ಶಿವಪ್ಪ ನಾಯಕ ವೃತ್ತದ ಬಳಿ ಜಿಲ್ಲಾ ಬಿಜೆಪಿ ಭರ್ಜರಿ ಪ್ರತಿಭಟನೆ, ಸಿಎಂ ಸುಳ್ಳ, ಡಿಸಿಎಂ ಕಳ್ಳ ಎಂದು ಘೋಷಣೆ

ಸುದ್ದಿಲೈವ್/ಶಿವಮೊಗ್ಗ

ಗುತ್ತಿಗೆದಾರ ಅಭಿಕಾಪತಿ ಮನೆ ಮತ್ತು ಕಾಂಗ್ರೆಸ್ ಮಾಜಿ ಶಾಸಕ ಮತ್ತು ಹಾಲಿ ಕಾರ್ಪರೇಟರ್ ಮನೆಯ ಮೇಲೆ ಐಟಿ ದಾಳಿಯಲ್ಲಿ ಸಿಕ್ಕ ಕೋಟಿ ಕೋಟಿ ಹಣದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಬಿಜೆಪಿ ಹೋರಾಟಕ್ಕೆ ಮುಂದಾಗಿದೆ. ಇಂದು ಶಿವಮೊಗ್ಗದ ಬಿ.ಹೆಚ್ ರಸ್ತೆಯಲ್ಲಿರುವ ಶಿವಪ್ಪ ನಾಯಕನ ವೃತ್ತದ ಬಳಿ ಜಿಲ್ಕಾ ಬಿಜೆಪಿ ಪ್ರತಿಭಟನೆ ನಡೆಸಿ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದೆ.
ನಗರದ ಶಿವಪ್ಪನಾಯಕ ಪ್ರತಿಮೆ ಎದುರು ಪ್ರತಿಭಟನೆ ನಡೆಸಿರುವ ಪ್ರತಿಭಟನಾಕಾರರು, ಕರ್ನಾಟಕವನ್ನ ಕಾಂಗ್ರೆಸ್ ಎಟಿಎಂ ಮಾಡಿಕೊಂಡಿದೆ ಎಂದು ಆರೋಪಿಸಿದೆ. ಸಿಎಂ ಸುಳ್ಳ, ಡಿಸಿಎಂ ಕಳ್ಳ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದ್ದಾರೆ. ರಾಜ್ಯ ಸರಕಾರ ಹಾಗು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ರಸ್ತೆ ತಡೆಯಿಙದಾಗಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.
ಇದೇ ವೇಳೆ ಮಾಧ್ಯಮಗಳಿಗೆ ಮಾತನಾಡಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ, ಕಾಂಗ್ರೆಸ್‌ನ ಮಾಜಿ ಕಾರ್ಪೊರೇಟರ್ ಮನೆಯಲ್ಲಿ 42 ಕೋಟಿ, ಕಾಂಗ್ರೆಸ್‌ನ ಮಾಜಿ ಶಾಸಕ ಕಾಂತರಾಜು ಮನೆಯಲ್ಲಿ 45 ಕೋಟಿ ಎರಡು ಕಂತುಗಳಲ್ಲಿ ಸಿಕ್ಕಿದೆ. ಇವತ್ತು ನಾಳೆ ನಾಡಿದ್ದು ಎರಡು ಮತ್ತು ಮೂರನೆಯ ಕಂತು ಸಿಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಇದು ಒಂದು ರೌಂಡ್ ಆಯಿತು ಎರಡು ಮತ್ತು ಮೂರನೆಯ ರೌಂಡ್ ನಿಧಾನವಾಗಿ ಸಿಗುತ್ತದೆ. ನೇರವಾಗಿ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಭ್ರಷ್ಟಾಚಾರಕ್ಕೆ ಇದು ಸಾಕ್ಷಿ ನೀಡಿದೆ. 