ಗಾಜನೂರಿನಲ್ಲಿ ನಡೆಯಿತಾ ನೈತಿಕ ಪೊಲೀಸ್ ಗಿರಿ? ಓರ್ವ ಅರೆಸ್ಟ್

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಗಾಜನೂರಿನಲ್ಲಿ ಬಂದ ಅನ್ಯ ಧರ್ಮೀಯ ಜೋಡಿ ಹಕ್ಕಿಗಳ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ತುಂಗಾ ಠಾಣೆಯಲ್ಲಿ ದೂರು ದಾಖಲಾಗಿದೆ.
ಭದ್ರಾವತಿಯ ಪ್ರಸನ್ನ ಎಂಬ ಯುವಕ ಸೋಮವಾರ ಮಧ್ಯಾಹ್ನ ಅನ್ಯಧರ್ಮೀಯ ಯುವತಿಯನ್ನ ಕರೆದುಕೊಂಡು ಮಧ್ಯಾಹ್ನ 02.00 ಗಂಟೆ ಪಲ್ಸರ್ 125 ಬೈಕ್ ನಲ್ಲಿ, ಗಾಜನೂರು ತುಂಗಾ ಚೆಕ್ ನೋಡಲು ಹೋದಾಗ 04 ಜನ ಮುಸ್ಲಿಂ ಯುವಕರು 02 ಡಿಯೋ ಬೈಕನಲಿ, ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿದ್ದಾರೆ.
ಅವಾಚ್ಯ ಶಬ್ದಗಳಿಂದ ಬೈದ ಯುವಕರು ನೀನು ಹಿಂದೂ ಹುಡುಗ ಆಗಿ ಮುಸ್ಲಿಂ ಹುಡುಗಿಯನ್ನು ಕರೆದುಕೊಂಡು ಬಂದಿದಿಯಾ ಎಂದು ಹೇಳಿ ಮುಖಕ್ಕೆ ಪಂಚ್ ಮಾಡಿದ್ದಾರೆ. ನಿನ್ನನ್ನ ಕೊಲೆ ಮಾಡುತ್ತೀವಿ ಎಂದು ಬೆದರಿಕೆ ಹಾಕಿದ್ದಾರೆ.
ನಂತರ 04 ಜನರು ಕೈಯಿಂದ ಪ್ರಸನ್ನರ ಕಣಿಗೆ, ತಲೆಗೆ, ಹೊಡೆದು ಬೈಕ್ ನ ಕೀ ಯನ್ನು ಕಸಿದುಕೊಂಡು ನಂತರ ಎಡಕಣ್ಣಿನ ಬಳಿ ಹಾಗೂ ತಲೆಯ ಹಿಂಭಾಗಕ್ಕೆ ಕೀಯಿಂದ ಹೊಡೆದಿದ್ದಲ್ಲದೇ, ಕಿಸೆಯಲ್ಲಿದ್ದ ಚಾಕು ತೆಗೆದು ತೋರಿಸಿ ಬೆದರಿಸಿರುತ್ತಾರೆ. ಹಲ್ಲೆಯಿಂದ ಪ್ರಸನ್ನರವರ ಕಣ್ಣು ಉದಿಕೊಂಡಿದೆ.
ಮೊಬೈಲ್ ಕಿತ್ತುಕೊಂಡ ಗ್ಯಾಂಗ್ ಯುವತಿಯ ಮನೆಯವರಿಗೆ ಫೊನ್ ಮಾಡಿ ವಿಷಯ ತಿಳಿಸುವುದಾಗಿ ಹೆದರಿಸಿದ್ದಾರೆ. ಅಲ್ಲಿಂದ ಪರಾರಿಯಾದ ಪ್ರಸನ್ನ ಸ್ಥಳೀಯರ ಸಹಾಯದಿಂದ ಪೊಲೀಸರಿಗೆ ಫೊನ್ ಮಾಡಿ ಮತ್ತೆ ಸ್ಥಳಕ್ಕೆ ಬಂದು ನೋಡಿದಾಗ ನಾಲ್ವರು ಕಾಲು ಕಿತ್ತಿದ್ದಾರೆ.
ನಂತರ ಠಾಣೆಗೆ ತೆರಳಿ ತುಂಗಾನಗರ ಪೊಲೀಸರಿಗೆ ದೂರು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಶಾಬಾಜ್ ಎಂಬ ಯುವಕನನ್ನಬಂಧಿಸಲಾಗಿದೆ. ಮೂವರು ತಪ್ಪಿಸಿಕೊಂಡಿದ್ದಾರೆ. ಶಾಬಾಜ್ ಗೆ ನ್ಯಾಯಾಂಗ
