ಕ್ರೈಂ ನ್ಯೂಸ್

ವಿದ್ಯುತ್ ಅವಘಢದಿಂದ ಬಾಲಕನ ಕೈ ಮತ್ತು ಕಾಲು ಬೆರಳು ಕಟ್

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಹೊಸಜೋಗದ ಜಮೀನೊಂದರಲ್ಲಿ ಟ್ರ್ಯಾಕ್ಟರ್ ಮೇಲೆ ಕುಳಿತಿದ್ದ ಬಾಲಕನಿಗೆ ವಿದ್ಯುತ್ ಹರಿದು ಕೈ ಮತ್ತು ಕಾಲು ಬೆರಳು ಕಳೆದುಕೊಂಡಿದ್ದಾನೆ. ಮೆಸ್ಕಾಂ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಅವಘಡದಿಂದ ನರಳುತ್ತಿರುವ ಬಾಲಕನ ತಾಯಿ ಕಣ್ಣೀರಿಟ್ಟಿದ್ದಾಳೆ.

ಸುದ್ದಿಲೈವ್/ಶಿವಮೊಗ್ಗ

ಜಮೀನಿನಲ್ಲಿ ಹಾದುಹೋಗಿರುವ ವಿದ್ಯುತ್ ವೈಯರ್ ತಾಗಿ ಟ್ರ್ಯಾಕ್ಟರ್ ಮೇಲಿದ್ದ ಬಾಲಕನ ಕೈ ಮತ್ತು ಕಾಲಿನ ಬೆರಳನ್ನ ಬಾಲಕ ಕಳೆದುಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ ನಡೆದಿದೆ. ಕಳೆದ ಒಂದು ತಿಂಗಳಿಂದ ಮೆಗ್ಗಾನ್ ನಲ್ಲಿ ಬಾಲಕ ನರಳುತ್ತಿದ್ದಾನೆ.

ಬೆಸ್ಕಾಂ ನಿರ್ಲಕ್ಷ್ಯಕ್ಕೆ ಬಾಲಕ ಕೈ ಹಾಗೂ ಕಾಲಿನ ಬೆರಳು ಕಳೆದುಕೊಂಡಿದ್ದಾನೆ. ಕಳೆದ ಒಂದು ತಿಂಗಳಿಂದ ಗಾಯಾಳು ಬಾಲಕನಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯುತ್ ಶಾಕ್ ಗೆ ಒಳಗಾಗಿ  ಬಾಲಕ ಗಂಭೀರವಾಗಿ ಗಾಯಗೊಂಡಿದ್ದನು.

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಹೊಸಜೋಗ ಮೂಲದ ಬಾಲಕ ದಿಲೀಪ್(11) ಮೆಗ್ಗಾನ್ ಆಸ್ಪತ್ರೆಯಲ್ಲಿ ಬಾಲಕ ಚಿಕಿತ್ಸೆ ಪಡೆಯುತ್ತಿದ್ದಾನೆ. ದಿ. ಗಣೇಶ್ ಹಾಗೂ ರತ್ನಾ ಬಾಯಿ ಯವರ ಪುತ್ರ ದಿಲೀಪ್ ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್ ತಾಗಿ ಗಾಯಗೊಂಡಿದ್ದನು.

ಕಳೆದ ಡಿಸೆಂಬರ್ 3 ರಂದು ಟ್ರಾಕ್ಟರ್ ಮೇಲೆ ಕುಳಿತಿದ್ದ ಬಾಲಕನಿಗೆ ವಿದ್ಯುತ್ ಲೈನ್ ತಾಗಿದೆ.‌ಕೆಳಮಟ್ಟದಲ್ಲಿ ಹಾದು ಹೋಗಿದ್ದ ಲೈನ್ ಸರಿಪಡಿಸದೇ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಹಲವು ಬಾರಿ ಮನವಿ ಮಾಡಿದ್ರೂ, ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಂಡಿರದ ಕಾರಣ ಬಾಲಕ ನರಳುವಂತಾಗಿದೆ ಎಂದು ಆರೋಪಿಸಲಾಗಿದೆ.

ಘಟನೆ ನಂತರ ತರಾತುರಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಲೈನ್ ಸರಪಡಿಸಿರುವುದಾಗಿ ಕುಟುಂಬ ಆರೋಪಿಸಿದೆ. ಎಫ್ಐಆರ್ ನಲ್ಲೂ ತಪ್ಪಿತಸ್ಥ ಬೆಸ್ಕಾಂ ಅಧಿಕಾರಿಗಳ ಹೆಸರು ನಾಪತ್ತೆ ಎಂದು ದೂರು ದಾಖಲಾಗಿದೆ ಎಂದು ಹೇಳಲಾಗಿದೆ.

ಬೆಸ್ಕಾಂ ಮತ್ತು ಪೊಲೀಸರ ನಿರ್ಲಕ್ಷ್ಯಕ್ಕೆ ಪೋಷಕರು  ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದು ತಿಂಗಳಾದ್ರೂ ತಿರುಗಿ ನೋಡದ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಮಗನ ಮುಂದಿನ ಬದುಕು ಹೇಗೆ ಎಂದು ತಾಯಿ ರತ್ನಾಬಾಯಿ ಕಣ್ಣೀರು ಹಾಕಿದ್ದಾರೆ.

ಮಗನ ಚಿಕಿತ್ಸೆ ಹಾಗೂ ಮುಂದಿನ ಜೀವನಕ್ಕೆ ನೆರವು ನೀಡಲು ತಾಯಿಯ ಆಗ್ರಹಿಸಿದೆ.

ಇದನ್ನೂ ಓದಿ-https://suddilive.in/archives/6457

Related Articles

Leave a Reply

Your email address will not be published. Required fields are marked *

Back to top button