ರಾಜಕೀಯ ಸುದ್ದಿಗಳು

ಉತ್ತರಕೊಡಿ ರಾಘವೇಂದ್ರ ಅವರೇ ಎಂದು ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯ ಮೂಲಕ ವಾಗ್ದಾಳಿ

ಸುದ್ದಿಲೈವ್/ಶಿವಮೊಗ್ಗ

ನಾಮಪತ್ರ ಸಲ್ಲಿಕೆ ವೇಳೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬಿಸಿಲಿನಲ್ಲಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಕದಲಿಲ್ಲ ಎಂದು ಮಧು ಬಂಗಾರಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ಯಾರೆಂಟಿಯ ಹಿನ್ನಲೆಯಲ್ಲಿ ಮಹಿಳೆಯರು ಗಟ್ಟಿಯಾಗಿ ನಿಂತಿದ್ದರು. ವಿಶ್ವಾಸವಿದೆ ಚುನಾವಣೆಯಲ್ಲಿ ಗೆದ್ದೇಗೆಲ್ಲುತ್ತೇವೆ. ನಾಳೆ ಎದುರಾಳಿಗಳ ನಾಮಪತ್ರ ಸಲ್ಲಿಸಲಿದ್ದಾರೆ. ನೋಡೋಣ ಎಷ್ಟು ಜನ ಅವರೊಂದಿಗೆ ಇರುತ್ತಾರೆ ಎಂದರು.

ಗುಪ್ತ ಮಾಹಿತಿ ಇದೆ. ಉತ್ತಮ ವಾತಾವರಣ ನಮ್ಮ ಪರವಾಗಿದೆ‌. ಹಾಗಾಗಿ ಗೆಲವು ನಮ್ಮದೆ ಎಂದ ಸಚಿವರು, ಗ್ರಾಮೀಣ ಭಾಗದಲ್ಲಿ ಗೀತ ಶಿವರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಭಾಗಿಯಾಗಿದ್ದಾರೆ. ದ್ವಾರಕೀಶ್ ಅವರ ಸಾವಿನ ಹಿನ್ನಲೆಯಲ್ಲಿ ಎರಡು ದಿನ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದರು.

ಸಂಸದರು ಸೂಕ್ಷ್ಮವಾಗಿ ಮಾತನಾಡಿದ್ದಾರೆ. ವಿಜೇಂದ್ರರಿಗೆ ನನ್ನ ಡೆಸಿಗ್ನೇಷನ್ ವಿಚಾರದಲ್ಲಿ ಎಚ್ಚರವಾಗಿರಿ ಎಂದಿದ್ದೆ. ತಮ್ಮನಿಗೆ ಹೇಳಿದ್ದು ಅಣ್ಣನ ತಲೆಗೆ ಹೋದಂತಿಲ್ಲ. ಬಂಗಾರಪ್ಪನವರನ್ನ ಸಂಸದರನ್ನಾಗಿ ಮಾಡಿದ್ದು ಬಿಜೆಪಿ ಎಂದು ರಾಘವೇಂದ್ರ ಹೇಳಿಕೊಂಡಿದ್ದಾರೆ.

ಬಂಗಾರಪ್ಪ 2004 ರಲ್ಲಿ ಬಿಜೆಪಿಗೆ ಬಂದಾಗ ಪಕ್ಷ 80 ರ ಆಸು ಪಾಸುಗೆ ಬಂದಿತ್ತು. 1999 ರಲ್ಲಿ ಬಂಗಾರಪ್ಪನವರೆ ಯಡಿಯೂರಪ್ಪನವರನ್ನ ಸೋಲಿಸಿದ್ದರು. ರಾಜಕಾರಣದಲ್ಲಿ ಹೆದರಿ ಮೂಲೆಯಲ್ಲಿ ಚೀಪಿಕೊಂಡು ಕುಳಿತಿದ್ದೀರಿ. 2004 ರಲ್ಲಿ ಶಿಕಾರಿಪುರದಲ್ಲಿ ಬಿಎಸ್ ವೈ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಮೆರವಣಿಗೆಯಲ್ಲಿ ಬಿಎಸ್ ವೈ ನನ್ನ ಕೈ ಹಿಡಿದು ನನ್ನನ್ನ ಗೆಲ್ಲಿಸಬೇಕು ಎಂದು ಕೇಳಿಕೊಂಡಿದ್ದರು. ನೆನಪಿದೆಯಾ ಬಿವೈ ಆರ್ ಅವರೇ? ಎಂದು ಪ್ರಶ್ನಿಸಿದರು.

