ರಾಜಕೀಯ ಸುದ್ದಿಗಳು

ಇದು ನಿರ್ವೀರ್ಯ ಸರ್ಕಾರ-ಶಾಸಕ ಚೆನ್ನಿ ವಾಗ್ದಾಳಿ

ಸುದ್ದಿಲೈವ್/ಶಿವಮೊಗ್ಗ

ಪಾಕ್ ಪರ ಘೋಷಣೆ ಆರೋಪ ಜನರ ಮನಸ್ಸಿನಲ್ಲಿ ತಲ್ಲಣ ಉಂಟು ಮಾಡಿದೆ ಎಂದು ಶಾಸಕ ಚೆನ್ನಬಸಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಘೋಷಣೆಯನ್ನ ಇಂಡಿಯಾ ಪಾಕ್ ಕ್ರಿಕೆಟ್ ಸಂದರ್ಭದಲ್ಲಿ ಪಾಕ್ ಪಂದ್ಯ ಗೆದ್ದಾಗ‌ ಶಿವಮೊಗ್ಗ ಸೇರಿ ಹಲವೆಡೆ ಕೇಳಿಸಿಕೊಂಡಿದ್ದೇವೆ ಎಂದರು.

ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆನ್ನ ವಿಧಾನ ಸೌಧದ ಆವರಣದಲ್ಲಿ ಕೂಗಿದ್ದು ಅಕ್ಷಮ್ಯ ಅಪರಾಧ. ಆದರೆ ಅದಕ್ಕೆ ಬೇರೆ ಬಣ್ಣ ನೀಡಲ ಯತ್ನಿಸಲಾಗಿದೆ. ಇದರ ವಿರುದ್ಧ ಕ್ರಮಕೈಗೊಂಡು ತಪ್ಪಿತಸ್ಥರನ್ನ ಬಂಧಿಸುವಲ್ಲಿ ನಿರ್ವೀರ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೃಹ ಸಚಿವರು ರಾಷ್ಟ್ರಭಕ್ತಿ ಪ್ರೇಮವನ್ನ ಬಿಜೆಪಿಯಿಂದ ಕಲಿಯುವ ಅವಶ್ಯಕತೆ ಇಲ್ಲ ಎಂದು ಸದನದಲ್ಲಿ ಹೇಳಿದ್ದಾರೆ. ನಮಗೂ ನಿಮ್ಮ ದೇಶ ಭಕ್ತಿಯ ಬಗ್ಗೆ ಅನುಮಾನ ಇಲ್ಲ. ಅದನ್ನು ಹಲವು ನಾವು ಕಂಡಿದ್ದೇವೆ. ಆದರೆ ನಿಮ್ಮ ದೇಶಭಕ್ತಿ ಪ್ರಕಟೀಕರಣ ಅನುಮಾನ ವ್ಯಕ್ತಪಡಿಸುತ್ತಿದೆ. ದೇಶದ್ರೋಹಿ ಚಟುವಟಿಕೆ ನಡೆಸುವರನ್ನ‌ ಬ್ರದರ್ಸ್ ಎನ್ನುತ್ತೀರಿ. ಅದನ್ನ ಒಪ್ಪಲು ಆಗೋಲ್ಲ ಎಂದು ಆಗ್ರಹಿಸಿದರು.

ಯಾರು ಟ್ರಯಲ್ ಬಾಂಬ್ ತಯಾರಿಸುತ್ತಾರೆ ಅವರ ಬಗ್ಗೆ ಪ್ರೀತಿ ತೋರಿಸುತ್ತೀರಿ.  ಕಾಂಗ್ರೆಸ್ ನ ನೂತನ ರಾಜ್ಯಸಭಾ ಸದಸ್ಯನ ಸಂಭ್ರಮಾಚರಣೆ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದರೆ ಅದರ ಬಗ್ಗೆ ಕನಿಕರ ತೋರುತ್ತೀರಿ.ಆದರೆ ನಿಮ್ಮಿಂದ ದೇಶಭಕ್ತಿ ಕಲಿಯಬೇಕಿಲ್ಲ ಎಂದರು.

ಸಚಿವ ಪ್ರಿಯಾಂಕ್ ಖರ್ಗೆ ಎಫ್ ಎಸ್ ಎಲ್ ವರದಿಯ ಬಗ್ಗೆ ಟ್ವೀಟ್ ಮಾಡ್ತಾರೆ. ಆದರೆ ಎಫ್ ಎಸ್ ಎಲ್ ವರದಿಯನ್ನ ಪ್ರಶ್ನಿಸುವಂತೆ ಮಾಡಿದೆ. ಮೂರು ಮೂರು ತಿಂಗಳು ಕಳೆದರು ಕೆಲವಡೆ ವರದಿ ಬರೊಲ್ಲ. ಹಾಗಾಗಿ ಈ ನಿರ್ವೀರ್ಯ ಸರ್ಕಾರ ತಪ್ಪತಸ್ಥರ ವಿರುದ್ಧ ಏನೂ ಕ್ರಮ ಜರುಗಿಸಲ್ಲ ಎಂದು ಗದರಿದರು.

ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿಯಾಗಿರುವ ನಾಸೀರ್ ಹುಸೇನ್ ಅವರು ತಮ್ಮ ಬೆಂಬಲಿಗರು ದೇಶ ವಿರೋಧಿ ಘೋಷಣೆ ಕೂಗಿದಾಗ ಅವರ ಬಗ್ಗೆ ಮಾತನಾಡೊಲ್ಲ. ಪತ್ರಕರ್ತರು ಹೀಗೆ ಘೋಷಿಸಿದನ್ನ ಪ್ರಶ್ನಿಸಿದರೆ ಗೆಟ್ ಔಟ್ ಎನ್ನುತ್ತಾರೆ. ದೇಶದಿಂದ ಗೆಟ್ ಔಟ್ ಆಗಬೇಕಾದವರು ನೀವು ಎಂದು ಆಗ್ರಹಿಸಿದರು.

ದೇಶದ ನಾಲ್ಕನೇ ಅಂಗವಾಗಿರುವ ಮಾಧ್ಯಮದವರಮ್ನ ಗೆಟ್ ಔಟ್ ಎನ್ನುವವರು ದೇಶ ಬಿಡಬೇಕಿಲ್ಲ. ನಾಸೀರ್ ಹುಸೇನ್ ಬೆಂಬಲಿಗರು ದೇಶ ಬಿಟ್ಟು ಹೋಗಬೇಕು. ನೀವು ದೇಶದ್ರೋಹಿ ಎಂದು ಕರೆಯಲು ನಾವು ಸಿದ್ದವಿಲ್ಲ. ಆದರೆ ಘೋಷಣೆ ಕೂಗಿದವರ ಬೆನ್ನಿಗೆ ಏಕೆ ನಿಲ್ಲುತ್ತೀರಿ ಎಂದು ಪ್ರಶ್ನಿಸಿದರು.

ಪ್ರಕರಣದ ಬಗ್ಗೆ ತನಿಖೆ ಮಾಡಲಾಗುವುದು ಎಂದು ಹೇಳುವ ಸರ್ಕಾರಕ್ಕೆ ನಾಚಿಕೆ ಆಗಬೇಕು. ಸರ್ಕಾರ ಬದುಕಿದ್ದರೆ ನಾಸೀರ್ ಹುಸೇನ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಂದು ಪಾಕ್ ಪರ ಘೋಷಣೆ ಕೂಗಿದ್ದಾರೆ. ನಾಳೆ ಪಾಕ್ ಧ್ವಜ ಹಾರಿಸುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ? ಪಾಕಿಸ್ತಾನ್ ಜಿಂದಾಬಾದ್ ಎಂದು ಬೆಂಬಲಿಸಿದವನನ್ನ ಕಾಂಗ್ರೆಸ್ ಗೆಲ್ಲಿಸಿದೆ. ಇದು ಪಾಕಿಸ್ತಾನ ಕಾಂಗ್ರೆಸ್ಸೋ ಅಥವಾ ಭಾರತದ ಕಾಂಗ್ರೆಸ್ಸೋ ತೀರ್ಮಾನಿಸಬೇಕಿದೆ ಎಂದರು.

ದೇಶ ವಿರೋಧದ ಬಗ್ಗೆ ಚಿಂತೆಯುಳ್ಳವಳಾದ ನಿತೀಶ್ ಕೌಲ್ ಲಂಡನ್ ನ ವಿವಿಯ ಪ್ರೊಫೆಸರ್. ಅವರನ್ನ ಸಂವಿಧಾನ ಜಾಗೃತಿ ಕುರಿತು ಸಮಾವೇಶಕ್ಕೆ ಕರೆಯಲಾಗಿತ್ತು. ಅವರನ್ನ ವಿಮಾನ ನಿಲ್ದಾಣದಿಂದ ವಾಪಾಸ್ ಕಳುಹಿಸಲಾಯಿತು. ಇದು ನಿಮ್ಮ ದೇಶ ಪ್ರೇಮ. ನಿಮ್ಮಿಂದ ನಾವು ದೇಶ ಪ್ರೇಮದ ಬಗ್ಗೆ ಪಾಠ ಕಲಿಯಬೇಕಿಲ್ಲ ಎಂದರು.

ವಿಧಾನ ಸಭೆಯಲ್ಲಿ ರಾಷ್ಟ್ರಧ್ವಜ ಹಿಡಿದು ಬಂದವರನ್ನ ತಡೆಯಲಾಯಿತು. ಆದರೆ ರಾಷ್ಟ್ರಧ್ವಜವನ್ನ 2022 ರಲ್ಲಿ ಹಿಡಿದು ಬಂದ ಕಾಂಗ್ರೆಸ್ಸಿಗರಿಗೆ  ಧ್ವಜಕ್ಕೆ  ಅಪಮಾನ ಮಾಡಬೇಡಿ ಎಂದಾಗ ಹೇಗೆ ನಡೆದುಕೊಂಡ್ರಿ. ಈಗ ನಾವು ಹಿಡಿದು ಬಂದ್ರೆ ತಡೆಯಲಾಗುತ್ತಿದೆ. ಹಿಂದೆ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ‌ ಹಾರಾಟಕ್ಕೆ ಹೋರಾಡಿದವರ ಮೇಲೆ ಗೋಲಿಬಾರ್ ನಡೆಸಿದವರು ನೀವು ಎಂದು ವಿವರಿಸಿದರು.

ಇದನ್ನೂ ಓದಿ-https://suddilive.in/archives/9776

Related Articles

Leave a Reply

Your email address will not be published. Required fields are marked *

Back to top button