ರಾಜಕೀಯ ಸುದ್ದಿಗಳು

ಜ್ಞಾನೇಂದ್ರರಿಗೆ ಜ್ಞಾನವಿಲ್ಲ-ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ಬಿಜೆಪಿಯಿಂದ ಹೊರಗೆ ಬಂದಿದ್ದೇನೆ. ಪಕ್ಷೇತರವಾಗಿ ಸ್ಪರ್ಧಿಸುತ್ತಿರುವುದಾಗಿ ಪಕ್ಷದಿಂದ ಹೊರ ಬಂದಿರುವೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದು ಮನೆಗೆ ಒಂದು ಟಿಕೆಟ್ ಎಂಬುದು ಪಕ್ಷದಲ್ಲಿರುವ ಅಲಿಖಿತ ನಿಯಮ. ನಾನು ಎಂಪಿ ಅಲ್ಲ ಎಂಎಲ್ ಎ‌ ಅಲ್ಲ ಟಿಕೇಟ್ ಕೇಳಿದೆ. ನ್ಯಾಯವಾಗಿದೆ ಎಂದು ಒಪ್ಪಿಕೊಂಡರು. ಆದರೆ ಕುತ್ತಿಗೆ ಕೊಯ್ತಾರೆ ಅಂತೆ ಯಾರಿಗೆ ಗೊತ್ತಿತ್ತು ಎಂದು ಬಿಎಸ್ ವೈ ವಿರುದ್ಧ ಪರೋಕ್ಷವಾಗಿ ಆರೋಪಿಸಿದರು.

ಶಿಕಾರಿಪುರದಲ್ಲಿಯೇ ಅಭ್ಯರ್ಥಿ ಓಡಾಡುತ್ತಿಲ್ಲ. ಅವರು ಕೋಟಿ ಕೋಟಿ ಹಣ ಕೊಡಬಹುದು. ಆದರೆ ನಾನು ನ್ಯಾಯದ ಪರ ಇರುವುದಾಗಿ ನನಗೆ ಅಲ್ಲಿನ ಜನ ಸಪೋರ್ಟ್ ಕೊಡ್ತಾ ಇದ್ದಾರೆ ಎಂದರು.

ಹುಬ್ಬಳ್ಳಿ ಹುಡುಗಿ ನೇಹಾ ಕೊಲೆಯಾಗಿದೆ. ಈ ನೋವು ಸಿಎಂ ಮತ್ತು ಡಿಸಿಎಂ ಯಾಕೆ ಕ್ರಮ ಕೈಗೊಳ್ತಾ ಇಲ್ಲ. ಮುಸ್ಲೀಂ ಗೂಂಡಾ‌ಗಳನ್ನ ಬಲಿಹಾಕುತ್ತಿಲ್ಲ. ಇದು ಮುಂದು ವರೆದರೆ ಸಾಧು ಸಂತರ ಜೊತೆ ಪ್ರತಿಭಟಿಸುವೆ ಎಂದರು.

ಜೆಟ್ ಪಟ್ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತ ಶಿವರಾಜ್ ಕುಮಾರ್ ಹಣೆಗೆ ಹಚ್ಚಿದಕುಂಕುಮ ಅಳಸಿದ್ದಾರೆ. ಇದು ಹಿಂದೂ ಧರ್ಮದ ವಿರೋಧದ ಮನೋಸ್ಥಿತಿ. ಹಿಂದೂ ಧರ್ಮಕ್ಕೆ ಮಾಡಿರುವ ಅಪಮಾನ ಕ್ಷಮೆ ಕೇಳಬೇಕೆಂದರು.

ಚುನಾವಣೆ ಸ್ಪರ್ಧೆ ಸಂದರ್ಭದಲ್ಲಿ ಆರಂಭದಲ್ಲಿ ಅಣ್ಣ ಸ್ಪರ್ಧೆ ಬೇಡ ಅಂತಿದ್ದರು. ಆದರೆ ಈಗ ಆ ತರಹದ ಒಂದೇ‌ಒಂದು ಫೊನ್ ಬರ್ತಾ ಇಲ್ಲ. ಇಂದು ಶಿಕಾರಿಪುರದಲ್ಲಿ ಕಚೇರಿ ಆರಂಭಿಸುತ್ತಿರುವೆ. ಸಾಲೂರಿನಲ್ಲಿ ಸ್ವಾಮೀಜಿಗಳನ್ನ ಭೇಟಿ ಮಾಡುತ್ತಿರುವೆ ಎಂದರು.

