ಕ್ರೈಂ ನ್ಯೂಸ್

ಮಲ್ಟಿ ಕಾರ್ ಪಾರ್ಕಿಂಗ್ ಕಟ್ಟಡ- ಕಾರ್ಮಿಕನ ಮೇಲೆ ಉರುಳಿ ಬಿದ್ದ ಗೇಟ್

ಸುದ್ದಿಲೈವ್/ಶಿವಮೊಗ್ಗ

ನಗರದ ಹಳೇ ಹೂವಿನ ಮಾರುಕಟ್ಟೆಯಲ್ಲಿ ನಿರ್ಮಣವಾಗುತ್ತಿರುವ  ಮಲ್ಟಿ ಕಾರ್ ಪಾರ್ಕಿಂಗ್ ಕಟ್ಟಡದ ಮುಂಭಾಗದಲ್ಲಿನ ಗೇಟೊಂದು ಕಾರ್ಮಿಕನ ಮೈಮೇಲೆ ಬಿದ್ದಿದ್ದು  ಕಾರ್ಮಿಕನೋರ್ವನಿಗೆ ಗಾಯಗಳಾಗಿರುವ ಘಟನೆ ವರದಿಯಾಗಿದೆ.

ಮಲ್ಟಿ ಕಾರ್ ಪಾರ್ಕಿಂಗ್ ಕಟ್ಟಡ ಲೋಕಾರ್ಪಣೆಗೆ ಸಜ್ಜುಗೊಂಡಿದೆ. ಈ ವೇಳೆ ಸಣ್ಣಪುಟ್ಟ ಕಾಮಗಾರಿಗಳು ನಡೆಯುತ್ತಿದೆ. ಬಿಎಹೆಚ್ ರಸ್ತೆ ಕಡೆಯಿಂದ ಪ್ರವೇಶವಿರುವ ಗೇಟ್ ನ್ನ ವರೆಸುವಾಗ  ಕಾರ್ಮಿಕನ ಮೇಲೆ ಗೇಟೇ ಉರುಳಿ ಬಿದ್ದಿದೆ. ಇವಿಷ್ಟು ಪ್ರಾಥಮಿಕ ವರದಿಯಾಗಿವೆ.  ಅದರಂತೆ ನಿನ್ನೆಯೂ ಸಹ ಅಂಡರ್ ಪಾಸ್ ನ ಗೇಟು ಉರುಳಿ ಬಿದ್ದಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ನಿನ್ನೆ ಗೇಟು ಉರುಳಿ ಬಿದ್ದಿದ್ದು ಮತ್ತು ಆದ ನೋವುಗಳ ಬಗ್ಗೆ ಯಾವುದೇ ವರದಿಯಾಗಿಲ್ಲ.

ಗೇಟು ಉರಳಿ ಬಿದ್ದ ಪರಿಣಾಮ ಗಾಯಗೊಂಡ ಕಾರ್ಮಿಕನನ್ನ ಶಿವಪ್ಪ ಎಂದು ಹೇಳಲಾಗುತ್ತಿದೆ. ಇವರಿಗೆ ಸುಮಾರು 50 ವರ್ಷವಾಗಿದೆ. ತಕ್ಷಣವೇ ಅವರನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಶಿವಪ್ಪರಿಗೆ ಕಾಲಿಗೆ ಮತ್ತು ಸ್ವಲ್ಪ ಪ್ರಮಾಣದಲ್ಲಿ ತಲೆಗೂ ಹೊಡೆತಬಿದ್ದಿದ್ದು, ಸಧ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಹೇಳಲಾಗುತ್ತಿದೆ. ಶಿವಪ್ಪ ಹುಬ್ಬಳ್ಳಿಯ ಕುಂದಗೋಳ ಗ್ರಾಮದವರಾಗಿದ್ದಾರೆ. ಇವರ ಮಗಳು ಸಹ ಕುಂದಗೋಳದಲ್ಲಿ ಪೊಲೀಸ್ ಎಂದು  ಹೇಳಲಾಗುತ್ತಿದೆ.‌

25 ಕೋಟಿಯ ಕಟ್ಟಡ

ಈ ಕಟ್ಟಡದಲ್ಲಿ 10 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡ ನಿರ್ಮಾಣಗೊಂಡಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಈ ಮಲ್ಟಿ ಲೆವೆಲ್ ಪಾರ್ಕಿಂಗ್ ವ್ಯವಸ್ಥೆ ನಿರ್ಮಿಸಲಾಗಿದ್ದು, ಒಟ್ಟು 25 ಕೋಟಿ ರೂ. ವೆಚ್ಚದ ಈ ಕಟ್ಟಡದಲ್ಲಿ ಒಟ್ಟು 172 ಕಾರುಗಳು ಮತ್ತು ಸುಮಾರು 80 ಬೈಕ್‌ಗಳನ್ನು ನಿಲ್ಲಿಸಲು ಅವಕಾಶವಿದೆ. ಕಟ್ಟಡದ ಬೇಸ್‌ಮೆಂಟ್‌ನಲ್ಲಿ ಬೈಕ್ ಹಾಗೂ 43 ಕಾರ್‌ಗಳ ಪಾರ್ಕಿಂಗ್‌ಗೆ ಜಾಗ ನೀಡಲಾಗಿದೆ. ಕಾರ್ ಮತ್ತು ಬೈಕ್ ಪಾರ್ಕಿಂಗ್‌ಗೆ ಪ್ರತ್ಯೇಕ ದರ ನಿಗದಿಯಾಗಲಿದ್ದು, ಮಹಾನಗರ ಪಾಲಿಕೆ ಇದನ್ನು ನಿರ್ವಹಿಸಲಿದೆ.

ಇದನ್ನೂ ಓದಿ-https://suddilive.in/archives/7842

Related Articles

Leave a Reply

Your email address will not be published. Required fields are marked *

Back to top button