ರಾಜಕೀಯ ಸುದ್ದಿಗಳು

ಕಾಂಗ್ರೆಸ್ ನ ಬೆರೆಕೆ ರಕ್ತ ಶೆಟ್ಟರ್ ಗೆ ಆಗಬರೊಲ್ಲ-ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ಕರ್ಪೂರಿ ಠಾಕೂರ್ ಗೆ ಭಾರತ ರತ್ನ ಪ್ರಶಸ್ತಿ ನೀಡಿರುವ ಕೇಂದ್ರ ಸರ್ಕಾರಕ್ಕೆ ಮತ್ತು ಠಾಕೂರು ಕುಟುಂಬಕ್ಕೆ ಅಭಿನಂದಿಸುವುದಾಗಿ ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾತಿ ಜನಗಣಿಯ ವರದಿ 9 ವರ್ಷದಿಂದ ಪ್ರತಿ ವರ್ಷ ನೆಪ ಹೇಳಿಕೊಂಡು ಬಂದಿದ್ದೀರಿ. ಹಿಂದುಳಿದ ವರ್ಗಗಳ ಆಯೋಗಗಳ ಅಧ್ಯಜ್ಷ ಜಯಪ್ರಕಾಶ್ ಹೆಗ್ಡೆ ಸರ್ಕಾರ ಪುರುಸೊತ್ತು ಮಾಡಿಕೊಕೊಂಡು ಕೇಳಿದರೆ ವರದಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ನಾನು ಹಿಂದುಳಿದ ವರ್ಗದ ನಾಯಕ ಎಂದು ಹೇಳಿ ಮುಂದುವರೆದ ಜನಾಂಗದವರೊಂದಿಗೆ ಸಂಘರ್ಷ ಮಾಡಿಕೊಂಡು ಸಿದ್ದರಾಮಯ್ಯ ಬಂದಿದ್ದಾರೆ. ಕಾಂತರಾಜು ವರದಿಯನ್ನ‌ಜಾರಿ ಗೊಳಿಸದಂತೆ ಒಕ್ಕಲಿ ಮತ್ತು ಲಿಂಗಾಯತ ಸಮುದಾಯ ಬೇಡ ಎಂದಿದ್ದಾರೆ ಹಿಂದೂಳಿದ ವರ್ಗದವರು ಬೇಕು ಎನ್ನುತ್ತಿದ್ದೀರಿ. ಸಿದ್ದರಾಮಯ್ಯ ಹಿಂದೂ ಸಮಾಜನ್ನ‌ ಒಡೆದು ಆಡಳಿತ ಮಾಡುತ್ತಿದ್ದಾರೆ.

ಈಗ ಚಿತ್ರದುರ್ಗ ಜಿಲ್ಲೆಯಲ್ಲಿ ಬೃಹತ್ ಸಮಾವೇಶ ಮಾಡಲು ಸಿದ್ದರಾಮಯ್ಯವರ ಚೇಲಗಳು ಓಡಾಡುತ್ತಿದ್ದಾರೆ. ಸಿದ್ದರಾಮಯ್ಯ ಸ್ಪಷ್ಟ ಪಡಿಸಬೇಕು. ಹೆಗ್ಡೆ ನಮ್ಮ‌ಬಳಿ ವರದಿ ರೆಡಿ ಇದೆ ಎಂದಿದ್ದಾರೆ. ಆದರೆ ಮೌನ ವಹಿಸಿದ್ದಾರೆ. ಸಿದ್ದರಾಮಯ್ಯ ತಮ್ಮ‌ನಿಲುವನ್ನ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಸುಳ್ಳು ಗ್ಯಾರೆಂಟಿಯ ಮೂಲಕ ಅಧಿಕಾರಕ್ಕೆ ಬಂದ್ರಿ ಸ್ವಾಗತ. ಬಿಜೆಪಿಯನ್ನ‌ಸರ್ವನಾಶ ಮಾಡುತ್ತೀವಿ ಎಂದು ಹೇಳಿದ್ದೀರಿ. ಒಬ್ಬನ್ನೂ ಕರೆಯಲಾಗಲಿಲ್ಲ. ಯತೀಂದ್ರ ಅಪ್ಪನ ಸೀಟು ಉಳಿಸಿಕೊಳ್ಳಲು ಹೆಚ್ಚು ಬಹುಮತವನ್ನಲೋಕಸಭಾದಲ್ಲಿ‌ಕೊಡಿ ಎಂದಿದ್ದಾರೆ. ನಿಮಗೆ ಗೊಂದಲವಿದೆ. ಹಾಗಾಗಿ ರಾಜ್ಯದ ಜನರ ಕ್ಷಮೆ ಕೇಳಬೇಕು. ನಮ್ಮ ಪಕ್ಷಕ್ಕೆ ಯಾರೂ ಬರಲಿಲ್ಲ ಎಂದು ಕ್ಷಮೆ ಕೇಳಬೇಕೆಂದರು.

