ರಾಜಕೀಯ ಸುದ್ದಿಗಳು

ಎಚ್ ಕೆ ಪಾಟೀಲ್ ಗೆ ಈಶ್ವರಪ್ಪ ಬಹಿರಂಗ ಸವಾಲು

ಸುದ್ದಿಲೈವ್/ಶಿವಮೊಗ್ಗ

ಎಚ್ ಕೆ ಪಾಟೀಲ್ 24 ಗಂಟೆ ಒಳಗೆ ಈಶ್ವರಪ್ಪ ಹೇಳಿಕೆ ವಾಪಸ್ ಪಡೆಯಬೇಕೆಂಬ ಹೇಳಿಕೆ ನೀಡಿದ ವಿಚಾರ ಕುರಿತು ಮಾಜಿ ಸಚಿವ ಈಶ್ವರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಎಚ್ ಕೆ ಪಾಟೀಲ್ ಹೇಳಿಕೆಯನ್ನು ಸಂತೋಷದಿಂದ ಸ್ವಾಗತ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಎಚ್ ಕೆ ಪಾಟೀಲ್ ನನ್ನ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಲೇಬೇಕು. ನನ್ನ ಬಗ್ಗೆ ಕಾನೂನು ಕ್ರಮ ತೆಗೆದುಕೊಂಡರೆ ಯಾರು ರಾಷ್ಟ್ರದ್ರೋಹಿಗಳು ಇದ್ದಾರಲ್ಲ ಅವರಿಗೆ ಶಿಕ್ಷೆ ಆಗುತ್ತದೆ ನನಗಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ದಕ್ಷಿಣ ಭಾರತವನ್ನು ಬೇರೆ ರಾಷ್ಟ್ರವನ್ನಾಗಿಸುವ ಹೇಳಿಕೆ ನೀಡಿದವರು ದೇಶದ್ರೋಹಿಗಳ ವಿರುದ್ಧ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಉತ್ತರಿಸಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರಿಗೂ ಈ ದೇಶ ಒಂದು ಎಂದು ಎದೆತಟ್ಟಿ ಹೇಳಿದ್ದಾರೆ. ಡಿಕೆ ಸುರೇಶ್ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ

ಎಚ್ ಕೆ ಪಾಟೀಲರಿಗೆ ಸವಾಲ್ ಹಾಕುತ್ತೇನೆ ನೀವು ಎಷ್ಟು ಸಮಯ ಬೇಕಾದರೂ ತೆಗೆದುಕೊಳ್ಳಿ ನನ್ನ ಮೇಲೆ ಕೇಸು ಹಾಕಿ. ಇದು ನನ್ನ ಸವಾಲು ನ್ಯಾಯಾಲಯದಲ್ಲಿ ನಿಮಗೆ ಛಿಮಾರಿ ಹಾಕುತ್ತಾರೋ ರಾಷ್ಟ್ರಭಕ್ತರಿಗೆ ಛಿಮಾರಿ ಹಾಕುತ್ತಾರೋ ನೋಡೋಣ ಎಂದು ಸವಾಲು ಎಸೆದಿದ್ದಾರೆ.

ನಿನ್ನೆ ದಾವಣಗೆರೆಯಲ್ಲಿ ಬಿಜೆಪಿ ಜಿಲ್ಲಾ ಪದಗ್ರಹಣ ಕಾರ್ಯಕ್ರಮದಲ್ಲಿ ದೇಶ ಇಬ್ಭಾಗದ ಮಾತನಾಡುವವರ ವಿರುದ್ಧ ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು ಎಂಬ ಹೇಳಿಕೆ ನೀಡಿದ್ದರು. ನಾನು ಹೇಳಿರುವುದು ಗುಂಡಿಕ್ಕಿ ಕೊಲ್ಲಬೇಕು ಎಂಬ ಕಾನೂನು ತರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಾರ್ಥನೆ ಸಲ್ಲಿಸಿದ್ದೆ