ನಿಮ್ಮ ತೋಟದಲ್ಲಿ ಕರೆಂಟ್ ಬರ್ತಾ ಇರೋದು ಬಂಗಾರಪದಪನವರಿಂದ. ನಿಮ್ಮ ಬಿಜೆಪಿ ಪಕ್ಷಕ್ಕೆ ರಾಜ್ಯದಲ್ಲಿ ಶಕ್ತಿಕೊಟ್ಟಿದ್ದು ಬಂಗಾರಪ್ಪನವರೆ. ನಮ್ಮ ಬಗ್ಗೆ ಮಾತನಾಡುವ ಮುಂಚೆ ಯೋಚಿಸಿ. ನೀವು ಬಂಗಾರಪ್ಪನವರ ಋಣದಲ್ಲಿದ್ದೀರಿ. ನಾವಿಲ್ಲ ಎಂದು ಗುಡುಗಿದರು.

ಜೆಡಿಎಸ್ ನಲ್ಲಿದ್ದಾಗ ಮಧು ಬಂಗಾರಪ್ಪನವರು ಆಸ್ಪತ್ರೆ ನಿರ್ಮಾಣಕ್ಕೆ ಅಡ್ಡಿಯಾಗಿದ್ದಾರೆ ಎಂದು ಬಿವೈಆರ್ ಆರೋಪಿಸಿದರು. ಸಾವರ್ಜನಿಕ ಆಸ್ಪತ್ರೆ ಎಲ್ಲಿರುತ್ತೆ. ಜಿಲ್ಲಾ ಕೇಂದ್ರದಲ್ಲಿರುತ್ತೆ. ಜಿಲ್ಲಾ ಆಸ್ಪತ್ರೆ ಜಿಲ್ಲಾಕೇಂದ್ರದಲ್ಲಿರಬೇಕು. ತಾಲೂಕಿನಲ್ಲಿ ಅಲ್ಲ. ನಿಮ್ಮ ತೆವಲಿಗೆ ಅಂದು ಜಿಲ್ಲಾ ಆಸ್ಪತ್ರೆಯನ್ನ ಶಿಕಾರಿಪುರಕ್ಕೆ ತಂದಿದ್ರಿ. ಸಿಮ್ಸ್ ಉದ್ಘಾಟಿಸಿದ್ದು ಧರ್ಮಸಿಂಗ್ ಅವರು.ಆದರೆ ನಾವು ಉದ್ಘಾಟಿಸಿದ್ದೇವೆ ಎಂದು ಸುಳ್ಳು ಹೇಳುದ್ರಿ. ಮೆಗ್ಗಾನ್ ಆಸ್ಪತ್ರೆಯನ್ನ ಕಟ್ಟಿರುವ ಕಲ್ಲು ನಿಮ್ಮ ಅನಧಿಕೃತ ಮೈನ್ಸ್ ನಿಂದ ಎಂದು ಗುಡುಗಿದರು.

ನಾಡಿನ ಕತ್ತಲಿನಲ್ಲಿರುವರಿಗೆ ನ್ಯಾಯಕೊಡಿಸಲು ಬದ್ಧ ಎಂದು ಸಂಸದರು‌ ಹೇಳಿದ್ದಾರೆ. ನಿಮ್ಮ ಮುಖಕ್ಕೆ… ಎಂದು ಅರ್ಧಕ್ಕೆ ಮಾತು ನಿಲ್ಲಿಸಿದ ಸಚಿವರು. ನಿಮ್ಮ ಕೈಯಲ್ಲಿ ಸರ್ಕಾರ ಇದ್ದಾಗ ಏನು‌ಮಾಡುದ್ರಿ? ಈಶ್ವರಪ್ಪ, ಕರಡಿ ಸಂಗಣ್ಣ, ಯತ್ನಾಳ್ ಗೆ ಮೊದಲು ಉತ್ತರಕೊಡಿ. ನನ್ನ ತಂಗಿ ನಿಮ್ಮನ್ನ ಸೋಲಿಸುತ್ತಾರೆ.2004 ರಲ್ಲಿ ಬಿಎಸ್ ವೈ ಮಕ್ಕಳು ಇರಲಿಲ್ಲ. ನಾನು ಬಿಎಸ್ ವೈ ಪರ ಮತಯಾಚಿಸಿದ್ದೇನೆ ಎಂದು ಗರಂ ಆದರು.