ಇಂಡಿಯಾದ ಒಕ್ಕೂಟಕ್ಕೆ ಮಿತ್ರ ಪಕ್ಷಗಳು‌ಬರಲು ಇಷ್ಟಪಡುತ್ತಿಲ್ಲ. ಇದು ಒಡೆದು ಹೋಗುವ ಒಕ್ಕೂಟವಾಗಿದೆ. ಚುನಾವಣೆಯನ್ಬೇ ಎದುರಿಸೊಲ್ಲ. ರಾಷ್ಟ್ರ ಭಕ್ತ ಮತ್ತು ರಾಮಭಕ್ತರನ್ನ‌ಜನ ಅಧಿಕಾರಿಕ್ಕೆ ತರಲಾಗುತ್ತಿದೆ. ರಾಮನ ಬಗ್ಗೆ ಮತ್ತು ಪ್ರಧಾನಿ ಬಗ್ಗೆ ಹಗೂರವಾಗಿ ಮಾತನಾಡುತ್ತಿದ್ದಾರೆ. ಮಾಜಿ ಸಚಿವ ವೀರಪ್ಪ ಮೋಯ್ಲಿ ಗರ್ಭಗುಡಿಗೆ ಹೋಗೋದೆ ತಪ್ಪು ಎಂದಿದ್ದಾರೆ. ಖರ್ಗೆ ಇದನ್ನ ಸ್ಪಷ್ಟಪಡಿಸಬೇಕು. ಸಮಾಜವನ್ನ ಒಡೆಯುವ ಮೋಯ್ಲಿಯನ್ನ ವಜಾಗೊಳಿಸಬೇಕು. ಪ್ರಧಾನಿ 11 ದಿನ ಉಪವಾಸ ಮಾಡೇ ಇಲ್ಲ ಎಂದಿದ್ದಾರೆ ನಾಚಿಕೆಗೇಡು. ಮೋಯ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ರಾಮನ ಮಂದಿರ ಉದ್ಘಾಟನೆಯಲ್ಲಿ ಭಾಗಿಯಾಗುವ ಬಗ್ಗೆ 20 ದಿನ ತೆಗೆದುಕೊಂಡ ಕಾಂಗ್ರೆಸ್ ಗೊಂದಲದಲ್ಲಿದೆ ಇದೆ. ಗಾಂಧಿ ರಾಮ‌ಬೇಕು. ಗೋಡ್ಸೆ ರಾಮ ಬೇಡ ಎಂದು ಹೇಳುವ ಮೂಲಕ ಕಾಂಗ್ರೆಸ್ ಒಡೆದು ಆಳುವ ನೀತಿಯನ್ನ‌ಮುಂದುವರೆಸಿದ್ದಾರೆ.

ಸಿದ್ದರಾಮಯ್ಯ ನವರು ಜೈಶ್ರೀರಾಮ್ ಎಂದಿದ್ದಾರೆ. ಕೇಸರಿ ಪೇಟ ಹಾಕಿದಾಗ ಕಿತ್ತು ಎಸೆದ ಸಿದ್ದರಾಮಯ್ಯನವರಿಗೆ ರಾಮ ಇದ್ದಿದ್ದು ಗೊತ್ತಿರಲಿಲ್ಲವಾ? ಟಿಪ್ಪು ಎಂದು ಕೂಗುತ್ತಿದ್ದ ನಿಮಗೆ ರಾಮ ಶಿವ ನ ನೆನಪು ಈಗ ಬರ್ತಾ ಇದೆಯಾ? ಜನಜಾಗೃತಿಯಾದಾಗ ನಿಮಗೆ ಬುದ್ದಿ ಬಂದಿದೆಯಾ ಎಂದು ತಿಳಿ ಹೇಳಿದರು.

