ಸ್ಥಳೀಯ ಸುದ್ದಿಗಳು

ಡಿನೋಟಿಫೈ ವಿಚಾರದಲ್ಲಿ ಕಾಂಗ್ರೆಸ್ ಗೊಂದಲ‌ಮೂಡಿಸತ್ತಿದೆ-ಸತೀಶ್ ಬೇಗುವಳ್ಳಿ

ಸುದ್ದಿಲೈವ್/ಶಿವಮೊಗ್ಗ

ನಮ್ಮ ಜಿಲ್ಲೆಯಲ್ಲಿ ಚುನಾವಣೆ ವಿಚಾರ ಎಂದರೆ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವುದು ಎಂದು ಬಿಜೆಪಿಯ ಬೇಗುವಳ್ಳಿ ಸತೀಶ್ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1958-63 ರನಡುವೆ ಶರಾವತಿ ನದಿಗೆ ಅಣೆಕಟ್ಟು ಕಟಗಟುವ ಮೂಲಕ ಮುಳುಗಡೆ ಸಂತ್ರಸ್ತರು ಹುಟ್ಟಿಕೊಂಡಿದ್ದಾರೆ. ಮುಳುಗಡೆ ರೈತರಿಗೆ ಅರಣ್ಯ ಭೂಮಿಯಿಂದ ಕಂದಾಯ ಇಲಾಖೆಗೆ ಹಸ್ತಾಙತರವಾಗಿದೆ. ಆಗ ಡಿನೋಟಿಫೈ ಮಾಡಲಾಗಿದೆ.

ಅರಣ್ಯ ನಕ್ಷೆಯೂ ಕೂಡ ಬಿಡುಗಡೆಯಾಗಬೇಕಿತ್ತು. ಆದರೆ ಕೆಲ ಪ್ರಕ್ರಿಯೆ ನಡೆದಿಲ್ಲ ಎಂದು ವಾದ ಆರಂಭವಾಗಿದೆ. 1978 ರಲ್ಲಿ ವನ್ಯಜೀವಿ ಸಂರಕ್ಷಣ ಕಾಯ್ದೆ ಹುಟ್ಟಿಕೊಂಡಿತು. ವನ್ಯ ಜೀವಿ ಅರಣ್ಯ ಭೂಮಿಗೆ ಶರಾವತಿ ಮುಳುಗಡೆ ಸಂತ್ರಸ್ತರ ಭೂಮಿ ಸೇರಲಿಲ್ಲ. ಇದು ಕೇಂದ್ರ ಸರ್ಕಾರದ ವ್ಯಾಪ್ತಿಯಾಗಿದೆ. ಅರಣ್ಯ ಮೀಸಲು ಆರಂಭವಾದ ನಂತರ ಅರಣ್ಯ ಕಾಯ್ದೆ ಬಿಗಿಯಾಗುತ್ತಾ ಬಂದಿದೆ.

2017 ರಲ್ಲಿ ಡಿನೋಟಿಫೈ ಮಾಡಿ ಹಕ್ಕುಪತ್ರ ನೀಡಲಾಗುತ್ತು. ಸೂಕ್ಷ್ಮವಾಗಿ ಗಮನಿಸಿದರೆ ಚೆಕ್ ಬಂಧಿಯೇ ಇಲ್ಲವಾಗಿದೆ. ಆದರೆ ಕಾರ್ಯಕ್ರಮ ನಿರೂಪಣೆ ಮಾಡಲಾಗಿದೆ ಬಿಟ್ಟರೆ ಯಾವುದೇ ದಾಖಲಾತಿ ಇಲ್ಲವಾಗಿದೆ. ಗಿರೀಶ್ ಆಚಾರ್ಯರು ಹೈಕೋರ್ಟ್ ನಲ್ಲಿ ಅರ್ಚಿ ಸಲ್ಲಿಸಿ ಹಕ್ಕುಪತ್ರ ಕ್ರಮಬದ್ಧವಾಗಿಲ್ಲ ಎಂದು ಅರ್ಜಿ ಸಲ್ಲಿಸಲಾಗಿತ್ತು. 56 ಡಿ ನೋಟಿಫಿಕೆಷನ್ ಕೇಂದ್ರದಿಂದ ಅನುಮತಿ ಪಡೆಯದ ಕಾರಣ ಹಕ್ಕಪತ್ರವನ್ನ ನ್ಯಾಯಾಲಯ ರದ್ದು ಪಡಸಿದೆ.

