ರಾಷ್ಟ್ರೀಯ ಸುದ್ದಿಗಳು

ವಾಪಸ್ ಹೊರಟ ಈಶ್ವರಪ್ಪ: ರಾಘವೇಂದ್ರ ಸೋಲಿಸೋದು ನಿಶ್ಚಿತ ಎಂದು ಹೇಳಿಕೆ

ಸುದ್ದಿಲೈವ್/ನವದೆಹಲಿ

ಅಮಿತ್ ಶಾರನ್ನ ಭೇಟಿಯಾಗಲು ಹೊರಟಿದ್ದ ಮಾಜಿ ಡಿಸಿಎಂ ಈಶ್ವರಪ್ಪ ವಾಪಾಸಾಗಿದ್ದಾರೆ. ಪಕ್ಷದ ಶುದ್ದೀಕರಣ ಮತ್ತು ಮೂರು ಬಾರಿ ಗೆದ್ದ ರಾಘವೇಂದ್ರರನ್ನ ಸೋಲಿಸುವ ಶಪಥ ಮಾಡಿ ದೆಹಲಿಯಿಂದ ಹೊರಬಿದ್ದಿದ್ದಾರೆ.

ಈ ವೇಳೆ ದೆಹಲಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ. ಈಶ್ವರಪ್ಪ,  ಗೃಹ ಮಂತ್ರಿ ಉಕ್ಕಿನ ಮನುಷ್ಯ ಅಮಿತ್ ಶಾ ಅವರ ಭೇಟಿಗೆ ದೆಹಲಿಗೆ ಬಂದಿದ್ದೆ. ಎರಡು ದಿನಗಳ ಹಿಂದೆ ನನಗೆ ಫೋನ್ ಕಾಲ್ ಮಾಡಿದ್ರು. ನಾನು ಬಿಜೆಪಿಯ ಸೀನಿಯರ್ ಲೀಡರ್ ಪಕ್ಷೇತರ ನಿಲ್ಲುವುದು ಸರಿಯಲ್ಲ ಎಂದು ಅಮಿತ್ ಶಾ ಮನವಿ ಮಾಡಿದ್ದರು. ನಾನು ಚುನಾವಣೆ ಯಾಕೆ ನಿಲ್ಲುತ್ತಿದ್ದೇನೆ ಎಂದು ಅವರಿಗೆ ವಿವರಿಸಿದ್ದೆ.

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸಂಸ್ಕೃತಿ ಬಿಜೆಪಿಗೆ ಬಂದಿದೆ. ಕೇಂದ್ರದಲ್ಲಿ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಹೇಗೆ ಪಕ್ಷವನ್ನ ಕುಟುಂಬದ ಆಸ್ತಿ ಮಾಡಿಕೊಂಡಿದ್ದಾರೋ, ಅದೇ ಸಂಸ್ಕೃತಿ ಬಿಜೆಪಿಯಲ್ಲಿ ಬಂದಿದೆ. ಈ ಸಂಸ್ಕೃತಿಯನ್ನ ಪ್ರಧಾನಿ ನರೇಂದ್ರ ಮೋದಿ ಟೀಕಿಸುತ್ತಿದ್ದಾರೆ. ಇದೇ ಸಂಸ್ಕೃತಿ ಕಾಂಗ್ರೆಸ್ನಲ್ಲಿ ಇರುವುದರಿಂದ ಇದನ್ನ ಮುಕ್ತಗೊಳಿಸಬೇಕು. ಎಂದು ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಅಮಿತ್ ಶಾ ಅವರಿಗೆ ತಿಳಿಸಿದ್ದೆ.

ಎರಡನೇಯದಾಗಿ ಹಿಂದೂ ಹೋರಾಟಗಾರರನ್ನು ಇವರು ದೂರ ಸರಿಸಿದ್ದಾರೆ. ಪ್ರತಾಪ್ ಸಿಂಹ ಬಸನಗೌಡ ಪಾಟೀಲ್ ಅನಂತ್ ಕುಮಾರ್ ಹೆಗಡೆ ಸದಾನಂದ ಗೌಡ ಸೇರಿ ಸಾಕಷ್ಟು ನಾಯಕರನ್ನ ಪಕ್ಕಕ್ಕೆ ಸರಿಸಲಾಗಿದೆ. ಇದನ್ನು ಕೂಡ ನಾನು ಮನವರಿಕೆ ಮಾಡಿ ಹೇಳಿದ್ದೆ.

