮಂಜುನಾಥ್ ಗೆ ಕಾಂಗ್ರೆಸ್ ಗ್ರೀನ್ ಸಿಗ್ನಲ್ ನೀಡಿದೆ.‌

ಬಿಜೆಪಿ ತನ್ನ ಹಿರಿಯ ನಾಯಕ ಕೆಎಸ್‌ ಈಶ್ವರಪ್ಪನಿಂದ ಬಂಡಾಯದ ಹೋರಾಟ ನಡೆಸುತ್ತಿದ್ದರೂ, ಕೆಎಸ್‌ ಈಶ್ವರಪ್ಪನವರ ಮತ ಸೆಳೆಯಲು ಕಾಂಗ್ರೆಸ್‌ ಮುಂದಾಗಿದೆ. ನೈರುತ್ಯ ಪದವೀಧರ ಕ್ಷೇತ್ರಕ್ಕೆ ಜೂನ್‌ನಲ್ಲಿ ಚುನಾವಣೆ ನಿಗದಿಯಾಗಿದೆ. ಲಿಂಗಾಯತ ಮತದಾರರನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ನಾಯಕರು ಆಯನೂರಿಗೆ ಟಿಕೇಟ್ ನೀಡಿದ್ದಾರೆ ಎನ್ನಲಾಗುತ್ತಿದೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ನಿಕಟವರ್ತಿಯಾಗಿದ್ದ ಮಂಜುನಾಥ್ ಗೆ ತಮ್ನದೇ ಆದ ವರ್ಚಸ್ಸಿದೆ. ಒಮ್ಮೆ ಬಿಜೆಪಿಯ ಗರಡಿಯಿಂದ ಈ ಪದವೀಧರ ಕ್ಷೇತ್ರದ ಶಾಸರಾಗಿರುವ ಆಯನೂರು ಅವರಿಗೆ ಕಾಂಗ್ರೆಸ್ ತಮ್ಮ ಪಕ್ಷಕ್ಕೆ ಕರೆತಂದು ಟಿಕೇಟ್ ನೀಡಿದೆ. 42 ವರ್ಷದಿಂದ ಕಾಂಗ್ರೆಸ್ ನೈರುತ್ಯ ಪದವೀಧರ ಕ್ಷೇತ್ರವನ್ನ ಗೆದ್ದೇ ಇಲ್ಲ. ಈ ಬಾರಿ ಕಾಂಗ್ರೆಸ್ ರಣತಂತ್ರವನ್ನೇ ಬದಲಿಸಿದೆ.

ಪದವೀಧರರು ಎಂದರೆ ಅತಿಥಿ ಉಪನ್ಯಾಸಕರು, ಶಿಕ್ಷಕರು, ಖಾಸಗಿಯಲ್ಲಿರುವ ಪದವೀಧರರು ಮತ ಚಲಾಯಿಸುತ್ತಾರೆ. ಇಷ್ಟುವರ್ಷ ಸರ್ಕಾರಿ ನೌರಕರು ಈ ಪದವೀಧರ ಕ್ಷೇತ್ರಕ್ಕೆ ನೋಂದಣಿ ಆಗುತ್ತಿರಲಿಲ್ಲ. ಈ ಬಾರಿ ಅವಕಾಶ ಕಲ್ಪಿಸಲಾಗಿದೆ. ಈ ಬಾರಿ 80 ಸಾವಿರ ಮತಗಳು ನೋಂದಣಿಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ-https://suddilive.in/archives/11325

Related Articles

Leave a Reply

Your email address will not be published. Required fields are marked *

Back to top button