ರಾಜಕೀಯ ಸುದ್ದಿಗಳು

ಪ್ರೊ.ಭಗವಾನ್ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸುವಂತೆ ಒಕ್ಕಲಿಗ ಸಮುದಾಯ ಆಗ್ರಹ

ಸುದ್ದಿಲೈವ್/ಶಿವಮೊಗ್ಗ

ಪ್ರೊಫೆಸರ್ ಭಗವಾನ್ ವಿರುದ್ಧ ಒಕ್ಕಲಿಗ ಸಮುದಾಯ ಪ್ರತಿಭಟನೆಗೆ ಇಳಿದಿದೆ. ಶುಕ್ರವಾರ ಮಹಿಷ ಉತ್ಸವ ಕಾರ್ಯಕ್ರಮದಲ್ಲಿ ಪ್ರೊ.ಭಗವಾನ್ ಒಕ್ಕಲಿಗರು ಸಂಸ್ಕೃತಿ ಹೀನರೆಂದು ಅವಹೇಳನಕಾರಿ ಹೇಳಿಕೆ ನೀಡಿರುವುದನ್ನ ಖಂಡಿಸಿ ಇಂದು ಜಿಲ್ಲಾ ಒಕ್ಕಲಿಗ ಸಮುದಾಯ ಜಿಲ್ಲಾ ರಕ್ಷಾಧಿಕಾರಿ ಮಿಥುನ್ ಕುಮಾರ್ ಜಿ.ಕೆಗೆ ಮನವಿ ಸಲ್ಲಿಸಿದ್ದಾರೆ.

ಒಕ್ಕಲಿಗ ಸಮುದಾಯದ ಬಗ್ಗೆ ಕೀಳು ಮಟ್ಟದ ಭಾಷೆಯನ್ನು ಉಪಯೋಗಿಸಿ ಮಾತನಾಡಿದ್ದಾರೆ. ಒಕ್ಕಲಿಗರು ಹೀನ ಜಾತಿಯವರು ನೀಚರು ಎನ್ನುವ ಪದ ಬಳಸಿದ್ದಾರೆ. ಒಂದು ಹೆಜ್ಜೆ ಮುಂದು ಹೋಗಿ ಇದಕ್ಕೆ ರಾಷ್ಟ್ರಕವಿ ಯುಗದ ಕವಿ ಕುವೆಂಪು ಹೆಸರನ್ನು ತಳಕು ಹಾಕಿದ್ದಾರೆ. ಕುವೆಂಪು ತಮ್ಮ ಗದಕಾವ್ಯದಲ್ಲಿ ಈ ಪದಗಳನ್ನು ಯಾವ ಉದ್ದೇಶಕ್ಕೆ ಬಳಸಿದ್ದರು ಗೊತ್ತಿಲ್ಲ ಆದರೆ ಪ್ರೊಫೆಸರ್ ಭಗವಾನ್ ಅದೇ ವಿಷಯವನ್ನು ಇಟ್ಟುಕೊಂಡು ಈಗ ಸಮಾಜದ ಸಾಮರಸ್ಯವನ್ನು ಕದಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ಆಕ್ಷೇಪಿಸಿದೆ.

ಒಕ್ಕಲಿಗ ಸಮುದಾಯದವರು ರಾಜ್ಯ ಹಾಗೂ ರಾಷ್ಟ್ರದಲ್ಲಿ ತನ್ನದೇ ಆದ ಚಾಫು ಮೂಡಿಸಿದ್ದಾರೆ. ಪ್ರತಿ ರಂಗದಲ್ಲೂ ಒಕ್ಕಲಿಗ ಸಮುದಾಯದವರು ತಮ್ಮದೇ ಆದ ಸೇವೆಯನ್ನು ನೀಡಿದ್ದಾರೆ ರಾಜಕೀಯ ರಂಗ, ಕ್ರೀಡೆ ,ಶಿಕ್ಷಣ, ಸಾಹಿತ್ಯ , ವ್ಯಾಪಾರ ಉದ್ಯೋಗ ಕೃಷಿ ಸೇರಿದಂತೆ ಕಾರ್ಯಾಂಗ ಶಾಸಕಾಂಗ, ನ್ಯಾಯಾಂಗ ಪತ್ರಿಕಾರಾಂಗಗಳಲ್ಲೂ ತಮ್ಮದೇ ಆದ ವರ್ಚಸ್ಸನ್ನು ಬೆಳೆಸಿಕೊಂಡಿದ್ದಾರೆ. ಸಮಾಜಕ್ಕೆ ಸಾಕಷ್ಟು ಸೇವೆಯನ್ನು ನೀಡಿದ್ದಾರೆ. ಹಿಂದೆ ಬೆಂಗಳೂರನ್ನು ಕಟ್ಟಿದ ಕೆಂಪೇಗೌಡರನ್ನು ಹಿಡಿದು ರಾಷ್ಟ್ರಕವಿ ಯುಗದ ಕವಿ ಕುವೆಂಪು, ರಾಜಕೀಯ ರಂಗದಲ್ಲಿ ತನ್ನದೇ ಆದ ವಿಶಿಷ್ಟ ಹೆಸರು ಗಳಿಸಿದ ಶಾಂತವೇರಿ ಗೋಪಾಲಗೌಡರು ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಅನೇಕ ಗಣ್ಯರು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಹಾಗೂ ನೀಡುತ್ತಿದ್ದಾರೆ.

ಆದರೆ ಇವೆಲ್ಲವನ್ನೂ ಪರಿಗಣಿಗನೆಗೆ ತೆಗೆದುಕೊಳ್ಳದೆ ಕೇವಲ ಸಮಾಜದ ಸಾಮರಸ್ಯವನ್ನು ಹಾಳು ಮಾಡುವ ಉದ್ದೇಶದಿಂದ ಭಗವಾನ್ ವಿರುದ್ಧ ಸೂಕ್ತ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಅಖಿಲ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ರಘುರಾಜ್ ಹೆಚ್‌‌. ಕೆ ಪ್ರಧಾನ ಕಾರ್ಯದರ್ಶಿ ತಾಯಿಮನೆ ಸುದರ್ಶನ್, ಸತೀಶ್ ಪಿಲ್ಲಂಗೆರೆ ರಮೇಶ್ ,ಮಹೇಶ್, ಪ್ರವೀಣ್ ಚಂದ್ರಶೇಖರ್ ,ಪ್ರಜ್ವಲ್ ದೇವರಾಜ್, ಶಿವಕುಮಾರ್ ಪರಮೇಶ್ ,ಅರುಣ , ರಾಜ್ಯ ಸಮಿತಿಯ ಕಾರ್ಯದರ್ಶಿಯಾದ ದಿನೇಶ್, ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಡಾ. ಶಾಂತ ಸುರೇಂದ್ರ ಅಧ್ಯಕ್ಷರಾದ ಪ್ರತಿಮಾ ಡಾಕಪ್ಪಗೌಡ ಪ್ರಧಾನ ಕಾರ್ಯದರ್ಶಿ ಮಮತಾಶಿವಣ್ಣ, ರಜಿನಿ ಪುಷ್ಪಲತಾ, ದೀಪಾ, ವಿಶಾಲಾಕ್ಷಿ ಪದ್ಮಾ, ಹೀಗೆ ಸಾಕಷ್ಟು ಜನ ಸಮುದಾಯದ ಬಂಧುಗಳು ಉಪಸ್ಥಿತರಿದ್ದರು.

ಇದನ್ಬೂ ಓದಿ-https://suddilive.in/archives/1343

Related Articles

Leave a Reply

Your email address will not be published. Required fields are marked *

Back to top button