ರಾಜ್ಯ ಸುದ್ದಿಗಳು

ಸಿಗಂದೂರು-ದೇವಿಯ ಪೂಜೆಯ ವಿಷಯದಲ್ಲಿ ಶೇಷಗಿರಿ ಭಟ್ಟರ ಪರ ವಾದಕ್ಕೆ ಮನ್ನಣೆ

ಸುದ್ದಿಲೈವ್/ಸಾಗರ

ಸಾಗರದ ಸಿಗಂದೂರು ಚೌಡೇಶ್ವರಿ ದೇವಾಲಯದ ದೇವಿಯ ಪೂಜಾ ವಿಷಯದಲ್ಲಿ ಸಧ್ಯಕ್ಕೆ ಶೇಷಗಿರಿ ಭಟ್ಟರ ಕೈ ಮೇಲಾಗಿದೆ. ಸಾಗರ ನ್ಯಾಯಾಲಯದಲ್ಲಿ ರಾಮಪ್ಪ ಸಿಗಂದೂರು ಅವರ ಮೇಲ್ಮನವಿ ದಾವೆಯನ್ನ ವಜಾಗೊಳಿಸಿದ್ದರಿಂದ ಶೇಷಗಿರಿ ಭಟ್ಟರಿಗೆ ದೇವಿಯ ಪೂಜೆಗೆ ಅವಕಾಶ ಕಲ್ಪಿಸಿ ಆದೇಶಿಸಿದೆ.

ದೇವಸ್ಥಾನದ ಪ್ರಧಾನ ಅರ್ಚಕ ಎಸ್.ಪಿ.ಶೇಷಗಿರಿ ಭಟ್ಟ ಅವರಿಗೆ ಪೂಜೆ ಮಾಡಲು ಅಡ್ಡಿಪಡಿಸಬಾರದು ಎಂದು ಕೆಳಗಿನ ನ್ಯಾಯಾಲಯ ತಿಳಿಸಿದ್ದು, ಅದೇ ಆದೇಶವನ್ನ‌ ಮೇಲಿನ‌ ನ್ಯಾಯಾಲಯ ಎತ್ತಿಹಿಡಿದೆ.

ಈ ಕುರಿತು ಮಾತನಾಡಿದ ಶೇಷಗಿರಿ ಭಟ್ಟರವರ ವಕೀಲ ರವೀಶ್ ಅವರು , 1999 ರಲ್ಲಿ ಸಿಗಂದೂರು ದೇವಿ ಧರ್ಮದರ್ಶಿ ರಾಮಪ್ಪ ಅವರ ಮನೆಯ ದೇವರಲ್ಲ. ಮತ್ತು ಅರಣ್ಯ ಪ್ರದೇಶದಲ್ಲಿರುವುದರಿಂದ ಇದು ಸಾರ್ವಜನಿಕರಿಗೆ  ಸೇರಿದ್ದು ಎಂದು ಮಂಜಪ್ಪನವರ ಪ್ರಕರಣದಲ್ಲಿ ಸೂಚಿಸಿದೆ. ಇದರಿಂದ ಅವರ ಮನೆಯ ದೇವರು ಎಂಬ ಪ್ರಕರಣದಲ್ಲಿ ನ್ಯಾಯ ದೊರೆತಿದೆ ಎಂದರು.

2020 ರಲ್ಲಿ  ಸಿಗಂದೂರು ಚೌಡೇಶ್ವರಿ ದೇವಿಯ ಪೂಜೆಗೆ ಸಂಬಂಧಪಟ್ಟಂತೆ ಧರ್ಮದರ್ಶಿ ಡಾ. ರಾಮಪ್ಪ ಸಿಗಂದೂರು ಮತ್ತು ಪ್ರಧಾನ ಅರ್ಚಕ ಎಸ್.ಪಿ.ಶೇಷಗಿರಿ ಭಟ್ ನಡುವೆ  ಪೂಜೆ ವಿಷಯದಲ್ಲಿ ವಿವಾದ ಉಂಟಾಗಿತ್ತು. ಪೂಜೆ ಯಾರು ಮಾಡಬೇಕು ಎನ್ನುವುದಕ್ಕೆ ಸಂಬಂಧಪಟ್ಟಂತೆ ದೇವಸ್ಥಾನದ ಆವರಣದಲ್ಲಿ ಪರಸ್ಪರ ಜಗಳ ನಡೆದು ಪೊಲೀಸರ ಮಧ್ಯಪ್ರವೇಶ ಮಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಇದರಿಂದ ಒಟ್ಟಾಗಿ ಇದ್ದ ರಾಮಪ್ಪ ಮತ್ತು ಶೇಷಗಿರಿ ಭಟ್ಟರ ನಡುವೆ ಇದ್ದ ಹಳೆಯ ಸ್ನೇಹ ಹಣದ ವಿಷಯದಲ್ಲಿ ಬಿರುಕು ತಂದಿತ್ತು. ಹಲವು ರಾಜಕೀಯ ಶಕ್ತಿಗಳು ಮಧ್ಯಪ್ರವೇಶಿಸಿತ್ತು. ಕಳೆದ ವರ್ಷ ಪೂಜೆಗೆ ಅವಕಾಶ ನೀಡಿ ಮದ್ಯಾಂತರ ಸಾಗರದ ನ್ಯಾಯಾಲಯ ಆದೇಶ ನೀಡಲಾಗಿತ್ತು. ಈ ಮದ್ಯಾಂತರ ಆದೇಶದ ವಿರುದ್ಧ ರಾಮಪ್ಪನವರು ಮೇಲ್ಮನವಿ ಸಲ್ಲಿಸಿದ್ದರು.

ಈ ಆದೇಶವನ್ನು ಪ್ರಶ್ನಿಸಿ ಧರ್ಮದರ್ಶಿ ಡಾ. ರಾಮಪ್ಪ ಸಿಗಂದೂರು ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವರಿಯನ್ನ ವಜಾಗೊಳಿಸಿದ ನ್ಯಾಯಾಲಯ ಕೆಳಗಿನ ನ್ಯಾಯಾಲಯದ ಆದೇಶ ಎತ್ತಿಹಿಡಿದಿದೆ. ಹಿಂದಿನ ಆದೇಶದಂತೆ ಪ್ರಧಾನ ಅರ್ಚಕ ಎಸ್.ಪಿ.ಶೇಷಗಿರಿ ಭಟ್ ಅವರಿಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಆದೇಶ ಮಾಡಿದೆ.

ಇದನ್ನೂ ಓದಿ-https://suddilive.in/archives/1305

Related Articles

Leave a Reply

Your email address will not be published. Required fields are marked *

Back to top button