2022 ರಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ರದ್ದಾಗಿ ರಾಜ್ಯ ಸರ್ಕಾರ ಹೊಸ ನೋಟಿಫೀಕೇಷನ್ ಗೆ ಆದೇಶ ಮಾಡಿತ್ತು. ಡಿಸಿಗಳು ಸಂಪೂರ್ಣ ನೋಟಿಫಿಕೇಷನ್ ಹೊರಡಿಸಿ ಹೊಸ ಸರ್ವೆಗೆ ಆದೇಶ ಹೊರಡಿಸಿದೆ. 15 ಸಾವಿರ ಕನ್ಸರವೇಟಿವ್ ಮತ್ತು ಕಂದಾಯ ಅಧಿಕಾರ ಸಹಿ ಮೂಲಕ ರಾಜ್ಯದ ಮೂಲಕ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಕೇಙದ್ರ ಇದಕ್ಕೆ ಹಿಂಬರಹ ಕಳುಹಿಸಿ ಸುಪ್ರೀಂ ಕನ್ಸೆಂಟ್ ಪಡೆದು ಅರ್ಜಿ ಸಲ್ಲಿಸಲು ಸೂಚಿಸಿದೆ. ಐಎ ಹಾಕಲು ಸೂಚಿಸಲಾಗಿತ್ತು.

ಐಎಯನ್ನ ಕಾಂಗ್ರೆಸ್ ಕಳೆದ ಹಾಕಲಾಗಿದೆ. ಇದು ಸಹ ನಮ್ಮ ಒತ್ತಾಯದ ಮೇರೆಗೆ ಐಎ ಹಾಕಲಾಗಿದೆ. 9150 ಎಕರೆ ಡಿನೋಟಿಫೈ ಮಾಡಲು ಕೋರಲಾಗಿದೆ. 1963 ರಿಂದ 1983 ರ ವರೆಗೆ ಕಾಂಗ್ರೆಸ್ ಸರ್ಕಾರವಿತ್ತು. ಏನು ಕ್ರಮ ಆಗಿಲ್ಲ. ತೀರ್ಥಹಳ್ಳಿಯಲ್ಲಿ 950 ಎಕರೆ ರಿಲೀಫ್ ಲ್ಯಾಂಡ್ ಎಂದು ಆಗಿದೆ. ಇದರ್ಲಿ 130 ಎಕರೆ ಡಿನೋಟಿಪೈ ಆಗಿದೆ.

ಶರಾವತಿ ಮುಳುಗಡೆ ಸಂತ್ರಸ್ತರಲ್ಲಿ 90% ಈಡಿಗರೆ ಇರುವುದರಿಂದ ಅವರನ್ನ ಕಾಂಗ್ರೆಸ್ ದಿಕ್ಕುತ್ಪಿಸಲಾಗಿದೆ. ಸುಪ್ರೀಂ‌ಕೋರ್ಟ್ ಗೆ ಹಾಕಿರುವ ಐಎ ಅಲ್ಲಿ ಸಂತ್ರಸ್ತರಿಗೆ ಭೂಮಿಕೊಡುವ ಬಗ್ಗೆ ಮನವರಿಕೆ ಆದರೆ ನ್ಯಾಯಸಿಗಲಿದೆ ಎಂದರು

ಗೀತಾ ಶಿವರಾಜ್ ಕುಮಾರ್ ಅವರು 2014 ರಲ್ಲಿ ಸೋತರು, 2024 ರಲ್ಲಿ ಬಂದಿದ್ದಾರೆ. ಹರಕೆಯ ಕುರಿ ಮಾಡಿರುವ ಅನುಮಾನವಿದೆ. ಕಳೆದ 10 ವರ್ಷದಲ್ಲಿ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಯಾಗಿರುವುದು ತೆರೆದ ಪುಸ್ತಕದಂತಿವೆ. ಮೋದಿಯ ನಂತರ ಅಭಿವೃದ್ಶಿಯ ರಾಘವೇಂದ್ರ ಅವರು ಬೇಕಾ ಮತ್ತು ಹರಕೆಯ ಕುರಿ ಗೀತ ಶಿವರಾಜ್ ಕುಮಾರ್ ಬೇಕಾ ಜನರು ಆಯ್ಕೆ ಮಾಡಲಿ. ಇದು ರಾಷ್ಟ್ರದ ಚುನಾವಣೆಯಾಗಿದೆ. ರಾಘವೇಂದ್ರರನ್ನ‌ ಬೆಂಬಲಿಸಿ ಎಂದರು.‌

ನಾನು ಸಹ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ ಆಕಾಂಕ್ಷಿ ಎಂದು ಸತೀಶ್ ಬೇಗುವಳ್ಳಿ ತಿಳಿಸಿದರು. ಸಿಗಂದೂರುರಾಮಪ್ಪನವರಿಗೆ ನೋಟೀಸ್ ಕೊಡಲಾಗಿದೆ. ದೇವಸ್ಥಾನದ ಪರವಾಗಿದ್ದೇವೆ. ದೇವಸ್ಥಾನ ಅರಣ್ಯದಲ್ಲಿರುವುದರಿಂದ ನೋಟೀಸ್ ಕಳುಹಿಸಲಾಗಿತ್ತು. ನ್ಯಾಯಾಲಯಕ್ಕೆ ಹೋಗಿದ್ದಾರೆ ಎಂದರು.

ಇದನ್ನೂ ಓದಿ-https://suddilive.in/archives/12989

Related Articles

Leave a Reply

Your email address will not be published. Required fields are marked *

Back to top button