ದೇಶ ವಿಭಜನೆ ಪ್ರಯತ್ನ ಮಾಡುವ ವಿರುದ್ಧ ಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿ ಎಂದು ಪ್ರಧಾನ ಮೋದಿಯವರಿಗೆ ಕೋರಿದ್ದೇನೆ. ಹೆಚ್ ಕೆ ಪಾಟೀಲ್ ನನ್ನ ಹೇಳಿಕೆಯನ್ನು ಸಂಪೂರ್ಣ ನೋಡಲ್ಲಿ ಅರ್ಧಂಬರ್ಧ ನೋಡಿ ಹೇಳಿಕೆ ನೀಡಿದ್ದಾರೆ. ಎಚ್ ಕೆ ಪಾಟೀಲ್ ಬಗ್ಗೆ ನನಗೆ ಗೌರವವಿದೆ ನಾನು ಹೇಳಿಕೆ ನೀಡುವಾಗ ಜವಾಬ್ದಾರಿ ಇಲ್ಲದೆ ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕನ್ಯಾಕುಮಾರಿಯಿಂದ ಕಾಶ್ಮೀರ ನಮ್ಮದು ಎಂದು ಹೇಳಿಕೆ ನೀಡಿರುವ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಕಟಕಟೆಗೆ ಬರಬೇಕಾಗುತ್ತದೆ. ಕರ್ನಾಟಕಕ್ಕೆ ನೀಡಬೇಕಾದ ಅನುದಾನದ ಬಗ್ಗೆ ಲೋಕಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ನಿರ್ಮಲಾ ಸೀತಾರಾಮನ್ ಉತ್ತರ ಕೊಟ್ಟಿದ್ದಾರೆ. ದಕ್ಷಿಣ ಭಾರತವನ್ನು ಪ್ರತ್ಯೇಕ ರಾಷ್ಟ್ರವನ್ನಾಗಿ ಬೇಕು ಎಂಬ ಹೇಳಿಕೆ ನೀಡುವವರನ್ನು ಹೆಚ್ ಕೆ ಪಾಟೀಲ್ ದೇಶದ್ರೋಹಿ ಎನ್ನುತ್ತಾರಾ ಇಲ್ಲವಾ ಹೇಳಲಿ ಎಂದು ಈಶ್ವರಪ್ಲ ಗುಡುಗಿದ್ದಾರೆ.

ಸ್ವಾಭಾವಿಕವಾಗಿ ನಾನು ಸವಾಲು ಹಾಕೊಲ್ಲ ಕೋರ್ಟ್ಗು ಗೆ ಹೋಗುವುದಿಲ್ಲ ಅವರಿಗೆ ತಾಕತ್ತಿದ್ದರೆ ಕೇಸ್ ಹಾಕಲಿ. ದಾವಣಗೆರೆಯಲ್ಲಿ ನೀಡಿದ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ರಾಷ್ಟ್ರವನ್ನು ಒಡೆಯುವಂತಹ ರಾಷ್ಟ್ರದ್ರೋಹಿಗಳ ಬಗ್ಗೆ ಕಾನೂನು ತರಲು ಪ್ರಧಾನಿಗಳಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ. ಹೇಳಿಕೆ ನೀಡಿದ ಡಿಕೆ ಸುರೇಶ್ ಇವರನ್ನು ಬೆಂಬಲಿಸಿದ ವಿನಯ್ ಕುಲಕರ್ಣಿ ಹಾಗೂ ಡಿಕೆ ಶಿವಕುಮಾರ್ ಇವರೆಲ್ಲರೂ ರಾಷ್ಟ್ರದ್ರೋಹಿಗಳು ಎಂದು ಗುಡುಗಿದರು.

