ಕ್ರೈಂ ನ್ಯೂಸ್

ಬೆಟ್ಟಮಕ್ಕಿ-ಕಿತ್ತನಗದ್ದೆ ರಸ್ತೆಯಲ್ಲಿ ಹಿಟ್ ಅಂಡ್ ರನ್-ಮಾನವೀಯತೆ ಮೆರೆದ ಯುಕರು

ಸುದ್ದಿಲೈವ್/ತೀರ್ಥಹಳ್ಳಿ

ಕೂಲಿ ಕಾರ್ಮಿಕರಿಗೆಗುದ್ದಿದ ಓಮಿನಿ ವಾಹನವೊಂದು ಹಿಟ್ ಅಂಡ್ ರನ್ ಮಾಡಿದ್ದ ಘಟನೆ ತಾಲೂಕಿನ ಬೆಟ್ಟಮಕ್ಕಿ ಕಿತ್ತನಗದ್ದೆ ರಸ್ತೆಯಲ್ಲಿ ನಡೆದಿದೆ. ಗಾಯಗೊಂಡ ಮಗು ಮತ್ತು ತಾಯಿಗೆ ಜೆಸಿ ಅಸ್ಪತ್ರೆಗೆ ಸೇರಿಸಿ ಸ್ಥಳೀಯರು ಮಾನವೀಯತೆ ಮೆರೆದಿದ್ದಾರೆ.

ತಾಲೂಕಿನ ಬೆಟ್ಟಮಕ್ಕಿ ಕಿತ್ತನಗದ್ದೆ ರಸ್ತೆಯಲ್ಲಿ ಓಮಿನಿ‌ ಕಾರೊಂದು ಮಣ್ಣು ಕೆಲಸಕ್ಕೆ ಚಿತ್ರದುರ್ಗದಿಂದ ಬಂದಿರುವ ಕೂಲಿ ಕಾರ್ಮಿಕ ಕುಟುಂಬಕ್ಕೆ ಡಿಕ್ಕಿ ಹೊಡೆದು ಹಿಟ್ ಅಂಡ್ ರನ್ ಘಟನೆಗೆ ಕಾರಣವಾಗಿತ್ತು. ತಾಯಿ ಮತ್ತು ಮಗು ಈ ಘಟನೆಯಲ್ಲಿ ಗಾಯಗೊಂಡಿದ್ದರು.

ಅದೇ ಮಾರ್ಗದಲ್ಲಿ ತೀರ್ಥಹಳ್ಳಿ ಆರ್ಯ ಈಡಿಗರ ಸಂಘದ ಕಸಬಾ ಹೋಬಳಿ ಚುನಾವಣೆ ಭಾನುವಾರ ನಡೆಯಲಿದ್ದು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ  ಅಭ್ಯರ್ಥಿಗಳಾದ ಕುರುವಳ್ಳಿ ನಾಗರಾಜ್ ಹಾಗೂ ಹೊದಲ ಶಿವು ಬರುತ್ತಿದ್ದು ಮಾನವೀಯತೆ ಮೆರೆದಿದ್ದಾರೆ.‌

ಗಾಯಗೊಂಡ ತಾಯಿ ಮಗುವನ್ನ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/7581

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373