ಸ್ಥಳೀಯ ಸುದ್ದಿಗಳು

ಕಾಂಗ್ರೆಸ್ ಅಭ್ಯರ್ಥಿ ಗೀತರವರ ಆಸ್ತಿ ಎಷ್ಟಿದೆ?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಇಂದು ನಾಮಪತ್ರ ಸಲ್ಲಿಸಿದ್ದು ತಮ್ಮ ಆಸ್ತಿಯನ್ನ ಘೋಷಿಸಿಕೊಂಡಿದ್ದಾರೆ.

ಗೀತಾ ಶಿವರಾಜ್ ಕುಮಾರ್  ಹೆಸರಿನಲ್ಲಿ ಒಟ್ಟು ಆಸ್ತಿ 40ಕೋಟಿ 04 ಲಕ್ಷದ 36 ಸಾವಿರದ 321 ರೂ. ಇದೆ. ಪತಿ ಶಿವರಾಜ್ ಕುಮಾರ್ ಹೆಸರಿನಲ್ಲಿ 49 ಕೋಟಿ 82 ಸಾವಿರದ 893 ರೂ. ಇದೆ ಎಂದು ಘೋಷಿಸಿದ್ದಾರೆ. ಗೀತಾ ಶಿವರಾಜ್ ಕುಮಾರ್ ಕೈಯಲ್ಲಿರುವ ನಗದು 3 ಲಕ್ಷ ರೂ ಇರುವುದಾಗಿ ಪ್ರಕಟಿಸಿಕೊಂಡಿದ್ದಾರೆ.

ಶಿವರಾಜ್ ಕುಮಾರ್ ಹೆಸರಿನಲ್ಲಿರುವ ನಗದು 22 ಲಕ್ಷದ 58 ಸಾವಿರದ 338 ರೂ. ಗೀತಾ ಹೆಸರಿನಲ್ಲಿ ಸಾಲ 7 ಕೋಟಿ 14 ಲಕ್ಷದ 95 ಸಾವಿರ ರೂ. ಶಿವರಾಜ್ ಕುಮಾರ್ ಹೆಸರಿನಲ್ಲಿ ಸಾಲ 17 ಕೋಟಿ 01 ಲಕ್ಷದ 12 ಸಾವಿರ ರೂ ಗಳನ್ನ ಘೋಷಿಸಿಕೊಂಡಿದ್ದಾರೆ

ಗೀತಾ ಹೆಸರಿನಲ್ಲಿ ಚಿನ್ನಾಭರಣ 11, 542 ಗ್ರಾಂ ಚಿನ್ನಾಭರಣ ಮೌಲ್ಯ 3 ಕೋಟಿ 50 ಲಕ್ಷ
30 ಕೆಜಿ ಬೆಳ್ಳಿ ಮೌಲ್ಯ 3 ಲಕ್ಷದ 40 ಸಾವಿರ ರೂ.‌ಗೀತಾ ಹೆಸರಿನಲ್ಲಿ ಟಯೋಟೋ ಹೈಬ್ರೀಡ್ ಕಾರು ಮೌಲ್ಯ 1 ಕೋಟಿ 07 ಲಕ್ಷ ರೂ.

ಶಿವರಾಜ್ ಕುಮಾರ್ ಹೆಸರಿನಲ್ಲಿ ಟೊಯೋಟಾ ಫಾರ್ಚುನರ್ ಕಾರು, ಮಾರುತಿ ಎರಿಟಿಗಾ, ವೊಲ್ವೋ ಕಾರುಗಳು ಸೇರಿ ಒಟ್ಟು ಮೌಲ್ಯ 87 ಲಕ್ಷದ 70 ಸಾವಿರ ರೂ. ಘೋಷಿಸಿಕೊಂಡಿದ್ದಾರೆ.‌

ಗೀತಾ ಹೆಸರಿನಲ್ಲಿ ಕನಕಪುರ ಬಳಿ 05 ಎಕರೆ 05 ಗುಂಟೆ ಕೃಷಿ ಭೂಮಿ, ಶಿವರಾಜ್ ಕುಮಾರ್ ಹೆಸರಿನಲ್ಲಿ ಬೆಂಗಳೂರಿನ ಕೋರಮಂಗಲ ಬಳಿ 03 ಎಕರೆ 26 ಗುಂಟೆ ಜಮೀನು,

ಶಿವರಾಜ್ ಕುಮಾರ್ ಹೆಸರಿನಲ್ಲಿ ಬೆಂಗಳೂರಿನಲ್ಲಿ ವಾಸದ ಮನೆ, ಗೀತಾ ಶಿವರಾಜ್ ಕುಮಾರ್ ಹೆಸರಿನಲ್ಲಿ ಸಾಲ 07 ಕೋಟಿ 14 ಲಕ್ಷ, ಶಿವರಾಜ್ ಕುಮಾರ್ ಹೆಸರಿನಲ್ಲಿ ಸಾಲ 17 ಕೋಟಿ 01 ಲಕ್ಷಗೀತಾ ಶಿವರಾಜ್ ಕುಮಾರ್ ಹೆಸರಿನಲ್ಲಿ 05 ಕೋಟಿ 54 ಲಕ್ಷದ ಚರಾಸ್ಥಿ,

ಶಿವರಾಜ್ ಕುಮಾರ್ ಹೆಸರಿನಲ್ಲಿ 18 ಕೋಟಿ 82 ಲಕ್ಷದ ಚರಾಸ್ಥಿ,ಗೀತಾ ಶಿವರಾಜ್ ಕುಮಾರ್ ಹೆಸರಿನಲ್ಲಿ ಸ್ಥಿರಾಸ್ಥಿ 5 ಕೋಟಿ 92 ಲಕ್ಷ ರೂ, ಶಿವರಾಜ್ ಕುಮಾರ್ ಹೆಸರಿನಲ್ಲಿ ಸ್ಥಿರಾಸ್ಥಿ 4 ಕೋಟಿ 37 ಲಕ್ಷ ಇದೆ ಎಂದು ಘೋಷಿಸಿಕೊಂಡಿದ್ದಾರೆ.

ಇದನ್ನು ಓದಿ-https://suddilive.in/archives/12878

Related Articles

Leave a Reply

Your email address will not be published. Required fields are marked *

Back to top button