5 ರಾಜ್ಯದ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೇಸ್ ನ ಎರಡು ಕಂತುಗಳ ಹಣ ಸಿಕ್ಕಿದೆ. ಗುತ್ತಿಗೆದಾರ ಕೆಂಪಣ್ಣನನ್ನು ಮಿಡ್ಲು ಮ್ಯಾನ್ ಮಾಡಿಕೊಂಡು ಬಿಜೆಪಿ ವಿರುದ್ಧ ಆರೋಪ ಮಾಡಿದರು ಒಂದೇ ಒಂದು ದಾಖಲೆ ನೀಡಿರಲಿಲ್ಲ. 5 ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಹಣ ಸಂಗ್ರಹ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
ಪತ್ತೆಯಾದ ಹಣ ಯಾರದ್ದು? ತನಿಖೆಯಾಗಲಿ
ಕಾಂಗ್ರೆಸ್ ಸರ್ಕಾರ ಇರುವ ಕಡೆ ಐಟಿ ರೈಡ್ ಯಾಕೆ ಮಾಡುತ್ತಾರೆ ಎಂದು ಕೆಲವರು ಆರೋಪಿಸುತ್ತಾರೆ. ಆದರೆ ಅಕ್ರಮವಾಗಿ ಸಿಕ್ಕಿರುವ ಹಣದ ಬಗ್ಗೆ ಯಾರು ಮಾತನಾಡಲ್ಲ ಯಾಕೆ ಎಂದು ಪ್ರಶ್ನಿಸಿದ ಈಶ್ವರಪ್ಪ, ಈಗ ಸಿಕ್ಕಿರುವ ಅಕ್ರಮ ಹಣದ ಬಗ್ಗೆ ತನಿಖೆಯಾಗಬೇಕು. ತನಿಕೆಯಿಂದ ಈ ಹಣಸಿಎಂ ಸಿದ್ದರಾಮಯ್ಯ ಸೇರಿದ್ದೋ, ಡಿಸಿಎಂ, ಡಿಕೆಶಿ, ಕೆಂಪಣ್ಣ ಇದು ಯಾರಿಗೆ ಸೇರಿದ ಹಣ ಎಂದು ಗೊತ್ತಾಗ ಬೇಕು ಎಂದು ಗುಡುಗಿದ್ದಾರೆ.
ಅಬಕಾರಿಯಲ್ಲಿ ಭ್ರಷ್ಠಾಚಾರ, ಕಲಾವುದರಿಂದ ಲಂಚ
ಅಬಕಾರಿ ಇಲಾಖೆಯಲ್ಲಿ ನೇಮಕಾತಿಗೂ ಭ್ರಷ್ಟಾಚಾರ ಪರವಾನಿಗೆ ಕೊಡಲು ಮತ್ತು ಕ್ಯಾನ್ಸಲ್ ಮಾಡಲು ಭ್ರಷ್ಟಾಚಾರ ನಡೆದಿದೆ. ಅಬಕಾರಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆಸಿ ಪಂಚ ರಾಜ್ಯಗಳ ಚುನಾವಣೆಗೆ ಹಣ ಸಂಗ್ರಹ ಮಾಡಲಾಗುತ್ತಿದೆ. ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದ್ದರೂ ಅದಕ್ಕೆ ಹಣ ವಿನಿಯೋಗ ಮಾಡುತ್ತಿಲ್ಲಕಲಾವಿದರಿಂದಲೂ ಕಮಿಷನ್ ಪಡೆಯುತ್ತಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದರು.
ಕಲಾವಿದರ ಬಳಿ ಹಣ ಕೇಳುತ್ತಾರೆ ಎಂದರೆ ಇವರು ಹಾಗೆ ಹೀಗೆ ಸಾಯೋಲ್ಲ. 40% ಕಮಿಷನ್ ಎಂದು ಬಿಜೆಪಿ ವಿರುದ್ಧ ಆರೋಪ ಮಾಡಿದರು ಒಂದೇ ಒಂದು ದಾಖಲೆ ನೀಡಲಿಲ್ಲ. ಈ ಸರ್ಕಾರದಲ್ಲಿ ಒಂದೊಂದೇ ಹಗರಣ ಹೊರ ಬರುತ್ತಿದೆ. ತಕ್ಷಣ ಎಲ್ಲವೂ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ನಗರಾಧ್ಯಕ್ಷ ಜಗದೀಶ್, ರತ್ನಾಕರ್ ಶೆಣೈ, ಮಂಜುನಾಥ್ ಮೊದಲಾದವರು ಭಾಗಿಯಾಗಿದ್ದರು.
ಇದನ್ಬೂ ಓದಿ-https://suddilive.in/archives/1337
