ರಾಜಕೀಯ ಸುದ್ದಿಗಳು

ಆಪ್ತ ಸಹಾಯಕನ ವಿರುದ್ಧವೆ ಸಚಿವರು ಗರಂ-ವಿಡಿಯೋ ವೈರಲ್

ಸುದ್ದಿಲೈವ್/ಶಿವಮೊಗ್ಗ

ಆಪ್ತ ಸಹಾಯಕನ‌ ವಿರುದ್ದವೇ ಸಚಿವ ಮಧು ಬಂಗಾರಪ್ಪ ಗರಂ ಆಗಿರುವ ವಿಡಿಯೋ ವೈರಲ್ ಆಗಿದೆ. ಶಿವಮೊಗ್ಗದ ಶಿವಪ್ಪನಾಯಕನ ವೃತ್ತದಲ್ಲಿ ಆಪ್ತ ಸಹಾಯಕ ಹರೀಶ್ ಮೇಲೆ ಗರಂ ಆಗಿದ್ದಾರೆ.

ನಿನ್ನೆ ಶಿವಪ್ಪ ನಾಯಕ ವೃತ್ತದ ಬಳಿ ಸಾರ್ವಜನಿಕರೊಬ್ಬರು ಮನವಿ ಕೊಡುವ ವೇಳೆ ಹಿಂದಿನಿಂದ ಬಂದ ಆಪ್ತ ಸಹಾಯಕ ಹರೀಶ್ ವಿರುದ್ಧ ಸಚಿವರು ಗರಂ ಆದರು‌ ಕತ್ತೆ ಕಾಯ್ತಿರಾ ಅಲ್ಲಿ,ಎಷ್ಟು ಸಲ ಹೇಳ್ಬೇಕು ನಿಮಗೆ ಎಂದು ಆಕ್ರೋಶ ವ್ಯಕ್ತಪಡಸಿದರು.

ಕೆಲಸ ಮಾಡೋದಾದ್ರೆ ಮಾಡಿ ಇಲ್ಲಾ ಆಚೇ ಹೋಗಿ ಎಂದು ಸಚಿವರು ಆಪ್ತ‌ಸಹಾಯಕನ ವಿರುದ್ಧ  ರೇಗಿದ್ದಾರೆ.  ಈ ಹಿಂದೆ ಕುವೆಂಪು ರಂಗ ಮಂದಿರದಲ್ಲಿ ಮಹಿಳೆಯೊಬ್ಬರು ಹರೀಶ್ ವಿರುದ್ಧವೇ ಸಚಿವರಿಗೆ ಮನವಿ ನೀಡಿದ್ದರು. ಆದರೆ ಇವರು ಪದೇ ಪದೇ ಬಂದು ಮನವಿ ನೀಡುವುದರಿಂದ ಹೆಬಿಚ್ಯುವಲ್ ಎಂದು ದೂರಲಾಗಿತ್ತು.

ಆದರೆ ನಿನ್ನೆ ಸಚಿವರು  ‘ಹರೀಶ್ ಐ ಡೋಂಟ್ ಲೈಕ್ ದಿಸ್”  ಎಂದು ಗದರಿದ್ದಾರೆ. ಗಾಡಿ ನಿಲ್ಲಿಸಿದಾಗ ಬರೋಕೆ ಆಗಲ್ವಾ ನಿಮಗೆ ಎಂದು ರೇಗಿದ್ದಾರೆ. ಒಂದು ನಿಮಿಷ ಇರ್ರೀ, ಯಾವಾಗರ್ರೀ ಹೋಗಿದ್ರಿ ಆಫೀಸ್ ಗೆ ತಲೆ ನಿಮ್ದು ಎಂದು ಮನವಿ ಕೊಡುವವರ‌ ಮೇಲೂ ರೇಗಿದ್ದಾರೆ.

ಇದನ್ನೂ ಓದಿ-https://suddilive.in/archives/8019

Related Articles

Leave a Reply

Your email address will not be published. Required fields are marked *

Back to top button