ದೇಶ ಒಡೆಯುವ ಕಾಂಗ್ರೆಸ್ಸಿಗರ ವಿರುದ್ಧ ಗುಂಡಿಕ್ಕಿ ಕೊಲ್ಲುವ ಕಾನೂನನ್ನು ತನ್ನಿ ಎಂದು ಮೋದಿಯವರಿಗೆ ಕೇಳಿದ್ದಕ್ಕೆ ಈಗಲೂ ಬದ್ಧವಾಗಿದ್ದೇನೆ. ರಾಜ್ಯದ ಗೃಹ ಸಚಿವ ಪರಮೇಶ್ವರ ಬಳಿ ಈ ಬಗ್ಗೆ ನಾನು ಕೇಳಿಲ್ಲ.ಇಂತಹ ಕಾನೂನು ತರಲು ಪರಮೇಶ್ವರ್ರಿಂದಲೂ ಸಾಧ್ಯವಿಲ್ಲ ಎಂಬುದು ನನಗೆ ಗೊತ್ತು. ಇಂತಹ ದೇಶ ವಿರೋಧಿ ಭಾವನೆಗಳು ದೂರ ಆಗಬೇಕಾದರೆ ಜಿನ್ನಾ ಸಂಸ್ಕೃತಿಯವರನ್ನು ಗುಂಡಿಕ್ಕಿ ಕೊಲ್ಲಬೇಕೆಂಬ ಕಾನೂನು ತರಬೇಕೆಂದು ಕೇಂದ್ರದವರನ್ನು ಕೇಳಿದ್ದೇನೆ ಎಂದರು.

ನನ್ನ ವಿಚಾರಕ್ಕೆ ಗೃಹ ಸಚಿವ ಪರಮೇಶ್ವರ್ ಅವರದ್ದು ಸಮ್ಮತಿ ಇದೆ ಎಂದು ಭಾವಿಸಿದ್ದೇನೆ. ಕರ್ನಾಟಕದಲ್ಲಿ ಮುಸಲ್ಮಾನರನ್ನು ಸಂತೃಪ್ತಿಪಡಿಸಲು ಶಾಲಾ ಪರೀಕ್ಷೆ ವೇಳಾಪಟ್ಟಿ ಬದಲಾವಣೆ ಅಂತ ನೂರಾರು ಪ್ರಯತ್ನಗಳು ನಡೆಯುತ್ತೆ. ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಹಿಂದೂಪರ ಕಾರ್ಯಕರ್ತರ ನೂರಾರು ಎಫ್ಐಆರ್ ದಾಖಲಾದರು ನಾವು ಜಗ್ಗಲ್ಲ ಎಂದರು.

ಕೆಂಪಣ್ಣ ಕಾಂಗ್ರೆಸ್ ಸರ್ಕಾರದ ವಿರುದ್ಧ ಫೋರ್ಟಿ ಪರ್ಸೆಂಟ್ ಹೇಳಿಕೆ ನೀಡಿದ ವಿಚಾರ

ಕೆಂಪಣ್ಣ ಕಾಂಗ್ರೆಸ್ ಏಜೆಂಟ್ ಎಂಬುವುದನ್ನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ.ಬಿಜೆಪಿ ಅಧಿಕಾರವಧಿಯಲ್ಲಿ 40% ಗೆ ಒಂದೇ ಒಂದು ದಾಖಲೆ ನೀಡಲಿಲ್ಲ ಆದರೆ ಸರ್ಕಾರಕ್ಕೆ ಅಪಮಾನ ಮಾಡಿದ್ದರು.

ಯಾವ ಇಲಾಖೆ ಮಂತ್ರಿ ಕೇಳಿದ್ದಾರೆ ಯಾವ ಯೋಜನೆಗೆ ಕೇಳಿದ್ದಾರೆ ಯಾವ ಶಾಸಕರಿಗೆ ಎಷ್ಟು ದುಡ್ಡು ಕೊಡಬೇಕು ಎಂದು ದಾಖಲೆ ಕೊಡಿ.ಅಂದು ನಾಟಕ ಮಾಡಿದಂತೆ ಈಗಲೂ ನಾಟಕ ಮಾಡಬೇಡಿ ಎಂದು ಸಲಹೆ ನೀಡಿದರು.

