ಕ್ರೈಂ ನ್ಯೂಸ್

ಪ್ಯಾಸೆಂಜರ್ ಆಟೋದಲ್ಲಿ ಗೋಮಾಂಸ ಪತ್ತೆ

ಸುದ್ದಿಲೈವ್/ಭದ್ರಾವತಿ

ಭದ್ರಾವತಿ ಹಳೆ ನಗರ ಪೊಲೀಸರಿಂದ ಪ್ಯಾಸೆಂಜರ್ ಆಟೋರಿಕ್ಷಾ ದಲ್ಲಿ ಗೋಮಾಂಸ ಸಾಗಿಸುತ್ತಿದ್ದ ವೇಳೆ ದಾಳಿ ನಡೆದಿದ್ದು  290 ಕೆಜಿ ಗೋಮಾಂಸ ಪತ್ತೆಯಾಗಿದೆ. ಇದರಿಂದ ಭದ್ರಾವತಿಯಲ್ಲಿ ಗೋಮಾಂಸ ಅಕ್ರಮ ಸಾಗಾಣಿಕೆ ಮುಂದು ವರೆದಿದೆ.

ಪ್ಯಾಸೆಂಜರ್ ಆಟೋದಲ್ಲಿ ಗೋಮಾಂಸವನ್ನ ಸಾಗಿಸುತ್ತಿದ್ದ ವೇಳೆ  ಹಳೆನಗರ ಪೊಲೀಸರು ದಾಳಿ ನಡೆಸಿ ತಪಾಸಣೆ ನಡೆಸಿದಾಗ ಗೋಮಾಂಸಗಳು ಪತ್ತೆಯಾಗಿದೆ. ಗೋಮಾಂಸ ಮತ್ತು ಆಟೋವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.‌

ಭದ್ರಾವತಿ ತಾಲೂಕಿನ ಗೌಡ್ರಳ್ಳಿಯಲ್ಲಿ ಗೋವುಗಳನ್ನು ಹತ್ಯೆ ಮಾಡಿ ಮಾಂಸ ವ್ಯಾಪಾರ ಮಾಡಲೆಂದು ತೆಗೆದುಕೊಂಡು ಹೋಗುತ್ತಿರುವಾಗ ಖಚಿತ ಮಾಹಿತಿಯ ವರೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಗೋಮಾಂಸ ಮಾರಾಟ ಪ್ರಕರಣದಲ್ಲಿ ಇತ್ತೀಚೆಗೆ ಹೆಚ್ಚು ಎಫ್ಐಆರ್‌ ದಾಖಲಾಗುತ್ತಿದೆ.

ಇದನ್ನೂ ಓದಿ-https://suddilive.in/archives/13219

Related Articles

Leave a Reply

Your email address will not be published. Required fields are marked *

Back to top button