ಸ್ಥಳೀಯ ಸುದ್ದಿಗಳು

ಕಾಂಗ್ರೆಸ್ ಮುಖಂಡರ ನಡುವಿನ ಆರೋಪ ಪ್ರತ್ಯಾರೋಪ-ಅಚ್ಚರಿ ಮೂಡಿಸಿದ ಸಚಿವರ ಹೇಳಿಕೆ

ಸುದ್ದಿಲೈವ್/ಶಿವಮೊಗ್ಗ

ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ನಡುವೆ ಆರೋಪ ಪ್ರತ್ಯಾರೋಪ ಆರಂಭವಾಗಿದೆ‌. ಆದರೆ ಈ ಕುರಿತು ಜಿಲ್ಲಾ ಉಸ್ತುಅರಿ ಸಚಿವರ ಪ್ರತಿಕ್ರಿಯೆ ಮಾತ್ರ  ಅಚ್ಚರಿ ಮೂಡಿಸಿದೆ.

ನೈರುತ್ಯ ಪದವೀದರ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮತ್ತು ಎಸ್. ಪಿ.ದಿನೇಶ್ ಆಕಾಂಕ್ಷಿಯಾಗಿದ್ದಾರೆ. ಇವರಿಬ್ಬರ ನಡುವೆ ಆರೋಪ ಪ್ರತ್ಯಾರೋಪ ಆರಂಭವಾಗಿದೆ ಆಯನೂರು ಮಂಜುನಾಥ್ ಗೆ ಬಿಜೆಪಿಯಲ್ಲಿರುವವರೆಗೆ ಗುರುಬಲ ಇತ್ತು. ಪಕ್ಷ ಬದಲಾಯಿಸಿದ ನಂತರ ಗುರುಬಲ ಇಲ್ಲವಾಗಿದೆ ಎಂದು ದಿನೇಶ್ ಆರೋಪಿಸಿದ್ದರು.

ಇದಕ್ಕೆ ಪ್ರತ್ಯುತ್ತರವಾಗಿ ಆಯನೂರು ಮಂಜುನಾಥ್ ಸಹ ಗುರುಬಲಕ್ಕೆ ಕುರುಬಲ ಎಂದು ವ್ಯಂಗ್ಯವಾಡಿದ್ದರು. ಅದರ ಜೊತೆ ಪಾಲಿಕೆ ಫ್ಲೆಕ್ಸ್ ನಲ್ಲಿ ಮಾಜಿ ಸದಸ್ಯ ಹೆಚ್ ಸಿ ಯೋಗೀಶ್ ಫೊಟೊ ಇರಲಿಲ್ಲ. ಇದನ್ನ ಪ್ರಶ್ನಿಸಿದ್ದ ಪತ್ರಕರ್ತರಿಗೆ “ಹೂ ಇಸ್ ದಿಸ್ ಯೋಗೀಶ್ ಓಹೋ.. ಪಾಲಿಕೆ ಕಾರ್ಪೊರೇಟರ್ ಬಗ್ಗೆ ಹೇಳ್ತಿರೋದಾ ನೀವು… ಓಕೆ.. ಓಕೆ…” ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದರು.

ಈ ವಿಚಾರವಾಗಿ ಇಂದು ಯೋಗೀಶ್ ಬೆಂಬಲಿಗರು ಸೇರಿದಂತೆ ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ದೂರು ನೀಡಿದ್ದರು. ಇಷ್ಟೆಲ್ಲಾ ಬೆಳವಣಿಗೆ ನಡೆದರೂ ಜಿಲ್ಲಾ ಉಸ್ತುವಾರಿ ಸಚಿವರು ಹೈಕಮ್ಯಾಂಡ್ ಮೇಲೆ ಜವಬ್ದಾರಿ ಹಾಕಿರುವುದು ಅಚ್ಚರಿ‌ಮೂಡಿಸಿದೆ.‌

ಇದನ್ನೂ ಓದಿ-https://suddilive.in/archives/7756

Related Articles

Leave a Reply

Your email address will not be published. Required fields are marked *

Back to top button