ಜ್ಞಾನೇಂದ್ರ ಅವರಿಗೆ ಧೈರ್ಯ ಇಲ್ಲ. ನಾನು ಸೋಲಬಾರದು ಎಂದಿದ್ದಾರೆ. ಅವರ ಆಸೆಯಂತೆ ಗೆಲ್ಲುವೆ. ನಾಳೆ ತೀರ್ಥಹಳ್ಳಿಯಲ್ಲಿ ಹೋಬಳಿ ಮಟ್ಟದ ಸಭೆ ನಡೆಸುತ್ತಿರುವೆ. ಯಾರನ್ನಾದರೂ ಅವರು ಕಳುಹಿಸಿ ನನ್ನ ಕಾರ್ಯಕ್ರಮದ ಬಗ್ಗೆ ತಿಳಿದುಕೊಳ್ಳಲಿ ಗೊತ್ತಾಗುತ್ತೆ ಈಶ್ವರಪ್ಪ ಹೇಗೆ ಗೆಲ್ಲುತ್ತಾನೆ ಅಂತ ಹೇಳಿದರು.

ತೀರ್ಥಹಳ್ಳಿಯಲ್ಲಿ ಇಬ್ಬರು ಮುಸ್ಲೀಂ ಗೂಂಡಗಳು ಹಸುಗಳನ್ನ ತೆಗೆದುಕೊಂಡು ಹೋಗುವಾಗ ಹಿಂದೂ ಯುವಕರು ಅಡ್ಡಬಂದರು. ಅವರ ಮೇಲೆ ಹಲ್ಲೆ ನಡೆಯಿತು. ಅವರನ್ನ ಆಸ್ಪತ್ರೆಗೆ ಸೇರಿಸಲಾಯಿತು. ಜ್ಞಾನೇಂದ್ರ ಅವರ ಬಗ್ಗೆ ನೋಡಲು ಹೋಗಲೇ ಇಲ್ಲ. ನಾನು ನಿಂತು ಅವರ ಆರೋಗ್ಯ ನೋಡಿಕೊಂಡಿರುವೆ. ಇವತ್ತಿಗೂ ಯುವಕರು ನನ್ನನ್ನ ನೆನಪಿಸಿಕಳ್ತಾರೆ ಎಂದರು.

ಮೂರು ವರೆ ಸಿಎಂ ಸೇರಿ ನಿನ್ನೆ ನಾಮಪತ್ರ ಸಲ್ಲಿಸಿದ್ದಾರೆ. ಎಷ್ಟು ಜನ ಸೇರಿಸಿದ್ದಾರೆ ಎಂಬುದು ತಿಳಿಯುತ್ತೆ. ನನಗೆ ಎಷ್ಟು ಜನ ಸೇರಿಸಿದ್ದಾರೆ ಎಂದು ಜನಗತ್ತೆ ನೋಡಿದೆ ಎಂದು ವಾಗ್ದಾಳಿ ನಡಸಿದ ಈಶ್ವರಪ್ಪ. ನನ್ನ ನಾಮಪತ್ರ ಸಲ್ಲಿಕೆಯ ವೇಳೆ ಲೋಕಲ್ ಜನ ಬಂದಿದ್ದಾರೆ. ಮಾಜಿ ಸಚಿವ ಆರಗ ಜ್ಞಾನೇಂದ್ರರಿಗೆ ಜ್ಞಾನವಿಲ್ಲ ಬೇಕಬಿಟ್ಟಿ ಮಾತನಾಡುತ್ತಾರೆ ಪಕ್ಷದ ಚಿಹ್ನೆ ಬರಲಿ ಇನ್ನೂ ಅಖಾಡ ರೆಡಿಯಾಗ್ತ ಇದೆ ಚಿಹ್ನೆ ಬಂದ ಮೇಲೆ ಕುಸ್ತಿ‌ಆರಂಭವಾಗುತ್ತೆ ಎಂದು ಹೇಳಿದರು.

ವಿಜೇಂದ್ರ ಮತ್ತು ಬಿಎಸ್ ವೈಗೆ ಪತ್ರಕರ್ತರರ ಪ್ರಶ್ನೆಗೆ ನೈತಿಕತೆ ಮತ್ತು ಧೈರ್ಯವಿಲ್ಲ. ಸ್ವಾರ್ಥಕ್ಕೆ ಪಕ್ಷವನ್ನ ಬಲಿಕೊಂಡಿದ್ದಾರೆ.

ದನ್ನೂ ಓದಿ-https://suddilive.in/archives/13147

Related Articles

Leave a Reply

Your email address will not be published. Required fields are marked *

Back to top button