ಕ್ರೈಂ ನ್ಯೂಸ್

ಇರುವಕ್ಕಿ ಕೃಷಿ ವಿವಿ ಎಇಇ ಮತ್ತು ಅಕೌಂಟೆಂಟ್ ಲೋಕ ಬಲೆಗೆ

ಸುದ್ದಿಲೈವ್/ಶಿವಮೊಗ್ಗ

ಕೃಷಿ ವಿವಿಯ ಕಟ್ಟಡದ ಮೇಲ್ಛಾವಣಿ ಕಾಮಗಾರಿಗೆ ಹಣ ಬಿಡುಗಡೆ ಮಾಡಲು ಹಣದ ಬೇಡಿಕೆ ಇಟ್ಟಿದ್ದ ಇರುವಕ್ಕಿಯ ಕೃಷಿ ವಿಶ್ವವಿದ್ಯಾಲಯದ ಎಇಇ ಲೋಹಿತ್ ಪ್ರಶಾಂತ್ ಕುಮಾರ್ ಮತ್ತು ಅಕೌಂಟೆಂಟ್ ಗಿರೀಶ್ ಜಿ.ಆರ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಚಿತ್ರದುರ್ಗದ ಹಿರಿಯೂರಿನಲ್ಲಿ ಕೆವಿಕೆ ಬಬ್ಬೂರ್ ಫಾರ್ಮ್ ನ ಆಡಳಿತ ವಿಭಾಗದ ಕಚೇರಿಯ ಮೇಲ್ಛಾವಣಿ ಕಾಮಗಾರಿಗೆ 4,23,226 ರೂ.ಗಳ ಟೆಂಡರ್ ಕರೆಯಲಾಗಿದ್ದು, ಸುನೀಲ್ ಎಂಬುವರು 3,59,331 ರೂ.ಗಳಿಗೆ ಗುತ್ತಿಗೆ ಪಡೆದಿದ್ದರು.

ಫೆ.19 ರಂದು ಕಾಮಗಾರಿ ಆರಂಭವಾಗಿ ಮಾ.4 ರಂದು ಕಾಮಗಾರಿ ಪೂರ್ಣವಾಗಿರುತ್ತದೆ. ಕಾಮಗಾರಿ ವೀಕ್ಷಿಸಲು ಬಂದು ವಿವಿಯ ಎಇಇ ಲೋಹಿತ್ ಪ್ರಶಾಂತ್ ಕುಮಾರ್ ಹಣ ಬಿಡಯಗಡೆಗೆ 40 ಸಾವಿರ ರೂ ಬೇಡಿಕೆ ಇಟ್ಟಿದ್ದರು.

ಕೃಷಿ ವಿವಿಗೆ ಬಂದು ಎಇಇರನ್ನ ಭೇಟಿಯಾದ ಸುನೀಲ್ ಡಿಪಾಸಿಟ್ ಆಗಿ ಇಟ್ಟಿದ್ದ ಎಫ್‌ಡಿಹಣವನ್ನ ವಾಪಾಸ್ ಕೊಡಲು ಕೇಳಿದ್ದಾರೆ 40 ಸಾವಿರ ರೂ ಹಣವನ್ನ ಅಕೌಂಟೆಂಟ್ ಗಿರೀಶ್ ಗೆ ಕೊಡಿ ಆಗ ಎಫ್ ಡಿ ಹಣ ಬಿಡುಗಡೆ ಮಾಡುವುದಾಗಿ ಹೇಳಿರುವ ಮಾತನ್ನ ಸುನೀಲ್ ವಾಯ್ಸ್ ರೆಕಾರ್ಡ್ ಮಾಡಿಕೊಂಡಿದ್ದರು.

ಲೋಕಾಯುಕ್ತರರಿಗೆ ದೂರು ನೀಡಿದ ಕಾರಣ ಇಂದು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿ ಶ್ರೀ ಲೋಹಿತ್ ಪ್ರಶಾಂತ್ ಕುಮಾರ, ಎ.ಇ.ಇ ಮತ್ತು ಗಿರೀಶ್. ಜಿ.ಆರ್, ಅಕೌಂಟ್ ಅಸಿಸ್ಟೆಂಟ್ ಇವರು ಇರುವಕ್ಕಿಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ರೂ.30,000/-ಲಂಚದ ಹಣವನು- ದೂರುದಾರರಿಂದ ಪಡೆಯುವಾಗ ಕೈಗೆ ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ.

ಅವರಿಂದ ರೂ.30,000/-ಗಳ ಲಂಚದ ಹಣವನ್ನು ಜಪ್ತಿಪಡಿಸಿಕೊಂಡಿದ್ದು, ಆಪಾದಿತರನ್ನು ಬಂಧಿಸಿ ತನಿಖೆಯನ್ನು ಲೋಕಾಯುಕ್ತ ಪೊಲೀಸರು ಕೈಗೊಂಡಿರುತ್ತಾರೆ.

ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ಕಚೇರಿಯ ಪೊಲೀಸ್ ಅಧೀಕ್ಷಕರಾದ ಮಂಜುನಾಥ ಚೌದರಿ, ಎಂ.ಹೆಚ್, ಹಾಗೂ ಪೊಲೀಸ್ ಉಪಾಧೀಕ್ಷಕರಾದ ಉಮೇಶ್ ಈಶ್ವರನಾಯ್ಕ ಇವರ ಸೂಕ್ತ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಟ್ರ್ಯಾಪ್ ಕಾಲಕ್ಕೆ ಶಿವಮೊಗ್ಗ ಲೋಕಾಯುಕ್ತ ಕಛೇರಿಯ ಪೊಲೀಸ್ ನಿರೀಕ್ಷಕರುಗಳಾದ ಪ್ರಕಾಶ್, ವೀರಬಸಪ್ಪ ಎಲ್ ಕುಸಲಾಪುರ,

ಸಿಬ್ಬಂದಿಯವರಾದ ಯೋಗೇಶ್ ಸಿ.ಹೆಚ್.ಸಿ, ಮಹಂತೇಶ್ ವಿ.ಎ, ಸಿ.ಹಚ್.ಸಿ, ಸುರೇಂದ್ರ ಹೆಚ್.ಜಿ, ಸಿ.ಹೆಚ್.ಸಿ, ಬಿ.ಟಿ ಚನ್ನೇಶ ಸಿ.ಪಿ.ಸಿ, ಪ್ರಶಾಂತ್ ಕುಮಾರ್ ಸಿ.ಪಿ.ಸಿ, ರಘುನಾಯ ಸಿ.ಪಿ.ಸಿ, ಅರುಣ್ ಕುಮಾರ್ ಸಿ.ಪಿ.ಸಿ, ಶ್ರೀಮತಿ ಪುಟ್ಟಮ್ಮ, ಮಪಿಸಿ, ಪ್ರದೀಪ್, ಎ.ಪಿ.ಸಿ, ಗೋ- ವಿ. ಎ.ಪಿ.ಸಿ, ಜಯಂತ್ ಎ.ಪಿ.ಸಿ ಇವರುಗಳು ಭಾಗಿಯಾಗಿದ್ದಾರೆ.

ಇದನ್ನೂ ಓದಿ-https://suddilive.in/archives/12885

Related Articles

Leave a Reply

Your email address will not be published. Required fields are marked *

Back to top button