ಕ್ರೈಂ ನ್ಯೂಸ್

ಡೆಲ್ಲಿ ಸೆಟ್ ನಾವಾದರೆ, ಆಯನೂರು ಚೈನಾ ಸೆಟ್ಟಾ? ಕೆರಳಿದ ದಲಿತ ಸಂಘಟನೆ

ಸುದ್ದಿಲೈವ್/ಶಿವಮೊಗ್ಗ

ದಲಿತ ಸಂಘಟನೆಗಳು ಡೆಲ್ಲಿಸೆಟ್ ಆಗಿದ್ದರೆ ಇವರೇನು ಚೈನಾ ಸೆಟ್ಟಾ? ಎಂದು ದಲಿತರ ಸಂಘಟನೆಗಳ ಐಖ್ಯ ಹೋರಾಟ ಸಮಿತಿಯ ಮುಖಂಡರು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡಸಿದ ಸಮಿತಿಯ ಮುಖಂಡ ಟಿ.ಹೆಚ್ ಹಾಲೇಶಪ್ಪ  ವಾಕೆಪಿಸಿಸಿ ವಕ್ತಾರ ಆಯನೂರು ತಮ್ಮ‌ಮಾತಿಗೆ ಕಡಿವಾಣ ಹಾಕದಿದ್ದರೆ‌ ದಲಿತ ಸಂಘರ್ಷ ಸಮಿತಿ ಪ್ರತಿಭಟನೆಗೆ ಇಳಿಯಲಿದೆ. ಹಲವು ಹೋರಾಟದ ಹಿನ್ನಲೆಯಲ್ಲಿ ಬಂದ ದಲಿತ ಸಂಘಟನೆಗಳನ್ನ ಗೌರವಿಸುವನ್ನ‌ ಆಯನೂರಿಗೆ ಎಚ್ಚರಿಸಿದರು.

ಸಂಘಟನೆಯ ಜಿಲ್ಲಾ ಸಂಚಾಲಕ ಚಿನ್ನಪ್ಪ ಮಾತನಾಡಿ ದಲಿತ ಸಂಘಟನೆ ಹಲವಾರು ಸಂಘಟನೆ ಆಗಿವೆ. ಇವೆಲ್ಲವೂ ಡೆಲ್ಲಿ ಸೆಟ್ಟುಗಳಾಗಿವೆ ಎಂದು ಹೇಳಿದ್ದಾರಡ. ಮುತ್ಸದ್ಧಿಯಾಗಿ ಈ ಸಂಘಟನೆಯ ಬಗ್ಗೆ ಮಾತನಾಡುತ್ತಾರೆ ಎಂದರೆ ನಾಚಿಕೆ ನ ಗೇಡು ಎಂದರು.

ದಲಿತ ಸಂಘಟನೆ ವಿಘಟನೆ ಆದರೂ ಸಿದ್ದಾಂತವನ್ನ ಬಿಟ್ಟಿಲ್ಲ. ಬಾಬಾ ಸಾಹೇಬ ಅಂಬೇಡ್ಕರ್ ಮತ್ತು ಪ್ರೊ ಕೃಷ್ಣಪ್ಪನವರ ಸಿದ್ದಾಂತವನ್ನ‌ ಮೈಗೂಡಿಸಿಕೊಂಡು ಹೋರಾಟ ಮಾಡುತ್ತಿವೆ ಎಂದರು. ಪ್ರೊಕೃಷ್ಣಪ್ಪನವರಿದ್ದಾಗಲೇ ಅನೇಕ ಸಂಘಟನೆಗಳು ಆದವು. ಆಗಲೇ ನಾನೇ ಅಧಿಕೃತ ಸಂಘನೆ ಎಂದು ಪ್ರೊ.ಕೃಷ್ಣಪ್ಪ ಹೇಳಿಕೊಂಡಿಲ್ಲ.

ಪಕ್ಷದಿಂದ ಪಕ್ಷಕ್ಕೆ‌ಹಾರುವ ಆಯನೂರು ಮಂಜುನಾಥ್‌ ಅವರು ಯಾವ ಸೆಟ್ಟು ಎಂದು ಸ್ಪಷ್ಟಪಡಿಸಲಿ ಎಂದು ಆರೋಪಿಸಿದರು. ಆಯನೂರು ಗೆ ಕಡಿವಾಣ ಹಾಕದಿದ್ದರೆ ಕಾಙಗ್ರೆಸ್ ಪಕ್ಷ ದಲಿತ ಸಙಘಟನೆಯ ಹೋರಾಟ ಎದುರಿಸಬೇಕಾಗುತ್ತದೆ ಎಂದು ಆಗ್ರಹಿಸಿದರು.

ಭಾನು ಪ್ರಸಾದ್ ಮಾತನಾಡಿ, ಕೆಪಿಸಿಸಿ ವಕ್ತಾರರಾಗಿರುವ ಆಯನೂರು ಅವರು ಇನ್ನೊಬ್ಬರನ್ನ ಗೌರವಿಸುವುದನ್ನ‌ ಕಲಿಯಬೇಕು. ಜವಬ್ದಾರಿ ಸ್ಥಾನವನ್ನ ಉಳಿಸಿಕೊಳ್ಳಲಿ. ಇದನ್ನ ಆಯನೂರು ಅನುಭವಿಸೊಲ್ಲ ಕಾಂಗ್ರೆಸ್ ಪಕ್ಷ ಅನುಭವಿಸಲಿದೆ ಎಂದರು.

ಜ.26 ರಂದು ನಡೆದ ಡಿಎಸ್ ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಆಯನೂರು ಮಂಜುನಾಥ್ ಹಲವು ಕಾರಣಗಳಿಂದ ದಲಿತ ಸಂಘಟನೆಗಳು ಒಡೆದಿವೆ. ಇದರಿಂದ ಡೆಲ್ಲಿ ಸೆಟ್ ಗಳಾದಂತೆ ಆಗಿವೆ.‌ಡೆಲ್ಲಿ ಸೆಟ್ ಎಂದರೆ ಡೂಪ್ಲಿಕೇಟ್ ಅಂತ. ಒರಿಜಿನಲ್ ಇರೊದಿಲ್ಲ. ಹೆಚ್ಚುಕಡಿಮೆಯಾದರೆ ಬ್ಲಾಸ್ಟ್ ಆಗಲಿದೆ ಎಂದು ಹೇಳಿದ್ದು ಈಗ ದಲಿತ ಸಂಘನೆಗಳ ಕೆಂಗಣ್ಣಿಗೆ ಗುರಿಯಾಗಿವೆ

ಇದನ್ನೂ ಓದಿ-https://suddilive.in/archives/8138

Related Articles

Leave a Reply

Your email address will not be published. Required fields are marked *

Back to top button