ರಾಮ ಬಿಜೆಪಿ ಅಪ್ಪನ ಆಸ್ತಿ ಅಲ್ಲ ಎಂದು ಡಿಕೆಶಿ ಹೇಳಿದ್ದಾರೆ. ಖಂಡಿತ ರಾಮ ನಮ್ಮ‌ಅಪ್ಪನ ಆಸ್ತಿ ಅಲ್ಲ. ಇಡೀ ದೇಶದ ಆಸ್ತಿಯಾಗಿದ್ದಾನೆ. ಕಾಂಗ್ರೆಸ್ ಗೆ ಪ್ರಭು ರಾಮನ ಬಗ್ಗೆ ಗೌರವಯುತವಾಗಿ ಮಾತನಾಡಲು ದಾರಿಗೆ ಬಂದಿದ್ದಕ್ಕೆ ಒಳ್ಳೆಯ ಬೆಳವಣಿಗೆ. ಕೋರ್ಟ್ ನಲ್ಲಿ ರಾಮನೇ ಇಲ್ಲ ಎಂದು ಅಫಿಡೇವಿಟ್ ಕೊಟ್ಟಿದ್ದರು. ಕಾಲ್ಪನಿಕ ರಾಮ ಎಂದಿದ್ದ ಕಾಂಗ್ರೆಸ್ ಈಗ ತಪ್ಪನ್ನ‌ ಒಪ್ಪಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ವಿಜ್ಞಾನಿಯಾಗಿದ್ದು ಯಾವಾಗ ಎಂದು ಪ್ರಶ್ನಿಸಿದ ಈಶ್ವರಪ್ಪ ರಾಮನನ್ನ ಒಬ್ಬನೇ ವಿಗ್ರಹ ನಿರ್ಮಿಸಲಾಗಿದೆ. ಬಾಲರಾಮ ಇರೋದು ಎಂಬುದು ಸಿದ್ದರಾಮಯ್ಯರಿಗೆ ಗೊತ್ತಾಗದೆ ಲಕ್ಷ್ಮಣ, ಸೀತೆ ಇಲ್ಕ ಎಂದು ಹೇಳಿದ್ದಾರೆ. ಇದಕ್ಕೆ ನಗಬೇಕೋ ಅಥವಾ ಅಳಬೇಕೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ವೀರಪ್ಪ ಮೊಯ್ಲಿ ಮಾಜಿ ಸಿಎಂ, ಡಿಸಿಎಂ ಮತ್ತು ಸಿಎಂ ರಾಮನ ಬಗ್ಗೆ ಸ್ಪಷ್ಟನೆ ನೀಡಲಿ. ಎನ್ ರಾಜಣ್ಣ ಜಿಲ್ರೆ ಮನುಷ್ಯ ಉತ್ತರಿಸೊಲ್ಲ ಎಂದರು.

ಕಾಂಗ್ರೆಸ್ ನ ಬೆರೆಕೆ ರಕ್ತ ಶೆಟ್ಟರ್ ಗೆ ಒಗ್ಗಲ್ಲ

ಜಗದೀಶ್ ಶೆಟ್ಟರ್ ಘರ್ ವಾಪ್ಸಿ ಆಗಲಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್,  ಎಂಎಲ್ ಸಿಗೆ ರಾಜೀನಾಮೆ ಕೊಡುತ್ತಿರುವುದು ಗೊತ್ತಿಲ್ಲ. ಕಾಂಗ್ರೆಸ್ ನ ಬೆರಕೆ ರಕ್ತ ಶೆಟ್ಟರ್ ಒಗ್ಗಲ್ಲ ಎಂದಿದ್ದರು‌. ಈಶ್ವರಪ್ಪನವರ ಹೇಳಿಕೆಯ ವೇಳೆ ಪ್ರತಿಕ್ರಿಯೆ ನಡೆಯುತ್ತಿತ್ತು. ನೀವು ಇವತ್ತಲ್ಲ ನಾಳೆ ಬಿಜೆಪಿಗೆ ಬರ್ತೀರಿ. ಸಂಸ್ಕರವಂತ ಶೆಟ್ಟರ್ ಅರ್ಜೆಂಟಾಗಿ ನಿರ್ಧರಿಸಿದ್ದಾರೆ. ಅವರು ಬರುವ‌ನಿರೀಕ್ಷೆ ಇದೆ. ಬಿಜೆಪಿಯಿಂದ ಕಾಂಗ್ರೆಸ್ ಗೆ ಬರುವ ಒಂದು ಹುಳ ತೋರಿಸಲಿ ಎಂದು ಡಿಸಿಎಂ ಸಿಎಂ ತೋರಿಸಲಿ ಎಂದರು. ಈಗ ಶೆಟ್ಟರ್ ದೆಹಲಿಯಲ್ಲಿ ಬಿಜೆಪಿ ಕೈಹಿಡಿದಿದ್ದಾರೆ.

ಇದನ್ನೂ ಓದಿ-https://suddilive.in/archives/7664

Related Articles

Leave a Reply

Your email address will not be published. Required fields are marked *

Back to top button