ರಾಗಿಗುಡ್ಡದ ಗಲಭೆ ಪ್ರಕರಣದಲ್ಲಿ ನಿಷೇಧಿತ ಪಿಎಫ್ಐ ಸಂಘನೆಯ ಕಾರ್ಯಕರ್ತರ ಕೈವಾಡದ ಶಂಕೆ

ಸುದ್ದಿಲೈವ್/ಶಿವಮೊಗ್ಗ

ಅ.01 ರಂದು ಶಿವಮೊಗ್ಗದ ರಾಗಿಗುಡ್ಡದಲ್ಲಿ ಕಲ್ಲು ತೂರಾಟ ಪ್ರಕರಣದಲ್ಲಿ ಗಲಭೆಗೆ ಪ್ರಚೋದನೆ ನೀಡಿದವರು ನಿಷೇಧಿತ ಪಿಎಫ್ಐ ಸಂಘಟನೆಯ ಕಾರ್ಯಕರ್ತರು ಎಂಬ ಶಂಕೆ ವ್ಯಕ್ತವಾಗುತ್ತಿದೆ.
ರಾಗಿಗುಡ್ಡದ 27 ಪ್ರಕರಣಗಳು ದಾಖಲಾಗಿದ್ದು, ಅ.7 ರಂದು ಶಿಕ್ಷಕ ಪ್ರಸನ್ನ ಕುಮಾರ್ ಮತ್ತೋರ್ವ ಮಹಿಳೆಯಿಂದ ದೂರು ದಾಖಲಾಗಿದ್ದು ಇದರಿಂದ 29 ಕ್ಕೆ ಎಫ್ಐಆರ್ ಸಂಖ್ಯೆ ಏರಿಕೆಯಾಗಿವೆ. ನಿಷೇಧಿತ ಪಿಎಫ್ ಐ ಕಾರ್ಯಕರ್ತರ ಕೈವಾಡದ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.
ಪೊಲೀಸರ ತನಿಖೆ ವೇಳೆ ನಿಷೇಧಿತ ಪಿಎಫ್ಐ ಕಾರ್ಯಕರ್ತರ ಹೆಸರು ಹೇಳಿರುವುದಾಗಿ ತಿಳಿದುಬಂದಿದೆ. ತನಿಖೆ ವೇಳೆ ಒಟ್ಟು 8 ಜನ ನಿಷೇಧಿತ ಪಿಎಫ್ಐ ಕಾರ್ಯಕರ್ತರ ಹೆಸರನ್ನ ಬಂಧಿತರು ಬಾಯಿಬಿಟ್ಟಿರುವುದಾಗಿ ತಿಳಿದುಬಂದಿದೆ.
ಮೌಸೀನ, ನಬಿ @ ಡಿಚ್ಚಿ, ಮುಬಾರಕ್, ಇಮ್ರಾನ್, ಅಬ್ಜಲ್, ಅನ್ವರ್, ಹಿದಾಯತ್ ಮತ್ತು ಇರ್ಫಾನ್ ನಿಷೇಧಿತ ಪಿಎಫ್ಐ ಕಾರ್ಯಕರ್ತರಾಗಿದ್ದಾರೆ. ಬಹುತೇಕ ಎಫ್ಐಆರ್ ಗಳಲ್ಲಿ ಅರೊಪಿಗಳೆಂದು ಹೆಸರು ಉಲ್ಲೇಖವಾಗಿದೆ. ಈಗಾಗಲೇ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನ ಚುರುಕುಗೊಳಿಸಿದ್ದಾರೆ.
ಈ ಏಳು ಜನರು ಪಿಎಫ್ಐ ಬ್ಯಾನ್ ಆಗ್ತಿದ್ದಂತೆ ಮತ್ತೊಂದು ರಾಜಕೀಯ ಸಂಘಟನೆಯಲ್ಲಿ ಸಕ್ರಿಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ರಾಗಿಗುಡ್ಡ ಗಲಭೆ ವೇಳೆ ಯುವಕರಿಗೆ ಪ್ರಚೋದನೆ ನೀಡಿರುವುದಾಗಿ ಹೇಳಲಾಗುತ್ತಿದೆ. ಸ್ಥಳೀಯ ಯುವಕರಿಗೆ ಉದ್ರಿಕ್ತರಾಗುವಂತೆ ಪ್ರೇರೆಪಿಸಿರುವ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪಿಎಫ್ಐ ಸಂಘಟನೆ ನಿಷೇಧಿತಗೊಳ್ಳುತ್ತಿದ್ದಂತೆ ಮನ್ಸೂರ್ ಎಂಬ ವ್ಯಕ್ತಿಯನ್ನ ಜಿಲ್ಲೆಯಿಂದಲೇ ಗಡಿಪಾರಾಗಿದ್ದನು. ಗಡಿಪಾರಾಗಿದ್ದ ವ್ಯಕ್ತಿ ವಾಟ್ಸಪ್ ಮೂಲಕ ಈ ಸಂಪರ್ಕವಿದ್ದನು ಎಂಬ ಮಾಹಿತಿ ಲಭ್ಯವಾಗಿದೆ.
ಗಲಾಟೆ ವಿಕೋಪಕ್ಕೆ ತಲುಪಿದ ಬೆನ್ನಲ್ಲೇ 8 ಜನ ನಿಷೇಧಿತ ಪಿಎಫ್ಐ ಕಾರ್ಯಕರ್ತರು ತಲೆಮರೆಸಿಕೊಂಡಿರುವುದಾಗಿ ತಿಳಿದುಬಂದಿದೆ. ತಲೆಮರೆಸಿಕೊಂಡಿದ್ದ 8 ಜನರಲ್ಲಿ ಕೆಲವರನ್ನು ವಶಕ್ಕೆ ಪೊಲೀಸರು ಈಗಾಗಲೇ ಹಿದಾಯತ್ ನನ್ನ ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಉಳಿದ ನಾಲ್ವರ ಬಂಧನಕ್ಕೆ ಪ್ರತ್ಯೇಕ ತಂಡ ರಚಿಸಿ ಶೋಧಕಾರ್ಯ ನಡೆಯುತ್ತಿದೆ. ಇವರ ಶೋಧಕಾರ್ಯಕ್ಕೆ 2 ವಿಶೇಷ ತಂಡ ರಚಿಸಿ, ಶಿವಮೊಗ್ಗ ಪೊಲೀಸರ ಕಾರ್ಯಾಚರಣೆ ಆರಂಭಿಸಿದ್ದಾರೆ.
ಇದನ್ನೂ ಓದಿ-https://suddilive.in/archives/1245
