ಕ್ರೈಂ ನ್ಯೂಸ್

ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ವಿರುದ್ಧ ದೂರು ದಾಖಲು

ಸುದ್ದಿಲೈವ್/ಶಿವಮೊಗ್ಗ

ಕಾಂಗ್ರೆಸ್ ನ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ವಿರುದ್ಧ ದಾಖಲಿಸಿರುವ ವಂಚನೆ ಪ್ರಕರಣ ವಾಪಾಸ್ ಪಡೆಯದಿದ್ದರೆ ಸುಳ್ಳು ಕೇಸಿನಲ್ಲಿ ಸಿಕ್ಕಿಸುವುದಾಗಿ ಬೆದರಿಸಿದ 27 ನೇ ವಾರ್ಡ್ ನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿವಮೊಗ್ಗದ ಚಂದ್ರಶೇಖರ್ ಎಂಬುವರಿಗೆ ಚಿಕ್ಕಮಗಳೂರಿನಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಜಾಗಕೊಡಿಸುವುದಾಗಿ ನಂಬಿಸಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಕುಮಾರಿ 31½ ಲಕ್ಷ ರೂ ವಂಚಿಸಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗದ ಡಿವೈಎಸ್ಪಿ ಕಚೇರಿಗೆ ದೂರು ನೀಡಿದ್ದರು.

ಈ ವಿಚಾರದಲ್ಲಿ ಡಿವೈಎಸ್ಪಿ ಕಚೇರಿಯಿಂದ ಅಧ್ಯಕ್ಷೆಗೆ ವಿಚಾರಣೆಗೆ ಬರುವಂತೆ ಕರೆ ಬಂದಿದೆ. ಚಂದ್ರಶೇಖರ್ ಅವರ ಮನೆಯ ಬಳಿಯಿರುವ 27 ನೇ ವಾರ್ಡ್ ನ ಮಹಿಳಾ ಕಾಂಗ್ರೆಸ್ ನ ಬ್ಲಾಕ್ ಅಧ್ಯಕ್ಷೆ ಸುವರ್ಣ ನಾಗರಾಜ್ ಕರೆ ಮಾಡಿ ಅವ್ಯಾಚ್ಯ ಶಬ್ದಗಳಿಂದ‌ ಬೈದಿದ್ದಾರೆ.

ನಮ್ಮ ಅಧ್ಯಕ್ಷೆಯ ಮೇಲಿನ ಪ್ರರಣ ವಾಪಾಸ್ ಪಡೆಯಿರಿ ಇಲ್ಲವಾದಲ್ಲಿ ಪರಿಣಾಮ ನೆಟ್ಟಗಿರಲ್ಲ. ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಸಿರುವ ವಾಯ್ಸ್ ಮೆಸೇಜ್ ಕಳುಹಿಸಿದ್ದಾರೆ ಎಂದು ಎಫ್ಐಆರ್ ನಲ್ಲಿ ದಾಖಲಿಸಿದ್ದಾರೆ. ಈ ಪ್ರಕರಣವನ್ನ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/10421

Related Articles

Leave a Reply

Your email address will not be published. Required fields are marked *

Back to top button