ನನ್ನ ಪಾದಯಾತ್ರೆಯ ನಂತರ ನೀವು ಮತ್ತು ನಿಮ್ಮ ತಂದೆಯವರು ಹೋಗಿ ಡಿಕೆಶಿಗೆ ಪತ್ರಕೊಟ್ರಿ. ಆದರೆ ಏನು ಕೆಲಸ ಮಾಡಿರಲಿಲ್ಲ ನನ್ನ ಹೋರಾಟದಿಂದ ಜಿಲ್ಲೆಗೆ ಸಾವಿರಾರು ಕೋಟಿಯ ಹಣ ನೀರಾವರಿಗೆ ಬಿಡುಗಡೆಯಾಗಿತ್ತು. ಮೋದಿಯನ್ನ ವಿಶ್ವಮಾನವ ಮಾಡುವುದಲ್ಲ ಎಂಪಿಎಂ ಕಾರ್ಖಾನೆ ಮುಚ್ಚಿದಾಗ ಏನು ಮಾಡುದ್ರಿ. ಶಾಸಕ ಸಂಗಮೇಶ್ 405 ಜನರಿಗೆ ವಿಆರ್ ಎಸ್ ಹಣ ಕೊಡಿಸಿದ್ರು. ಅದನ್ನೂ ನೀವು ಮಾಡಲಿಲ್ಲ ಎಂದು ದೂರಿದರು.

ಭ್ರಷ್ಠಾಚಾರದ ಹಣವನ್ನ ಮೈಮೇಲಿದ್ದರೆ ಲೇಟೆಸ್ಟ್ ಪೌಡರ್ ಬಂದಿದೆ‌. ಬಿಜೆಪಿ ವಾಷಿಂಗ್ ಪೌಡರ ನಿಂದ ತೊಳೆದರೆ ಭ್ರಷ್ಠರು ಸಾಚರಾಗುತ್ತಾರೆ. ನಾಚಿಕೆ ಆಗಬೇಕು ಬಿಜೆಪಿಗೆ ಎಂದು ದೂರಿದ ಅವರು, ಜಿಲ್ಲೆಯಲ್ಲಿ 7 ಕೋಟಿ ರೂ. ಗ್ಯಾರೆಂಟಿಯ ಮೂಲಕ ಬಡವರ ಮನೆ ತಲುಪುತ್ತಿದೆ. ಬಿಜೆಪಿಯೂ ಸಹ ನಿಮ್ಮ‌ಮನೆಯಲ್ಲಿ ಬೆಳಕು ಬಂದಿದ್ದು ಕಾಂಗ್ರೆಸ್ ನಿಂದಲೇ ಎಂದರು.

ಮನೆ ಮನೆಗೆ ತೆರಳಿ ಮತ ಯಾಚಿಸುತ್ತೇವೆ. ಪಕ್ಷದ ಗ್ಯಾರೆಂಟಿಯನ್ನ ಹಂಚಲಾಗುವುದು ಇವೆಲ್ಲ ಮುಂದಿನ ದಿನಗಳಲ್ಲಿ ಹಂತಹಂತವಾಗಿ ಬಡೆಸಲಾಗುವುದು ಎಂದರು.

ಈಶ್ವರಪ್ಪನವರು ಬಿಎಸ್ ವೈ ಕುಟುಂಬದ ಬಗ್ಗೆ ನಿರಂತರ ವಾಗ್ದಾಳಿ ಮಾಡ್ತಾ ಇದ್ದಾರೆ. ಆದರೆ ಅವರು ಪಕ್ಷದ ಹಿರಿಯರು ಎನ್ನುತ್ತಿದ್ದಾರೆ. ಯಾಜೆ ಉತ್ತರ ಕೊಡ್ಬೇಕಿತ್ತು. ಬತ್ತಿ ಇಟ್ಟಿದ್ದಕ್ಕೆ  ಅವರ ಬಳಿ ಉತ್ತರವಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ-https://suddilive.in/archives/12986

Related Articles

Leave a Reply

Your email address will not be published. Required fields are marked *

Back to top button