ಸ್ಥಳೀಯ ಸುದ್ದಿಗಳು

ಕೆರೆ ಮೀನುಗಳು ಸಾವು-ಮತ್ತೆ ಶಾಹೀ ಮೇಲೆ ಗ್ರಾಮಸ್ಥರ ಕೆಂಗಣ್ಣು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಮಲಗೊಪ್ಪ ಕೆರೆಯಲ್ಲಿ ಮೀನುಗಳು ಸಾವನ್ನಪ್ಪಿದ್ದು ಇದು ಭದ್ರ ಎಡದಂಡೆ ನಾಲೆಯಿಂದ ಬರುವ ಕಲುಷಿತ ನೀರು ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಲವಗೊಪ್ಪ ಕೆರೆಯಲ್ಲಿ ಭದ್ರ ಎಡ ದಂಡೆ ನಾಲೆಗೆ ನೀರು ಹರಿದು ಬರುತ್ತಿದ್ದು ಈ ಎಡದಂಡೆ ನಾಲೆಯಲ್ಲಿ ಶಾಹೀ ಗಾರ್ಮೆಂಟ್ಸ್ ಕಾರ್ಖಾನೆಯ ಕಲುಷಿತ ನೀರು ಭದ್ರ ಎಡನಾಲೆಗೆ ಸೇರುವುದರಿಂದ ಜಲಚರ ಮತ್ತು ಮೀನುಗಳು ಸಾವನ್ನಪ್ಪಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಹಿಂದೆಯೂ ನಿಧಿಎ ಹೋಬಳಿ ವ್ಯಾಪ್ತಿಯ ರೈತರು ಕಾರ್ಖಾನೆಯ ಕಚೇರಿಯ ಪ್ರಮುಖ ಪ್ರವೇಶ ದ್ವಾರದಲ್ಲಿ ಪ್ರತಿಭಟನೆ ನಡೆಸಿ ಬಿಸಿ ಮುಟ್ಟಿಸಿದ್ದರು. ನಂತರ ಕೆರೆಯ ನೀರು ಸ್ವಚ್ಛಗೊಳಿಸುವುದಾಗಿ ಹೇಳಿ ಕೆರೆಯ ನೀರು ಸ್ವಚ್ಛಗೊಳಿಸಲಾಗಿತ್ತು. ಈ ಹಿಂದೆ ಜಿಲ್ಲಾಧಿಕಾರಿಗಳು ಕಾರ್ಖಾನೆಯ ನೀರು ಕಲುಷಿತಗೊಳಿಸುತ್ತಿರುವುದರಿಂದ ಬಂದ್ ಮಾಡಲು ಸೂಚಿಸಿದ್ದರು ಎಂಬ ಮಾತು ಸಹ ಕೇಳಿ ಬಂದಿತ್ತು.

ಬಿಜೆಪಿ ಆಡಳಿತದಲ್ಲಿ ಈ ಕೂಗು ಕೇಳಿ ಬರುವುದಿಲ್ಲ.‌ ಆದರೆ ಕಾಂಗ್ರೆಸ್ ಆಡಳಿತದ ವೇಳೆ ಈ ಕೂಗು ಹೆಚ್ಚಾಗಿ ಕೇಳಿ ಬರುತ್ತವೆ. ಇದರಿಂದಾಗಿ ರಾಜಕೀಯ ಆಟಗಳು ಮೇಲ್ನೇಟಕ್ಕೆ  ಕೆಲಸ ಮಾಡುವುದರಲ್ಲಿ ಎರಡು ಮಾತಿಲ್ಲ.‌ ಎಂಟು ತಿಂಗಳಲ್ಲಿ ಕಾರ್ಖಾನೆಯ ವಿರುದ್ಧ ಇದು ಎರಡನೇಕೂಗಾದೆ. ಜ.20 ರಂದು ಭದ್ರ ಎಡದಂಡೆಗೆ ನೀರು ಹರಿಸಲಾಗಿದೆ.

ಕಾರ್ಖಾನೆಯ ಕಲುಷಿತ ನೀರಿನಿಂದ ಕೆರೆಗೆ ಹರಿದು ಬರುವ ನೀರುದಡದಲ್ಲಿ ಬೆಳೆದಿರುವ ಗಿಡಗಳಿಗೆ ಜೀವ ತುಂಬುವುದು ಬಿಟ್ಟು ನಾಶಪಡಿಸಿದೆ. ಅಂದರೆ ರಾಸಾಯನಿಕ ನೀರಿನಿಂದಾಗಿ ಗಿಡಗಳೇ ಸಾವನ್ನಪ್ಪುವ ಸ್ಥಿತಿಗೆ ನಿರ್ಮಿಸಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.

ಇದನ್ನೂ ಓದಿ-https://suddilive.in/archives/7902

Related Articles

Leave a Reply

Your email address will not be published. Required fields are marked *

Back to top button