ಕ್ರೈಂ ನ್ಯೂಸ್

ಟಾರ್ಗೆಟ್ ಗೋಕುಲ್…!?

ಸುದ್ದಿಲೈವ್/ಭದ್ರಾವತಿ

ನಿನ್ನೆ ಬಿಜೆಪಿ ಕಾರ್ಯಕರ್ತನ ಕಾರಿನ ಮೇಲೆ ಅಟ್ಯಾಕ್ ಮಾಡಿದ ಕಿಡಿಗೇಡಿಗಳು ಇಂದು ಆತನ ಮೇಲೆ ನೇರವಾಗಿ ಹಲ್ಲೆ ಮಾಡಿದ್ದಾರೆ. ಭದ್ರಾವತಿ ಬಿಜೆಪಿ ಕಾರ್ಯಕರ್ತ ಗೋಕುಲ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಆತನ ಹಣೆಯಿಂದ ರಕ್ತ ಸೋರುತ್ತಿದ್ದು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಾಸಕರ ವಿರುದ್ಧ ಫೇಸ್ ಬುಕ್ ನಲ್ಲಿ ಓಸಿ‌, ಮಟ್ಕಾ‌, ಕ್ರಿಕೆಟ್ ದಂಧೆ ನಿಲ್ಲಿಸಿ ಕಾರ್ಖಾನೆಯನ್ನ ಆರಂಭಿಸಿ, ಯುವಕರ ಕೈಗೆ ಕೆಲಸ ಕೊಡಿ ಸೋಷಿಯಲ್ ಮೀಡಿಯಾದಲ್ಲಿ ಶಾಸಕರ ವಿರುದ್ಧ ಗೋಕುಲ್ ಪೋಸ್ಟ್ ಮಾಡಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಎಂಪಿಎಂ ಕಾರ್ಖಾನೆ ಆರಂಭಿಸುತ್ತೇನೆ, ಇಲ್ಲದಿದ್ದರೆ, ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದ ಶಾಸಕರಿಗೆ ಸಾಮಾಜಿಕ ಜಾಲತಾಣದಲ್ಲಿ ಟಾಂಗ್ ನೀಡಿದ ಗೋಕುಲ್ ಕೃಷ್ಣನ್ ನ ಕಾರನ್ನ ನಿನ್ನೆ ಪುಡಿ ಪುಡಿ ಮಾಡಲಾಗಿತ್ತು.

ನಿನ್ನೆ ಸಂಜೆ ಸಂಧಾನ ನಡೆಸಲು ಹೋಟೆಲ್ ಒಂದಕ್ಕೆ ಗೋಕುಲ್ ಹೋದಾಗ ಹಲ್ಲೆ ನಡೆದಿದೆ. ಕಿವಿ ತಲೆಯ ಮೇಲೆ ಗೋಕುಲ್ ಗೆ ಹಲ್ಲೆ ನಡೆಸಲಾಗಿದೆ. ಈ ಪ್ರಕರಣ ದೂರು  ಪ್ರತಿದೂರು ದಾಖಲಾಗಿದೆ. ಗೋಕುಲ್ ರನ್ನ‌ ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿದೆ.

ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸ್ಪಿ ಮಿಥುನ್ ಈ ಪ್ರಕರಣವನ್ನ ಎಫ್ಐಆರ್ ದಾಖಲಿಸಲಾಗಿದೆ. ಪ್ರಕರಣ ತನಿಖೆ ಹಂತದಲ್ಲಿ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದರು.

ಇದನ್ನೂ ಓದಿ-https://suddilive.in/archives/4665

Related Articles

Leave a Reply

Your email address will not be published. Required fields are marked *

Back to top button