ಕಾರು ಕಳ್ಳನ ಬಂಧನ

ಸುದ್ದಿಲೈವ್/ಶಿವಮೊಗ್ಗ

ಹೆಂಡತಿಗೆ ಅನಾರೋಗ್ಯವಿದೆ ಎಂದು ಹೇಳಿ ಕಾರನ್ನ ಸ್ನೇಹಿತನ ಬಳಿಂದ ಪಡೆದುಕೊಂಡು ವಾಪಾಸ್ ಕೊಡದೆ ಮೋಸ ಮಾಡಿದ ಘಟನೆ ಟ್ವಿಸ್ಟ್ ಪಡೆದುಕೊಂಡಿದೆ. ಆರೋಪಿಯನ್ನ ಪತ್ತೆಹಚ್ಚಿರುವ ಪೊಲೀಸರು ಆತನಿಂದ 8 ಕಾರು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿವಮೊಗ್ಗ ಟೌನ್ ಆರ್.ಎಂ.ಎಲ್ ನಗರದ ವಾಸಿ ಸೈಯದ್ ಸಾದಿಕ್ ರವರ ಟಾಟಾ ಇನ್ನೋವಾ ಕಾರನ್ನು ಆತನ ಪರಿಚಯಸ್ಥನಾದ ಕಿರಣ್ ಕುಮಾರ್ @ ಗುಂಡನು ತೆಗೆದುಕೊಂಡು ಹೋಗಿ ಕಾರನ್ನು ವಾಪಾಸ್ ಕೊಡದೇ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಮೋಸ ಮಾಡಿರುತ್ತಾನೆಂದು, ಸೈಯ್ಯದ್ ಸಾದಿಕ್ ರವರು ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರರಕಣದಲ್ಲಿ ಆರೋಪಿ ಹಾಗೂ ಕಾರಿನ ಪತ್ತೆಗಾಗಿ ಜಿಲ್ಲಾರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ. ಕೆ ಮತ್ತು ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಬಾಲರಾಜ್.ಬಿ, ಮೇಲ್ವಿಚಾರಣೆಯಲ್ಲಿ, ದೊಡ್ಡಪೇಟೆ ಪೊಲೀಸ್ ಠಾಣೆಯ ಪಿಐ ಅಂಜನ್ ಕುಮಾರ್, ನೇತೃತ್ವದ ಪಿಎಸ್ಐ ಶ್ರೀಮತಿ ಮಂಜಮ್ಮ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ – ಲಚ್ಚಾನಾಯ್ಕ, ಪಾಲಾಕ್ಷನಾಯ್ಕ, ಪಿಸಿ – ರಮೇಶ್, ನಿತಿನ್ ಮತ್ತು ಚಂದ್ರನಾಯ್ಕ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.
ತನಿಖಾ ತಂಡವು ದಿನಾಂಕಃ 06-11-2023 ರಂದು ಪ್ರಕರಣದ ಆರೋಪಿ ಕಿರಣ್ ಎ @ ಗುಂಡಾ, 35 ವರ್ಷ, ಕಾರು ಚಾಲಕ ವೃತ್ತಿ ಸ್ವಾಮಿ ವಿವೇಕಾನಂದ ಬಡಾವಣೆ, ಶಿವಮೊಗ್ಗ ಟೌನ್* ಈತನನ್ನು ದಸ್ತಗಿರಿ ಮಾಡಿ ಆರೋಪಿತನಿಂದ ಅಂದಾಜು ಮೌಲ್ಯ 10,00,000/- ರೂಗಳ* 2 ಟೊಯೋಟಾ ಇನ್ನೋವಾ ಕಾರು, 3 ಸ್ವಿಫ್ಟ್ ಡಿಸೈರ್ ಕಾರು ಮತ್ತು 3 ಮಾರುತಿ ಸುಜುಕಿ ಎರ್ಟಿಗಾ ಕಾರು ಸೇರಿದಂತೆ *ಒಟ್ಟು 08 ಕಾರುಗಳನ್ನು ಅಮಾನತ್ತು ಪಡಿಸಿ ಕೊಳ್ಳಲಾಗಿರುತ್ತದೆ.
ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.
ಇದನ್ನೂ ಓದಿ-https://suddilive.in/archives/2596
