ಕ್ರೈಂ ನ್ಯೂಸ್

ಮಾಂಸದಂಗಡಿಗಳು ಬಂದ್ ಇದ್ದರೂ ಗೋಮಾಂಸದ ಅಂಗಡಿಯಲ್ಲಿ ಖುಲ್ಲಂ ಖುಲ್ಲಾ ವ್ಯಾಪಾರ-ಬೀಗ ಜಡಿದ ಪೋಲಿಸರು

ಸುದ್ದಿಲೈವ್/ಶಿವಮೊಗ್ಗ

ಭದ್ರಾವತಿ ನಗರಸಭೆ ವ್ಯಾಪ್ತಿಯ ಖಾಸಗಿ ಬಸ್ ನಿಲ್ದಾಣದ ಬಳಿಯಲ್ಲಿ ನಗರ ಸಭೆ ಮಾಲಿಕತ್ವದ ಮಳಿಗೆಯಲ್ಲಿ ನಡೆಯುತ್ತಿರುವ ಗೋಮಾಂಸ ಮಾರಾಟದ ಹೋಟೆಲ್ ವೊಂದಕ್ಕೆ ಭದ್ರಾವತಿಯ ನ್ಯೂಟೌನ್ ಪೊಲೀಸರು ಬೀಗ ಜಡಿದಿದ್ದಾರೆ.

ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕರಾದ ದೇವರಾಜ ಅರಳಿಹಳ್ಳಿ ರವರ ದೂರಿನ ಆಧಾರದ ಮೇರೆಗೆ  ನ್ಯೂ ಟೌನ್ ಪೊಲೀಸರು ಹೋಟೆಲ್ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಭದ್ರಾವತಿಯಲ್ಲಿ ಗೋ ಹತ್ಯೆ ಗೋ ಮಾಂಸದ ಪ್ರಕರಣಗಳು ದಾಖಲಾಗಿರುತ್ತಿರುವುದು ಸರ್ವೇಸಾಧಾರಣವಾಗಿದೆ.

ಸಂವಿಧಾನ ಶಿಲ್ಪಿ ಡಾಕ್ಟರ್ ಭೀಮರಾವ್ ರಾಮಜಿ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ದಿನವಾದುದರಿಂದ ಇಂದು ಮಾಂಸ ಮಾರಾಟ ಕೇಂದ್ರಗಳನ್ನ ಬಂದ್ ಮಾಡಲು ಸೂಚಿಸಲಾಗಿದೆ. ಅದರಂತೆ ಬಹುತೇಕ ಮಾಂಸದಂಗಡಿಗಳು ಬಙದ್ ಆದರೂ ಗೋಮಾಂಸ ಮಾರಾಟದ ಅಂಗಡಿಗಳ ಬಾಗಿಲು ತೆರದು ಬಿಂದಾಸ್ ಆಗಿ ಹೋಟೆಲ್ ನಡೆಸಲಾಗುತ್ತಿದೆ ಎಂದು ಹಿಂಜಾವೇ ಜಿಲ್ಲಾ ಸಂಚಾಲಕ ದೇವರಾಜ್ ಅರಳಹಳ್ಳಿ ಆಕ್ಷೇಪಿಸಿದ್ದಾರೆ.

ಗೋ ಹತ್ಯೆ ಕಾನೂನು ಉಲ್ಲಂಘನೆ ಮಾಡುತ್ತಿರುವುದು ಕಾನೂನಿನ ಭಯವಿಲ್ಲದಂತಾಗಿದೆ ಎಂಬುದು ಎದ್ದು ಕಾಣುತ್ತಿದೆ. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಜಾಗೃತ ಹಿಂದೂ ಸಮಾಜ ದೊಡ್ಡ ಮಟ್ಟದಲ್ಲಿ ಗೋ ಹತ್ಯೆ ವಿರುದ್ಧ ಜನಜಾಗೃತಿ ಜನಂದೋಲನ ಚಳುವಳಿಯನ್ನು ಏರ್ಪಡಿಸಲಾಗುತ್ತದೆ.

ಗೋ ಹಂತಕರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಭದ್ರಾವತಿಯಲ್ಲಿ ನಡೆಯುತ್ತಿರುವ ಅಕ್ರಮ ಗೋಹತ್ಯೆ. ಗೋ ಮಾಂಸದ ಹೋಟೆಲ್ಗಳ ಹೊಣೆಯನ್ನು ಭದ್ರಾವತಿ ನಗರಸಭೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.‌

ಇದನ್ನೂ ಓದಿ-https://suddilive.in/archives/12792

Related Articles

Leave a Reply

Your email address will not be published. Required fields are marked *

Back to top button