ರಾಜಕೀಯ ಸುದ್ದಿಗಳು

ರಾಜ್ಯಾಧ್ಯಕ್ಷರ ಆಗಮನಕ್ಕೆ ಕಂಗೊಳಿಸುತ್ತಿರುವ ಶಿವಮೊಗ್ಗ

ಸುದ್ದಿಲೈವ್ /ಶಿವಮೊಗ್ಗ

ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜೇಂದ್ರ ಆಗಮಿಸುತ್ತಿದ್ದು, ನಾಳೆ ಬಿಜೆಪಿ ವತಿಯಿಂದ ಸಂಭ್ರಮ ಸಡಗರ ಮುಗಿಲು ಮುಟ್ಟಿದೆ.

ಈ ಕುರಿತು ಸುಧಿಗೋಷ್ಠಿ ನಡೆಸಿದ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ನಾಳೆ ಬೆಕ್ಕಿನಕಲ್ಮಠದಿಂದ ಪಿಇಎಸ್ ಕಾಲೇಜಿನ ವರೆಗೆ ಬೈಕ್ ರ್ಯಾಲಿ ನಡೆಯಲಿದೆ. ಅಲ್ಲಿ ಕಾರ್ಯಕರ್ತರಿಂದ  ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಬಿ.ಎಸ್ ವೈ ಈ ವೇಳೆ ಭಾಗಿಯಾಗಲಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಭಾರತಿ ಶೆಟ್ಟಿ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕ ಚೆನ್ನಬಸಪ್ಪ, ಮಾಜಿ ಸಚಿವೀಶ್ವರಪ್ಪ ಭಾಗಿಯಾಗಲಿದ್ದಾರೆ. ಶಿವಮೊಗ್ಗ ನಗರ ಸ್ವಯಂ ಪ್ರೇರಿತವಾಗಿ ಶೃಂಗಾರಗೊಂಡಿದೆ ಎಂದು ತಿಳಿಸಿದರು.

ನಮ್ಮ ಜಿಲ್ಲೆಗೆ ರಾಜ್ಯಾಧ್ಯಕ್ಷ ಸ್ಥಾನ ದೊರೆತಿರುವುದು ಹೊಸ ಹುರುಪು ತಂದಿದೆ. ಯಾವ ಜಿಲ್ಲೆಗೆ ಹೋಗುತ್ತಾರೋ ಅಲ್ಲಿಯಸ್ಥಳೀತ ಭೂತ್ ಅಧ್ಯಕ್ಷರ ಮನೆಗೆ ಭೇಟಿಯಾಗಲಿದ್ದಾರೆ. ಮರುದಿನ ಶಿಕಾರಿಪುರದಲ್ಲಿ 20 ಸಾವಿರ ಕಾರ್ಯಕರ್ತರ ಭಾರಿ ಬಹಿರಂಗ ಸಭೆ ನಡೆಯಲಿದೆ.

ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ರಾಜ್ಯಾಧ್ಯಕ್ಷ ವಿಜೇಂದ್ರರಿಗೆ ಸನ್ನಾನ ಕಾರ್ಯಕ್ರಮ ನಡೆಯಲಿದೆ. ಬೈಕ್ ರ್ಯಾಲಿ 11 ಗಂಟೆಗೆ ಬೆಕ್ಕಿನಕಲ್ಮಠದಿಂದ ಆರಂಭಾಗುತ್ತದೆ. ಅಮೀರ್ ಅಹ್ಮದ್ ಜೈಲ್ ರಸ್ತೆ, ಸಾಗರ ರಸ್ತೆ ಮೂಲಕ ಪೆಸಿಟ್ ಕಾಲೇಜು ತಲುಪಲಿದ. ವೆಂಕಟೇಶ್ ನಗರ ವಾರ್ಡ್ ಅಧ್ಯಕ್ಷರ ಮನೆಗೆ ಭೇಟಿ ನೀಡಲಿದ್ದಾರೆ.

ಈಗಾಗಲೇ ಬೆಕ್ಕಿನಕಲ್ಮಠದ ವರೆಗೆ ಬಿಜೆಪಿ ಬಾವುಟ ನೆಡಲಾಗಿದೆ. ಸುಮಾರು 2000 ಬಾವುಟ ಕಟ್ಟಲಾಗಿದೆ. ಅಲ್ಲಲ್ಲಿ ರಾಜ್ಯಧ್ಯಕ್ಷರ ಕಟೌಟ್ ಸಹ ನಿರ್ಮಿಸಲಾಗಿದೆ. ಈಗಾಗಲೇ ಐಬಿ ವೃತ್ತದಲ್ಲಿ ರಾಜ್ಯಾಧ್ಯಕ್ಷರ ಕಟೌಟ್ ನಿರ್ಮಿಸಲಾಗಿದೆ.

ಇದನ್ನೂ ಓದಿ-https://suddilive.in/archives/3823

Related Articles

Leave a Reply

Your email address will not be published. Required fields are marked *

Back to top button