ನವೆಂರ್ ತಿಂಗಳಿನಿಂದ ಆರಂಭವಾಗಲಿದೆ ಬೆಂಗಳೂರು ಹೊರತುಪಡಿಸಿ ವಿಮಾನ ಹಾರಾಟ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಏರ್ಪೋರ್ಟ್ನಿಂದ ಬೆಂಗಳೂರಿಗೆ ಮಾತ್ರನೇನಾ ವಿಮಾನ ಅನ್ನುವವರಿಗೆ ಇದೀಗ ಶಿವಮೊಗ್ಗದಿಂದ ಗೋವಾ, ತಿರುಪತಿ, ಹೈದರಾಬಾದ್ಗೂ ಹೋಗಬಹುದು ಎನ್ನುವ ಉತ್ತರ ಸಿಕ್ಕಿದೆ. ಹೌದು,. ಸ್ಟಾರ್ ಏರ್ಲೈನ್ಸ್ ಶಿವಮೊಗ್ಗದಿಂದ ಗೋವಾ, ಹೈದರಾಬಾದ್ ಹಾಗೂ ತಿರುಪತಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ,
ಇದೀಗ ಬುಕ್ಕಿಂಗ್ ಕೂಡ ಆರಂಭಿಸಿದೆ. Star Airlines ಸಂಸ್ಥೆಯು ಶಿವಮೊಗ್ಗದಿಂದ ತಿರುಪತಿ, ಗೋವಾ ಮತ್ತು ಹೈದರಾಬಾದ್‌ಗೆ ವಾರದಲ್ಲಿ ಆರು ದಿನ ವಿಮಾನಯಾನ ಸೇವೆ ಆರಂಭಿಸುತ್ತಿದೆ. ನವೆಂಬರ್ 17 ರಿಂದ ಸ್ಟಾರ್ ಏರ್ ತನ್ನ ಸೇವೆ ಆರಂಭಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಈ ಸಂಬಂಧ ಸಂಸ್ಥೆಯ ವೆಬ್ಸೈಟ್ನಲ್ಲಿ ಬುಕ್ಕಿ ಕೂಡ ಆರಂಭವಾಗಿದೆ.
ಗೋವಾ, ತಿರುಪತಿ ಹಾಗೂ ಹೈದ್ರಾಬಾದ್ಗೆ ಸರಿಸುಮಾರು ಒಂದೆ ರೀತಿಯ ದರಪಟ್ಟಿಯಿದ್ದು, ಇವತ್ತೆ ಬುಕ್ ಮಾಡಿದರೆ, INR 12,305.00 , INR 14,545.00 ರೂಪಾಯಿಗಳ ಟಿಕೆಟ್ ಲಭ್ಯವಿದೆ. ಇನ್ನೂ
ಬೆಳಗ್ಗೆ 9.30ಕ್ಕೆ ಹೈದರಾಬಾದ್‌ನಿಂದ ಹೊರಡಲಿದೆ. ಬೆಳಗ್ಗೆ 10.35ಕ್ಕೆ ಶಿವಮೊಗ್ಗ ತಲುಪಲಿದೆ. ಬೆಳಗ್ಗೆ 11ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 12ಕ್ಕೆ ತಿರುಪತಿ ತಲುಪಲಿದೆ. ತಿರುಪತಿಯಿಂದ ಮಧ್ಯಾಹ್ನ 12.35ಕ್ಕೆ ಹೊರಟು ಮಧ್ಯಾಹ್ನ 1.40ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ.
ಮಧ್ಯಾಹ್ನ 1.55ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 2.45ಕ್ಕೆ ಗೋವಾ ತಲುಪಲಿದೆ.ಗೋವಾದಿಂದ ಮಧ್ಯಾಹ್ನ 3.15ಕ್ಕೆ ಹೊರಟು ಸಂಜೆ 4.05ಕ್ಕೆ ಶಿವಮೊಗ್ಗ ತಲುಪಲಿದೆ.ಸಂಜೆ 4.30ಕ್ಕೆ ಶಿವಮೊಗ್ಗದಿಂದ ಹೊರಟು ಸಂಜೆ 5.30ಕ್ಕೆ ಹೈದರಾಬಾದ್ ತಲುಪಲಿದೆ.
ಈ ಕೆಳಗಿನ ಲಿಂಕ್ ಒತ್ತಿ
https://ibook.starair.in/search-schedule
ಇದನ್ನೂ ಓದಿ-https://suddilive.in/archives/1396