ಇನ್ನೂ 20 ವರ್ಷ ಬೇಕು

ಕಾಂತರಾಜ್ ವರದಿ ಬಿಡುಗಡೆ ಮಾಡಲು ಇನ್ನು 20 ವರ್ಷ ತೆಗೆದುಕೊಳ್ಳುತ್ತದೆ. ತಕ್ಷಣವೇ ಬಿಡುಗಡೆ ಮಾಡಿ ಮತ್ತೊಂದು ನಾಟಕ ಆಡಬೇಡಿ.ಸಿದ್ದರಾಮಯ್ಯ ಪಾಟೀಲ್ ಮತ್ತು ಅವರ ತಂದೆಯವರು ನಿಜಕ್ಕೂ ರಾಷ್ಟ್ರಭಕ್ತರು ಅಂತವರು ಇಂತಹ ರಾಷ್ಟ್ರದ್ರೋಹಿಗಳ ಬೆಂಬಲಕ್ಕೆ ನಿಂತಾರಲ್ಲ ಎಂದು ಬೇಸರ ಆಗಿದೆ

ಸಿದ್ದರಾಮಯ್ಯ ಸುಳ್ಳಿನಸರದಾರ

ಕಾಂಗ್ರೆಸ್ನವರು ಬ್ಲಾಕ್ ಪೇಪರ್ ಹೊರಡಿಸಿದ್ದ ಬಗ್ಗೆ ಪ್ರತಿಕ್ರಯೆ ನೀಡಿದ ಈಶ್ವಪ್ಪಕೇಂದ್ರ ಸರ್ಕಾರ ಅನುದಾನ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯನವರು ಡ್ರಾಮ ಮಾಡುತ್ತಿದ್ದಾರೆ. ನೂರು ಸಾರಿ ಸುಳ್ಳು ಹೇಳಿದರೆ ಅದು ಸತ್ಯವಾಗುತ್ತದೆ ಎಂಬುದು ಸಿದ್ದರಾಮಯ್ಯನವರ ಭಾವನೆ. ಯುಪಿ ಮತ್ತು ಎನ್‌ಡಿಎ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಎಷ್ಟು ಹಣ ಬಂದಿತ್ತು ಎಂದು ಸಿದ್ದರಾಮಯ್ಯ ಶ್ವೇತಾ ಪತ್ರ ಹೊರಡಿಸಲಿ

ಸಿದ್ದರಾಮಯ್ಯ ಶ್ವೇತ ಪತ್ರ ಹೊರಡಿಸಿದರೆ ರಾಜ್ಯದ ಜನತೆಯ ಮುಂದೆ ನಿಮ್ಮ ಸುಳ್ಳೆಲ್ಲಾ ಬಯಲಾಗುತ್ತದೆಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುತ್ತಲೇ ಬಂದಿದ್ದಾರೆ ಅವರು ಶ್ವೇತಪತ್ರ ಹೊರಡಿಸುವುದಿಲ್ಲ. ಜಾತಿ ಜನಗಣತಿಯ ಬಹಿರಂಗ ಮಾಡಿ ಎಂದು ಹೇಳುತ್ತಲೇ ಒಂಬತ್ತು ವರ್ಷ ಆಯ್ತು.ಈ ರಾಜ್ಯಕ್ಕೆ ಇನ್ಮುಂದೆ ಹಿಜಾಬ್ ಬಳಸಬಹುದು ಎಂದಿದ್ದವರು ಮಾರನೇ ದಿನವೇ ಆ ರೀತಿ ಹೇಳಿಲ್ಲ ಎಂದರು.

ಇದನ್ನೂ ಓದಿ-https://suddilive.in/archives/8686

Related Articles

Leave a Reply

Your email address will not be published. Required fields are marked *

Back to top button