ಮೂರನೇದಾಗಿ ಹೊಂದಾಣಿಕೆ ರಾಜಕಾರಣ ಯಡಿಯೂರಪ್ಪನವರು ಮಾಡುತ್ತಿದ್ದಾರೆ. ಶಿಕಾರಿಪುರದಲ್ಲೂ ಕೂಡ ಹೊಂದಾಣಿಕೆ ರಾಜಕಾರಣ ಮಾಡಿ ತಮ್ಮ ಮಗನನ್ನು ಗೆಲ್ಲಿಸಿಕೊಂಡು ಶಿಕಾರಿಪುರದಲ್ಲಿ ಹಿಂದುಳಿದ ವರ್ಗದ ವ್ಯಕ್ತಿ ನಾಗರಾಜ್ ಗೌಡ ಎಂಬುವರನ್ನು ಸೋಲಿಸಿದರು. ಮಗನ ಭವಿಷ್ಯದ ದೃಷ್ಟಿಗಾಗಿ ಹೊಂದಾಣಿಕೆ ರಾಜಕಾರಣ ಮಾಡಿಕೊಂಡರು ರಾಜ್ಯದಲ್ಲಿ ಪಕ್ಷ ಕಟ್ಟಿದವರು ಹಾಗೂ ಕಟ್ಟುತ್ತಿರುವವರು ಸಾಕಷ್ಟು ನೋವಿನಲ್ಲಿದ್ದಾರೆ . ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಅವರ ನಡವಳಿಕೆಯಿಂದಲೂ ಕೂಡ ಸಾಕಷ್ಟು ನೋವು ಉಂಟಾಗಿದೆ. ಅವರ ನೋವಿಗೆ ನಾನು ದನಿಯಾಗುತ್ತಿದ್ದೇನೆ ಎಂದು ಈಗಾಗಲೇ ಹೇಳಿದ್ದೆ.

ಇಷ್ಟೆಲ್ಲ ಹೇಳಿದ ಮೇಲೆ ಆಯ್ತು ದೆಹಲಿಗೆ ಬನ್ನಿ ಮಾತನಾಡುವ ಎಂದು ಕರೆದಿದ್ದರು ಅವರ ಕರೆ ಮೇರೆಗೆ ನಾನು ಬಂದೆ ಆದರೆ ಅಮಿತ್ ಶಾ ಅವರ ಕಚೇರಿಯಿಂದ ಫೋನ್ ಬಂತು ಅವರು ನಿಮಗೆ ಸಿಗಲ್ಲ ಎಂಬ ಸಂದೇಶ ಸಿಕ್ತು. ಇದರ ಅರ್ಥ ಪರೋಕ್ಷವಾಗಿ ಅಮಿತ್ ಶಾ ಅವರು ಈಶ್ವರಪ್ಪನವರು ಚುನಾವಣೆಗೆ ಸ್ಪರ್ಧಿಸಲಿ ಎಂದು ಹೇಳಿದ್ದಾರೆ. ರಾಘವೇಂದ್ರ ಸೋಲಲಿ ಎಂಬ ಅಭಿಪ್ರಾಯ ಇದೆ. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಅಭಿಪ್ರಾಯದಂತೆ ನಾನು ಚುನಾವಣೆ ನಿಲ್ಲುತ್ತೇನೆ ರಾಘವೇಂದ್ರ ಅವರನ್ನು ಸೋಲಿಸುತ್ತೇನೆ ಎಂದರು.

ಇದನ್ನೂ ಓದಿ-https://suddilive.in/archives/12050

Related Articles

Leave a Reply

Your email address will not be published. Required fields are marked *

Back to top button