ಕ್ರೈಂ ನ್ಯೂಸ್

ಪತ್ರಕರ್ತೆ ವಿರುದ್ಧ ದೂರು ದಾಖಲು

ಸುದ್ದಿಲೈವ್/ತೀರ್ಥಹಳ್ಳಿ

ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ವಿರುದ್ಧ  ತೀರ್ಥಹಳ್ಳಿಯ  ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ದೂರು ದಾಖಲಾಗಿದೆ.

ಪೊಲೀಸ್ ಠಾಣೆ ವ್ಯಾಪ್ತಿಯ ಶಿವರಾಜಪುರದ ಹೈವೆ ಗಸ್ತುವಿನಲ್ಲಿದ್ದ ఎఎಸ್ ಐ ಕೃಷ್ಣಮೂರ್ತಿ ಮತ್ತು ಸಿಬ್ಬಂದಿಯವರೊಂದಿಗೆ ಹೆದ್ದಾರಿ ಗಸ್ತು ವಾಹನದಲ್ಲಿದ್ದಾಗ ಮಾರಣಾಂತಿಕ ರಸ್ತೆ ಅಪಘಾತಗಳು ಹೆಚ್ಚಾಗಿದ್ದರಿಂದ ಅವುಗಳನ್ನು ತಡೆಯುವ ಸಲುವಾಗಿ ವಾಹನ ತಪಾಸಣೆ ನಡೆಸಿದ್ದಾರೆ.

ಒಬ್ಬರಿಗೆ ಸೀಟ್ ಬೆಲ್ಟ್ ಹಾಕದೇ ಇರುವ ಬಗ್ಗೆ ಸ್ಥಳದಂಡದ ರಶೀದಿಯನ್ನು ಬರೆಯುತ್ತಿರುವಾಗ ಮತ್ತು ವಾಹನಗಳನ್ನು ಚೆಕ್ ಮಾಡುತ್ತಿದ್ದಾಗ ವಿಜಯಟೈಮ್ಸ್ ಚಾನಲ್ ನ ಸಂಪಾದಕ ವಿಜಯಲಕ್ಷ್ಮೀ ಶಿಬರೂರು ಮತ್ತು ಅವರ ಕಡೆಯ ನಾಲೈದು ಜನರು ಗುಂಪು ಗೂಡಿಕೊಂಡು ಬಂದು ಸರ್ಕಾರಿ ಇಲಾಖಾ ವಾಹನಕ್ಕೆಅಡ್ಡಲಾಗಿ ನಿಂತು ವಾಹನ ತಪಾಸಣೆ ಮಾಡದಂತೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಸರ್ಕಾರದಿಂದ ನೀಡಿದ ರಶೀದಿ ಪುಸ್ತಕವನ್ನು ಕಸಿದುಕೊಂಡು ಅದರ ವಿಡಿಯೋಗಳನ್ನು ತೆಗೆದುಕೊಂಡಿದ್ದಾರೆ.

ನಿಜ ಹೇಳಬೇಕೆಂದರೆ, ಪತ್ರಕರ್ತೆಯ ಪ್ರಶ್ನೆಗೆ ಎಎಸ್‌ಐ ತತ್ತರಿಸಿದ್ದಾರೆ. ಆದರೆ ಪತ್ರಕರ್ತರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ವಾಹನ ತಪಾಸಣೆ ಮಾಡಲು ಬಿಡದೆ ಇರುವುದಾಗಿ ಎಫ್ಐಆರ್ ನಲ್ಲಿ ದೂರಲಾಗಿದೆ. ಅಪಘಾತಗಳನ್ನು ತಡೆಯುವ ತಮ್ಮ ಕರ್ತವ್ಯದಿಂದ ಹಿಮ್ಮೆಟ್ಟಿಸುವ ಸಲುವಾಗಿ ಸರ್ಕಾರಿ ಕೆಲಸ ನಿರ್ವಹಿಸದಂತೆ ಅಡ್ಡಿಪಡಿಸಲಾಗಿದೆ ಎಂದು ಅರೋಪಿಸಲಾಗಿದೆ.

ಪೊಲೀಸರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಾ ಸಾರ್ವಜನಿಕರಿಗೆ ಪ್ರಚೋದನೆ ನೀಡುವ ರೀತಿಯಲ್ಲಿ  ವಿಜಯ್ ಟೈಮ್ಸ್ ನ್ಯೂಸ್ ನ ಸಂಪಾದಕಿ ವಿಜಯಲಕ್ಷ್ಮೀ ಶಿಬರೂರು ಮತ್ತು ಅವರ ಜೊತೆಯಲ್ಲಿದ್ದ ಸಿಬ್ಬಂದಿಯವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ‌ ದೂರು ದಾಖಲಾಗಿದೆ.

ಬೆಳಿಗ್ಗೆ ವಿಡಿಯೋದಲ್ಲಿ ಪತ್ರಕರ್ತೆ ವಿಜಯಲಕ್ಷ್ಮಿಯವರು ಪೊಲೀಸರು ಎಮಿಷನ್ ಟೆಸ್ಟಿಂಗ್ ಹಣಕ್ಕೆ ದಂಡಕಟ್ಟಿಸಿಕೊಂಡಿರುವ ಬಗ್ಗೆ, ಹೈವೆ ನಿಯಮಗಳನ್ನ ಪಾಲಿಸದಂತೆ ತಪಾಸಣೆ ನಡೆಸಲಾಗಿದೆ ಎಂದು ಆರೋಪಿಸಿದ್ದರು. ಇದಾದ ನಂತರ ಅವರ ಮೇಲೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಅಡಿ ದೂರು ದಾಖಲಿಸಲಾಗಿದೆ.

ಇದನ್ನೂ ಓದಿ-https://suddilive.in/archives/5082

Related Articles

Leave a Reply

Your email address will not be published. Required fields are marked *

Back to top button